ತಿಮಿಂಗಲ ಮತ್ತು ಮೀನುಗಾರರ ನಡುವಿನ ಹೃದಯಸ್ಪರ್ಶಿ ಸಂವಹನ ಮನಸ್ಸಿಗೆ ಮುದ ನೀಡುತ್ತದೆ!

ಬಂಧನದಿಂದ ಮುಕ್ತಗೊಳ್ಳುವ ತಿಮಿಂಗಿಲ ನೀರಿನಲ್ಲಿ ಬೋರಲಾಗಿ ತನ್ನ ಬಾಲವನ್ನು ಪಟಪಟಾಂತ ಅಲ್ಲಾಡಿಸಿ ಸಮುದ್ರಾಳಕ್ಕೆ ಸ್ಯುಂಯ್ ಅಂತ ಹೋಗಿಬಿಡುತ್ತದೆ. ವಿಡಿಯೋ ಶೇರ್ ಆದ ಬಳಿಕ ಅದು 68,000 ಕ್ಕೂ ವ್ಯೂಗಳನ್ನು ಗಳಿಸಿದೆ ಮತ್ತು ನೂರಾರು ಜನ ಅದನ್ನು ಲೈಕ್ ಮಾಡುತ್ತಿದ್ದಾರೆ.

ತಿಮಿಂಗಲ ಮತ್ತು ಮೀನುಗಾರರ ನಡುವಿನ ಹೃದಯಸ್ಪರ್ಶಿ ಸಂವಹನ ಮನಸ್ಸಿಗೆ ಮುದ ನೀಡುತ್ತದೆ!
ಅಪ್ಲೋಡ್​ ಆಗಿರುವ ವಿಡಿಯೋದ ಸ್ಕ್ರೀನ್ ಗ್ರ್ಯಾಬ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2022 | 5:39 PM

ತಿಮಿಂಗಿಲವೊಂದು (whale) ತನ್ನ ದೇಹಕ್ಕೆ ಬಿಗಿದಿರುವ ಹಗ್ಗದಿಂದ ದಯವಿಟ್ಟು ಬಿಡಿಸಿ ಎಂಬರ್ಥದ ಯಾಚನೆಯೊಂದಿಗೆ ಮೀನುಗಾರರ (fishermen) ನಾವೆ ಬಳಿಗೆ ಬರುವ ಮತ್ತು ದಯಾಳು ಮೀನುಗಾರರು ತಮ್ಮಲ್ಲಿರುವ ಸಲಕರಣೆಗಳ ಸಹಾಯದಿಂದ ಬಹಳ ಸೂಕ್ಷ್ಮವೆನಿಸುವ ರೀತಿಯಲ್ಲಿ ಜಲಚರ ಪ್ರಾಣಿಯ ದೇಹಕ್ಕೆ ಸುತ್ತಿಕೊಂಡಿರುವ ಹಗ್ಗದಿಂದ ಮುಕ್ತ ಮಾಡುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ ಮಾರಾಯ್ರೆ.

‘ತನ್ನ ದೇಹಕ್ಕೆ ಬಿಗಿದಿರುವ ಹಗ್ಗದಿಂದ ಮುಕ್ತಗೊಳಿಸಿರಿ ಅಂತ ಮೀನುಗಾರರ ನಾವೆ ಹತ್ತಿರ ಹೋಗುವ ತಿಮಿಂಗಿಲ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶನಿವಾರ ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ.

ವಿಡಿಯೋನಲ್ಲಿ ಸುಂದರವಾದ ತಿಮಿಂಗಿಲವೊಂದು ಮೂರ್ನಾಲ್ಕು ಮೀನುಗಾರರಿರುವ ನಾವೆಯ ಬಳಿ ನಿಧಾನವಾಗಿ ಈಜುತ್ತಾ ಬರುವುದು ಕಾಣಿಸುತ್ತದೆ. ನಂತರ ಅದು ನೀರಿನ ಮೇಲ್ಭಾಗಕ್ಕೆ ಬಂದು ತನ್ನ ದೇಹದ ಸುತ್ತ ಹಗ್ಗ ಬಿಗಿದಿರುವುದರಿಂದ ಈಜುವುದು ಸಮಸ್ಯೆಯಾಗುತ್ತಿದೆ ಅನ್ನೋದನ್ನು ಮೀನುಗಾರರಿಗೆ ಪ್ರದರ್ಶಿಸುತ್ತದೆ.

ಅದರ ಸಂಕಟವನ್ನು ಮೀನುಗಾರರು ಅರ್ಥಮಾಡಿಕೊಳ್ಳುತ್ತಾರೆ. ಅವರಲ್ಲೊಬ್ಬ ತಾವು ಮೀನು ಹಿಡಿಯಲು ಬಳಸುವ ಹುಕ್ ನಂಥ ಸಲಕರಣೆಯಿಂದ ತಿಮಿಂಗಿಲಗೆ ಆರಾಮವಾಗಿ ಈಜಲು ತೊಂದರೆ ಮಾಡುತ್ತಿರುವ ಹಗ್ಗವನ್ನು ಮೇಲೆತ್ತಿ ಚಾಕುವಿನ ಹಾಗೆ ಕಾಣುವ ಉಪಕರಣವೊಂದರಿಂದ ಅದನ್ನು ಕಟ್ ಮಾಡುತ್ತಾನೆ.

ಬಂಧನದಿಂದ ಮುಕ್ತಗೊಳ್ಳುವ ತಿಮಿಂಗಿಲ ನೀರಿನಲ್ಲಿ ಬೋರಲಾಗಿ ತನ್ನ ಬಾಲವನ್ನು ಪಟಪಟಾಂತ ಅಲ್ಲಾಡಿಸಿ ಸಮುದ್ರಾಳಕ್ಕೆ ಸ್ಯುಂಯ್ ಅಂತ ಹೋಗಿಬಿಡುತ್ತದೆ. ವಿಡಿಯೋ ಶೇರ್ ಆದ ಬಳಿಕ ಅದು 68,000 ಕ್ಕೂ ವ್ಯೂಗಳನ್ನು ಗಳಿಸಿದೆ ಮತ್ತು ನೂರಾರು ಜನ ಅದನ್ನು ಲೈಕ್ ಮಾಡುತ್ತಿದ್ದಾರೆ.

ಮೀನುಗಾರರು ತಿಮಿಂಗಿಲಗೆ ಮಾಡಿದ ಸಹಾಯವನ್ನು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ. ಒಬ್ಬ ಯೂಸರ್ ನಮಗೆಲ್ಲ ಬೇಕಾಗಿರೋದೇ ಇದು; ಮಾನವರ ಪ್ರಕೃತಿಯತ್ತ ಸಹಾಯಹಸ್ತ ಚಾಚುವುದು. ಉದ್ದೇಶಪೂರ್ವಕವಾಗಿ ಯಾರೋ ಹಗ್ಗವನ್ನು ಸಮುದ್ರದಲ್ಲಿ ಬಿಟ್ಟಿರುತ್ತಾರೆ ಅಂತ ನಾನಂದುಕೊಳ್ಳುವುದಿಲ್ಲ. ಆದರೆ ಇಂಥದ್ದೇ ಸಮಸ್ಯೆಗೆ ಸಿಕ್ಕು ಯಾವುದಾದರೂ ಬೋಟಿನ ಬಳಿಗೆ ಹೋಗಿ ಸಹಾಯ ಪಡೆದುಕೊಳ್ಳಲಾಗದೆ ಸಾಯುವ ಪ್ರಾಣಿಗಳ ಬಗ್ಗೆ ಯೋಚಿಸಿ,’ ಅಂತ ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬ ಯೂಸರ್, ‘ಆ ಕೊನೆಯ ಅಲೆಯನ್ನೊಮ್ಮೆ ಗಮನಿಸಿ. ಇದ್ಯಾವುದೋ ಮತಿಭ್ರಮಣೆಯಾಗಿರುವ ಪ್ರಾಣಿ ಅಲ್ಲ. ಜಲಚರ ಪ್ರಾಣಿ ಮತ್ತು ಮಾನವರ ನಡುವಿನ ಈ ಸಂವಹನ ಅಮೋಘ, ಮನುಕುಲದ ನನ್ನ ಸಹೋದರರು ಪ್ರಾಣಿಯ ಜೊತೆಗೂ ಭ್ರಾತೃತ್ವ ಪ್ರದರ್ಶಿಸಿರುವುದು ಸಂತಸ ನೀಡಿದೆ,’ ಎಂದಿದ್ದಾರೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್