ಗ್ರಾಮಸ್ಥನ ಸವಾಲ್​! ಘರ್ಜಿಸಿದ JCB ಡ್ರೈವರ್.. ಮುಂದೇನಾಯ್ತು?

| Updated By:

Updated on: Jul 08, 2020 | 6:02 PM

ಹೈದರಾಬಾದ್​: JCB ಯಂತ್ರದ ಚಾಲಕನಿಗೆ ಸವಾಲ್​ ಒಡ್ಡಿ ಯಂತ್ರದಿಂದ ಪೆಟ್ಟುತಿಂದ ಗ್ರಾಮಸ್ಥನೊಬ್ಬನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ತೆಲಂಗಾಣದ ಮುಲುಗು ಗ್ರಾಮದಲ್ಲಿ ನಿನ್ನೆ ನಡೆದಿರುವ ಈ ಘಟನೆಯಲ್ಲಿ ಗ್ರಾಮಸ್ಥನೊಬ್ಬ ಜೆಸಿಬಿ ಯಂತ್ರದ ಚಾಲಕನಿಗೆ ಕೆಲಸ ಮುಂದುವರೆಸಲು ಅಡ್ಡಿಪಡಿಸುವ ದೃಶ್ಯ ಕಂಡುಬಂದಿದೆ. ನಂತರ ಚಾಲಕನೊಟ್ಟಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಇದರಿಂದ ಸಿಟ್ಟಾದ ಚಾಲಕ ಒಂದೆರಡು ಬಾರಿ ಯಂತ್ರದ ಬಕೆಟ್​ನಿಂದ ಆತನ ತಲೆಯ ಮೇಲೆ ಮೊಟಕುತ್ತಾನೆ. ಆದ್ರೇ ಗ್ರಾಮಸ್ಥ ಇದಕ್ಕೂ ಬಗ್ಗೋದಿಲ್ಲ. ಕೊನೆಗೆ ಕೋಪಗೊಂಡ ಚಾಲಕ ಬಕೆಟ್​ನಿಂದ ಬಲವಾಗಿ […]

ಗ್ರಾಮಸ್ಥನ ಸವಾಲ್​! ಘರ್ಜಿಸಿದ JCB ಡ್ರೈವರ್.. ಮುಂದೇನಾಯ್ತು?
Follow us on

ಹೈದರಾಬಾದ್​: JCB ಯಂತ್ರದ ಚಾಲಕನಿಗೆ ಸವಾಲ್​ ಒಡ್ಡಿ ಯಂತ್ರದಿಂದ ಪೆಟ್ಟುತಿಂದ ಗ್ರಾಮಸ್ಥನೊಬ್ಬನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ತೆಲಂಗಾಣದ ಮುಲುಗು ಗ್ರಾಮದಲ್ಲಿ ನಿನ್ನೆ ನಡೆದಿರುವ ಈ ಘಟನೆಯಲ್ಲಿ ಗ್ರಾಮಸ್ಥನೊಬ್ಬ ಜೆಸಿಬಿ ಯಂತ್ರದ ಚಾಲಕನಿಗೆ ಕೆಲಸ ಮುಂದುವರೆಸಲು ಅಡ್ಡಿಪಡಿಸುವ ದೃಶ್ಯ ಕಂಡುಬಂದಿದೆ. ನಂತರ ಚಾಲಕನೊಟ್ಟಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಇದರಿಂದ ಸಿಟ್ಟಾದ ಚಾಲಕ ಒಂದೆರಡು ಬಾರಿ ಯಂತ್ರದ ಬಕೆಟ್​ನಿಂದ ಆತನ ತಲೆಯ ಮೇಲೆ ಮೊಟಕುತ್ತಾನೆ. ಆದ್ರೇ ಗ್ರಾಮಸ್ಥ ಇದಕ್ಕೂ ಬಗ್ಗೋದಿಲ್ಲ.

ಕೊನೆಗೆ ಕೋಪಗೊಂಡ ಚಾಲಕ ಬಕೆಟ್​ನಿಂದ ಬಲವಾಗಿ ಅವನ ತಲೆಗೆ ಹೊಡೆಯುತ್ತಾನೆ. ಇದರಿಂದ ಬ್ಯಾಲೆನ್ಸ್​ ಕಳೆದುಕೊಂಡ ಗ್ರಾಮಸ್ಥ ಯಂತ್ರಕ್ಕೆ ಜೋರಾಗಿ ಡಿಕ್ಕಿ ಹೊಡೆದು ಬೀಳುತ್ತಾನೆ.

ಕೂಡಲೇ ಅಲ್ಲಿಂದ ಯಂತ್ರದೊಂದಿಗೆ ಡ್ರೈವರ್​ ಎಸ್ಕೇಪ್​ ಆಗಿದ್ದಾನೆ. ಇನ್ನು ಈ ಘಟನೆ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದ್ದು ಚಾಲಕನ ವಿರುದ್ಧ FIR ದಾಖಲಿಸಿದ್ದಾರೆ. ಗ್ರಾಮಸ್ಥ ಕುಡಿದ ಅಮಲಿನಲ್ಲಿ ಚಾಲಕನೊಟ್ಟಿಗೆ ಜಗಳ ತೆಗೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Published On - 1:25 pm, Wed, 8 July 20