Viral Video: ನೆಟ್ಟಿಗರ ಆಕ್ರೋಶಕ್ಕೆ ಕಾರಣವಾದ ಖ್ಯಾತ ಬಾಣಸಿಗ ಗೋರ್ಡನ್ ರಾಮ್‌ಸೆ ಅವರ ಕುರಿಮರಿ ಆಯ್ಕೆ
ಕುರಿ ಮರಿಯನ್ನು ವಧೆ ಮಾಡಲು ಉತ್ಸಾಹದಿಂದ ಆಯ್ಕೆ ಮಾಡುತ್ತಿರುವ ಪ್ರಸಿದ್ಧ ಬಾಣಸಿಗ ಗೋರ್ಡನ್ ರಾಮ್‌ಸೆ ಅವರು ವಿಡಿಯೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಸಸ್ಯಹಾರಿ ಮಾತ್ರವಲ್ಲದೆ, ಸಸ್ಯಹಾರಿಯಲ್ಲದವರನ್ನು ಕೂಡ ಕೆರಳಿಸಿದೆ.
ಪ್ರಸಿದ್ಧ ಬಾಣಸಿಗ ಗೋರ್ಡನ್ ರಾಮ್‌ಸೆ ಅವರು ಅಪ್ಲೋಡ್ ಮಾಡಿದ ಪೋಸ್ಟ್ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕುರಿಮರಿಯನ್ನು ಕೊಂದು ತಿನ್ನಲು ಉತ್ಸುಕತೆಯಿಂದ ಆಯ್ಕೆ ಮಾಡುತ್ತಿರುವ ವಿಡಿಯೋ ಇದಾಗಿದ್ದು, ನೆಟ್ಟಿಗರ ಒಂದು ವರ್ಗವನ್ನು ಕೆರಳಿಸುವಂತೆ ಮಾಡಿದೆ. “ಸವಿಯಾದ ಯಮ್ ಯಮ್. ನಾನು ನಿನ್ನನ್ನು ತಿನ್ನುತ್ತೇನೆ!” ಎಂದು ಹೇಳಿಕೊಂಡು ರಾಮ್‌ಸೆ ಪೋಸ್ಟ್ ಮಾಡಿದ್ದರು. ಇದಕ್ಕೆ ಸಸ್ಯಹಾರಿ ಅಲ್ಲದವರು ಕೂಡ ಅಸಮಾಧನ ವ್ಯಕ್ತಪಡಿಸಿದ್ದಾರೆ.
ಒಂದಷ್ಟು ಕುರಿಮರಿಗಳನ್ನು ಕೂಡಿ ಹಾಕಿದ್ದ ಸ್ಥಳಕ್ಕೆ ಗೋರ್ಡನ್ ರಾಮ್‌ಸೆ ಅವರು ಬರುತ್ತಾರೆ. ನಂತರ ಅವರು ಅಡ್ಡಲಾಗಿ ಕಟ್ಟಿದ ರಾಡಿನ ಮೇಲೆ ಕುಳಿತುಕೊಂಡು ವಧೆಗೆ ಯಾವ ಕುರಿಯಾದಿತು ಎಂದು ಯೋಚಿಸುತ್ತಾರೆ. ನಂತರ ಒಂದನ್ನು ಆಯ್ಕೆ ಮಾಡಿ ಅದನ್ನು ಹಿಡಿಯಲು ಮುಂದಾದಗ ಕುರಿಗಳು ಹೆದರಿ ಒಂದೆಡೆ ಸೇರುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ನೋಡಿದ ಕೆಲವರು ಅವರ ವರ್ತನೆಗಳಿಂದ ಕೆರಳಿದ್ದು, ದೂಷಿಸಲು ಪ್ರಾರಂಭಿಸಿದ್ದಾರೆ. “ಸರಿ ನಾನು ಸಸ್ಯಾಹಾರಿ ಅಥವಾ ಸಸ್ಯಾಹಾರಿ ಅಲ್ಲ ಆದರೆ ಅದು ಗಡಿಯನ್ನು ದಾಟಿದೆ” ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಮತ್ತೊಬ್ಬರು ಅದೇ ಭಾವನೆಯನ್ನು ಪ್ರತಿಧ್ವನಿಸುತ್ತಾ, “ನಾನು ಸಸ್ಯಾಹಾರಿ ಅಲ್ಲ ಆದರೆ ಇದು ನನಗೆ ನಿಜವಾಗಿಯೂ ದುಃಖವನ್ನುಂಟುಮಾಡುತ್ತದೆ” ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, “ಸರಿ, ಗೋರ್ಡನ್ ಅಂತಿಮವಾಗಿ ಅದನ್ನು ಕಳೆದುಕೊಂಡಿದ್ದಾನೆ” ಎಂದು ಹೇಳಿಕೊಂಡಿದ್ದಾರೆ.
#gordonramsey #Lambtotheslaughter #chef ENOUGH TO MAKE YOU BECOME VEGETARIAN@GordonRamsay Selects The Next lamb To Slaughter pic.twitter.com/aqn5F4h2HX
— TONYINBHAM (@TT0121) July 29, 2022
ಮುಗ್ಧ ಮರಿ ಪ್ರಾಣಿಯನ್ನು ಹತ್ಯೆ ಮಾಡುವುದು ಸ್ವೀಕಾರಾರ್ಹವಲ್ಲದ ಹಿಂಸಾಚಾರ. ಈ ಅನ್ಯಾಯವನ್ನು ಪ್ರಚಾರ ಮಾಡಿದ್ದಕ್ಕಾಗಿ ಅವರಿಗೆ ನಾಚಿಕೆಯಾಗಬೇಕು ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
Tell @gordonramsay that slaughtering an innocent baby animal is an act of unacceptable violence. Shame on him for promoting this injustice. pic.twitter.com/AbqnhL0eq1
— Direct Action Everywhere (@DxEverywhere) July 29, 2022
ಗೋರ್ಡನ್ ಅವರು ಸಸ್ಯಾಹಾರಿಗಳನ್ನು ಅಸಮಾಧಾನಗೊಳಿಸುವುದು ಇದೇ ಮೊದಲಲ್ಲ. 2021 ರಲ್ಲಿ ಬ್ರಿಟಿಷ್ ಟಿಕ್ಟಾಕ್ ತಾರೆ ದಟ್ ವೆಗಾನ್ ಟೀಚರ್ ದೂಷಿಸಿದ್ದರು. “ಗೋರ್ಡನ್ ರಾಮ್‌ಸೆ ಪ್ರಾಣಿಗಳನ್ನು ತಿನ್ನುವುದು ತಪ್ಪು, ಪ್ರಾಣಿಗಳನ್ನು ನೋಯಿಸುವುದು ತಪ್ಪು ಗೋರ್ಡನ್ ರಾಮ್‌ಸೆ, ಈ ಹಾಡನ್ನು ಹಂಚಿಕೊಳ್ಳಿ ಗೋರ್ಡನ್ ರಾಮ್‌ಸೆ ಎಂದು ಹಾಡಿನ ಮೂಲಕ ಹೇಳಿದ್ದರು.
Published On - 4:16 pm, Sun, 31 July 22