Optical Illusion: ನಿಮ್ಮ ಸೂಕ್ಷ್ಮತೆ ಹಾಗೂ ಬುದ್ಧಿವಂತಿಕೆಗೊಂದು ಸವಾಲು; ಚಿತ್ರದಲ್ಲಿ ಗೌಪ್ಯವಾಗಿರುವುದನ್ನು ಪತ್ತೆಹಚ್ಚಿ

ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಗೌಪ್ಯವಾಗಿರುವ ಅಂಶವನ್ನು ಪತ್ತೆಹಚ್ಚಬೇಕು. ಈ ಅಂಶವನ್ನು ಪತ್ತೆಹಚ್ಚುವ ಮೂಲಕ ನೀವು ನಿಮ್ಮ ಕಣ್ಣಿನ ಹಾಗೂ ಬುದ್ಧಿಯ ಸೂಕ್ಷ್ಮತೆಯನ್ನು ಪರೀಕ್ಷಿಸಿಕೊಳ್ಳಬಹುದು.

Optical Illusion: ನಿಮ್ಮ ಸೂಕ್ಷ್ಮತೆ ಹಾಗೂ ಬುದ್ಧಿವಂತಿಕೆಗೊಂದು ಸವಾಲು; ಚಿತ್ರದಲ್ಲಿ ಗೌಪ್ಯವಾಗಿರುವುದನ್ನು ಪತ್ತೆಹಚ್ಚಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jul 29, 2022 | 12:40 PM

ಆಪ್ಟಿಕಲ್ ಇಲ್ಯೂಷನ್ (Optical Illusion) ಪರೀಕ್ಷೆಗಳು ಅಂದರೆ ಹಾಗೆನೇ, ಚಿತ್ರದಲ್ಲಿ ಗುಪ್ತವಾಗಿರುವ ಇನ್ನೊಂದು ಚಿತ್ರವನ್ನು ಕಂಡುಹಿಡಿಯಲು ಕ್ಷಣಿಕದಲ್ಲೇ ಸಾಧ್ಯವಿಲ್ಲ. ಆಳವಾಗಿ, ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಚಿತ್ರದ ನಡುವೆ ಅಡಗಿರುವ ಮತ್ತೊಂದು ಚಿತ್ರವನ್ನು ಪತ್ತೆಹಚ್ಚಬಹುದು. ಇದೀಗ ಅಂತಹದ್ದೇ ಒಂದು ಚಿತ್ರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಕೇವಲ 6 ಸೆಕೆಂಡುಗಳವರೆಗೆ ಗಮನಿಸಿ ಅದರಲ್ಲಿ ಏನನ್ನು ನೋಡಿದ್ದೀರಿ ಎಂಬುದನ್ನು ಹೇಳಬೇಕು. ಈ ಸವಾಲನ್ನು ಒಂದಷ್ಟು ಮಂದಿ ಗೆದ್ದುಕೊಂಡರೆ ಇನ್ನೊಂದಷ್ಟು ಮಂದಿ ಶೇ.50ರಷ್ಟು ಮಾತ್ರ ಸರಿಯಾಗಿ ಗಮನಿಸಿದ್ದಾರೆ. ಈಗ ನಿಮ್ಮ ಸರದಿ. ಈ ಕೆಳಗಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ ಏನನ್ನು ನೋಡಿದ್ದೀರಿ ಎಂದು ಹೇಳಿ. ನೆನಪಿರಲಿ ನಿಮ್ಮ ಬಳಿ ಇರುವುದು ಕೇವಲ 6 ಸೆಕೆಂಡ್​ಗಳು ಮಾತ್ರ.

ಜಾಗರಣಜೋಶ್

ನಿಮ್ಮ ಸಮಯ ಈಗ ಮುಗಿದಿದೆ. ಚಿತ್ರದಲ್ಲಿ ಶೂ, ಪ್ಯಾಂಟ್ ಹಾಕಿರುವ ಪುರುಷರ ಕಾಲುಗಳನ್ನು ಕಂಡಿದ್ದೀರಾ? ಹಾಗಿದ್ದರೆ ನೀವು ಶೇ.50ರಷ್ಟು ಗೆದ್ದಂತೆ. ನಿಗದಿತ ಸಮಯದಲ್ಲಿ ಅದೇ ಚಿತ್ರದಲ್ಲಿ ಗೌಪ್ಯವಾದ ಇನ್ನೊಂದನ್ನು ಗುರುತಿಸಿದ್ದರೆ ಮಾತ್ರ ನೀವು ಸವಾಲನ್ನು ಸಂಪೂರ್ಣವಾಗಿ ಗೆದ್ದುಕೊಂಡಂತೆ. ಗೌಪ್ಯವಾಗಿರುವುದನ್ನು ನೀವು ಪತ್ತೆಹಚ್ಚಲು ಸಾಧ್ಯವಾಗದೇ ಇದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಅದೇನೆಂದರೆ ಆ ಚಿತ್ರದಲ್ಲಿ ಮಹಿಳೆಯರ ಕಾಲುಗಳು ಕೂಡ ಇವೆ. ಬಿಳಿ ಬಣ್ಣದಲ್ಲಿರುವುದನ್ನು ಸರಿಯಾಗಿ ಗಮನಿಸಿದಾಗ ಈ ಅಂಶ ನಿಮ್ಮ ಗಮನಕ್ಕೆ ಬರುತ್ತದೆ.

ಜಾಗರಣಜೋಶ್

ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳು ಅನೇಕ ಬಾರಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಇದೊಂದು ಮೋಜಿನ ಸಂವಹನವನ್ನಾಗಿ ಬಳಕೆ ಮಾಡಲಾಗುತ್ತದೆ. ಅದೆಷ್ಟೋ ಜನರು ಬೇರೆ ಆಟಗಳಂತೆ ಇದರಲ್ಲೂ ಸೋಲುತ್ತಾರೆ ಮತ್ತು ಗೆಲ್ಲುತ್ತಾರೆ. ಈ ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಥವಾ ನಿಮ್ಮ ಸೂಕ್ಷ್ಮತೆಯ ಸಾಮರ್ಥ್ಯವನ್ನು ಅಳೆಯುವ ಪರೀಕ್ಷೆಯನ್ನು ನೀವು ಆನಂದಿಸಿದ್ದೀರಿ ಎಂದು ಭಾವಿಸುತ್ತೇವೆ.

Published On - 12:40 pm, Fri, 29 July 22