AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವಾಹನಗಳನ್ನು ನಿಲ್ಲಿಸಿ ಮಕ್ಕಳನ್ನು ರಸ್ತೆ ದಾಟಿಸಿದ ನಾಯಿ; ನೆಟ್ಟಿಗರ ಮನಗೆದ್ದ ಹೃದಯಸ್ಪರ್ಶಿ ವಿಡಿಯೋ

ಜನಬಿಡ ರಸ್ತೆಯಲ್ಲಿ ಬೊಗಳುತ್ತಾ ವಾಹನಗಳನ್ನು ನಿಲ್ಲಿಸಿ ಮಕ್ಕಳನ್ನು ರಸ್ತೆ ದಾಟಿಸಿದ ಮುದ್ದಾದ ನಾಯಿಯ ವಿಡಿಯೋ ವೈರಲ್ ಅಗುತ್ತಿದೆ. ಈ ವಿಡಿಯೋ ನೋಡಿದರೆ ನೀವು ಕೂಡ ಫಿದಾ ಆಗುವುದು ಖಚಿತ.

Viral Video: ವಾಹನಗಳನ್ನು ನಿಲ್ಲಿಸಿ ಮಕ್ಕಳನ್ನು ರಸ್ತೆ ದಾಟಿಸಿದ ನಾಯಿ; ನೆಟ್ಟಿಗರ ಮನಗೆದ್ದ ಹೃದಯಸ್ಪರ್ಶಿ ವಿಡಿಯೋ
ಮಕ್ಕಳಿಗೆ ರಸ್ತೆ ದಾಟಲು ಸಹಾಯ ಮಾಡಿದ ನಾಯಿ
TV9 Web
| Edited By: |

Updated on:Jul 31, 2022 | 1:15 PM

Share

ವಿದ್ಯಾರ್ಥಿಗಳು ಗುಂಪು ರಸ್ತೆ ದಾಟುವಾಗ ವಾಹನಗಳ ಸಂಚಾರಗಳು ನಿಲ್ಲದ್ದನ್ನು ಗಮನಿಸಿದ ಮುದ್ದಾದ ಶ್ವಾನವೊಂದು, ಮಕ್ಕಳು ರಸ್ತೆ ದಾಟಬೇಕು ಸಂಚಾರ ನಿಲ್ಲಿಸಿ ಎಂದು ತನ್ನದೇ ಭಾಷೇಯಲ್ಲೇ ಬೈಯುತ್ತಾ ವಾಹನಗಳಿಗೆ ಅಡ್ಡನಿಂತು ಮಕ್ಕಳನ್ನು ರಸ್ತೆ ದಾಟಿಸಿದ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ (Video Viral) ಆಗುತ್ತಿದೆ. ಜಾರ್ಜಿಯಾ ರಿಪಬ್ಲಿಕ್‌ನ ಬಟುಮಿಯಲ್ಲಿ ಜನನಿಬಿಡ ರಸ್ತೆಯನ್ನು ದಾಟಲು ಮಕ್ಕಳಿಗೆ ನಾಯಿಮರಿ ಸಹಾಯ ಮಾಡಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಕ್ಲಿಪ್‌ ಅನ್ನು ಹಂಚಿಕೊಂಡಿದ್ದು, ಸುಮಾರು 1.98 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೀವೂ ನೋಡಿದರೆ ನಾಯಿಮರಿಯ ನಡೆಗೆ ನೀವು ಫಿದಾ ಆಗುವುದು ಖಚಿತ.

ವಿಡಿಯೋದ ಮೂಲ ತುಣುಕನ್ನು ಬೆಕಾ ಸಿನಾಡ್ಜೆ ಸೆರೆಹಿಡಿದಿದ್ದಾರೆ. ಕುಪಾಟಾ (ಸಾಸೇಜ್) ಎಂದು ಕರೆಯಲ್ಪಡುವ ನಾಯಿಮರಿಯು ಸಿಗ್ನಲ್‌ನಲ್ಲಿ ಬೊಗಳುತ್ತಾ ಚಿಕ್ಕ ಮಕ್ಕಳು ರಸ್ತೆ ದಾಟಲು ಕಾರುಗಳನ್ನು ನಿಲ್ಲಿಸುತ್ತದೆ. ನಾಯಿ ಮರಿಯ ಹೃದಯವಂತಿಕೆ, ಉಪಕಾರ, ನಡೆ, ಕಾಳಜಿ ತುಂಬಾ ಮುದ್ದಾಗಿದೆ ಅಲ್ಲವೇ? ಈ ವಿಡಿಯೋವನ್ನು ಹಂಚಿಕೊಂಡ ಅವನೀಶ್ ಶರಣ್ ಅವರು “ಇದು ನಿಮ್ಮ ದಿನವನ್ನು ಉತ್ತಮವಾಗಿಸುತ್ತದೆ” ಎಂದು ಶೀರ್ಷಿಕೆಯನ್ನು ಬರೆದಿದ್ದಾರೆ.

ವೈರಲ್ ವಿಡಿಯೋವನ್ನು ನೋಡಿದ ನೆಟ್ಟಿಗರು ಫಿದಾಗಿದ್ದು, ನಾಯಿಯ ಕಾಳಜಿಗೆ ಮನಸೋತಿದ್ದಾರೆ. ಅಲ್ಲದೆ ವಿಡಿಯೋಗೆ ಪೆಟ್ ಲವರ್ಸ್ ಸೇರಿದರಂತೆ ಹಲವು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ಎಂತಹ ಒಳ್ಳೆಯ ನಾಯಿ” ಎಂದು ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯೆ ನೀಡಿ, ಕೊನೆಗೆ ನಾಯಿ “ಈಗ ನೀನು ಹೋಗುವುದು ಒಳ್ಳೆಯದು” ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, ಈ ದಿನ ವಿಡಿಯೋ ಎಂದು ಬರೆದುಕೊಂಡಿದ್ದಾರೆ.

Published On - 1:15 pm, Sun, 31 July 22