Viral Video: ರಸ್ತೆಯಲ್ಲಿ ಅಜ್ಜಿಯ ಸರ ಕದಿಯಲು ಬಂದ ಕಳ್ಳನಿಗೆ ತಕ್ಕ ಶಾಸ್ತಿ ಮಾಡಿದ 10ರ ದಿಟ್ಟ ಪೋರಿ

ಅಜ್ಜಿಯ ಸರ ಕದಿಯಲು ಬಂದ ಕಳ್ಳನನ್ನು 10 ವರ್ಷದ ಪೋರಿ ಹೊಡೆದು ಓಡಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಅಜ್ಜಿಯ ಜತೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್​ನಲ್ಲಿ ಬಂದ ಕಳ್ಳನೊಬ್ಬ ವೃದ್ಧೆಯ ಕುತ್ತಿಗೆಗೆ ಕೈಹಾಕಿದ್ದಾನೆ. ತ

Viral Video: ರಸ್ತೆಯಲ್ಲಿ ಅಜ್ಜಿಯ ಸರ ಕದಿಯಲು ಬಂದ ಕಳ್ಳನಿಗೆ ತಕ್ಕ ಶಾಸ್ತಿ ಮಾಡಿದ 10ರ ದಿಟ್ಟ ಪೋರಿ
ಸರಗಳ್ಳತನ

Updated on: Mar 10, 2023 | 11:20 AM

ಅಜ್ಜಿಯ ಸರ ಕದಿಯಲು ಬಂದ ಕಳ್ಳನನ್ನು 10 ವರ್ಷದ ಪೋರಿ ಹೊಡೆದು ಓಡಿಸಿರುವ ಘಟನೆ ಪುಣೆಯಲ್ಲಿ ನಡೆದಿದೆ. ರಸ್ತೆಯಲ್ಲಿ ಅಜ್ಜಿಯ ಜತೆ ನಡೆದುಕೊಂಡು ಹೋಗುತ್ತಿರುವಾಗ ಬೈಕ್​ನಲ್ಲಿ ಬಂದ ಕಳ್ಳನೊಬ್ಬ ವೃದ್ಧೆಯ ಕುತ್ತಿಗೆಗೆ ಕೈಹಾಕಿದ್ದಾನೆ. ತಕ್ಷಣವೇ ಬಾಲಕಿ ತನ್ನ ಕೈಲಿದ್ದ ಚೀಲದಿಂದ ಕಳ್ಳನಿಗೆ ಥಳಿಸಿದ್ದು, ಕೊನೆಯ ಆತ ಚೈನ್ ಬಿಟ್ಟು ಪರಾರಿಯಾಗಿದ್ದಾನೆ.ಫೆಬ್ರವರಿ 25 ರಂದು ಪುಣೆಯ ಮಾಡೆಲ್ ಕಾಲೋನಿಯಲ್ಲಿ ಘಟನೆ ನಡೆಸಿದ್ದು, 60 ವರ್ಷದ ಲತಾ ಘಾಗ್ ತನ್ನ ಮೊಮ್ಮಗಳು ಋತ್ವಿ ಘಾಗ್ ಮನೆಗೆ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.

ವಿಳಾಸ ಕೇಳುವ ನೆಪದಲ್ಲಿ ಬಂದ ಕಳ್ಳ ವೃದ್ಧೆಯ ಸರ ಕದಿಯಲು ಯತ್ನಿಸಿದ್ದಾನೆ. ಇದನ್ನು ನೋಡಿದ ಬಾಲಕಿ ಬ್ಯಾಗ್​ನಿಂದ ಕಳ್ಳನ ಮುಖಕ್ಕೆ ಹೊಡೆದಿದ್ದು, ಬೈಕ್ ಸವಾರ ತಕ್ಷಣವೇ ಓಡಿ ಹೋಗಿದ್ದಾನೆ. ಈ ಘಟನೆಯು ಫೆಬ್ರವರಿ 25 ರಂದು ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತಷ್ಟು ಓದಿ: ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಕಳ್ಳನ ಕೈಚಳಕ: ಏಳು ವೈದ್ಯರ ಬ್ಯಾಗ್ ಎಗರಿಸಿದ ಕಳ್ಳ

ಮಾರ್ಚ್​ 9 ರಂದು ಈ ಕುರಿತು ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 393ರ ಅಡಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಕೂಡ ಇಂಥದ್ದೇ ಪ್ರಕರಣ ನಡೆದಿತ್ತು, ಸರಗಳ್ಳತನ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಸಿಕ್ಕಿಬಿದ್ದಿದ್ದ. ಈತ 2022ರಲ್ಲಿ ಪೂರ್ಣಪ್ರಜ್ಞಾ ಬಡಾವಣೆಯ ವೃದ್ಧೆಯ ಮಾಂಗಲ್ಯಸರ ಎಗರಿಸಿ ಪರಾರಿಯಾಗಿದ್ದ, ಸಿಸಿಟಿವಿ ವೀಕ್ಷಿಸಿ ಆತನ ಚಲನವಲನದ ಮೇಲೆ ಕಣ್ಣಿರಿಸಿ ಪೊಲೀಸ್ ಠಾಣೆ ಹಿಂಭಾಗವೇ ಬಂಧಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:19 am, Fri, 10 March 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us