Viral Video: ಭಾರೀ ಮಳೆಯಿಂದ ದೂಧ್‌ಸಾಗರ್ ಜಲಪಾತದ ಸೇತುವೆ ಕುಸಿತ; 40 ಪ್ರವಾಸಿಗರ ರಕ್ಷಣೆ

| Updated By: ಸುಷ್ಮಾ ಚಕ್ರೆ

Updated on: Oct 15, 2022 | 1:38 PM

ದೂಧ್​ಸಾಗರ ಜಲಪಾತದ ಕೇಬಲ್ ಸೇತುವೆ ಕುಸಿದಿದ್ದರಿಂದ ಪ್ರವಾಹದ ನೀರಿನ ಮತ್ತೊಂದು ತೀರದಲ್ಲಿದ್ದ 40 ಪ್ರವಾಸಿಗರು ಸಿಲುಕಿಕೊಂಡಿದ್ದರು. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Viral Video: ಭಾರೀ ಮಳೆಯಿಂದ ದೂಧ್‌ಸಾಗರ್ ಜಲಪಾತದ ಸೇತುವೆ ಕುಸಿತ; 40 ಪ್ರವಾಸಿಗರ ರಕ್ಷಣೆ
ದೂಧ್​ಸಾಗರ ಜಲಪಾತದಲ್ಲಿ ಸಿಲುಕಿದ್ದವರ ರಕ್ಷಣೆ
Follow us on

ಗೋವಾ: ಗೋವಾದ ದೂಧ್‌ಸಾಗರ್ ಜಲಪಾತದಲ್ಲಿ (Dudhsagar Falls) ಶುಕ್ರವಾರ ಭಾರೀ ಮಳೆಯಿಂದಾಗಿ ಕೇಬಲ್ ಸೇತುವೆ ಕುಸಿದಿದ್ದು, ನೀರಿನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಿಸಲಾಗಿದೆ. ಶುಕ್ರವಾರ ಸಂಜೆ ಗೋವಾ-ಕರ್ನಾಟಕ ಗಡಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ದೂಧ್​ಸಾಗರ್ ಜಲಪಾತದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಈ ಘಟನೆ ನಡೆದಿದೆ. ಗೋವಾ (Goa) ರಾಜ್ಯದ ಹಲವು ಭಾಗಗಳಲ್ಲಿ ದಿನವಿಡೀ ಭಾರೀ ಮಳೆಯಾಗಿದೆ.

ಕೇಬಲ್ ಸೇತುವೆ ಕುಸಿದಿದ್ದರಿಂದ ಪ್ರವಾಹದ ನೀರಿನ ಮತ್ತೊಂದು ತೀರದಲ್ಲಿದ್ದ 40 ಪ್ರವಾಸಿಗರು ಸಿಲುಕಿಕೊಂಡಿದ್ದರು. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

“ಶುಕ್ರವಾರ ಸಂಜೆ ಗೋವಾ-ಕರ್ನಾಟಕ ಗಡಿಯಲ್ಲಿ ಭಾರೀ ಮಳೆಯಿಂದಾಗಿ ದೂಧಸಾಗರ್ ಜಲಪಾತದಲ್ಲಿ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಾಗಿದೆ. ಈ ನೀರಿನ ಮಟ್ಟವು ದಾಟಲು ಬಳಸಿದ ಸೇತುವೆಯ ಕುಸಿತಕ್ಕೆ ಕಾರಣವಾಯಿತು. ಇದರಿಂದ 40ಕ್ಕೂ ಹೆಚ್ಚು ಜನರು ಪ್ರವಾಹದಲ್ಲಿ ಸಿಲುಕಿಕೊಂಡರು. ದೃಷ್ಟಿ ಲೈಫ್ ಸೇವರ್ಸ್​ ಅಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳಿಗೆ ತ್ವರಿತವಾಗಿ ಸಹಾಯ ಮಾಡಿ, ಅವರಿಗೆ ಸುರಕ್ಷಿತ ನೆಲೆಗಳನ್ನು ಒದಗಿಸಿದರು.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಭಾರೀ ಮಳೆ ಮತ್ತು ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಮುಂದಿನ ಕೆಲವು ದಿನಗಳವರೆಗೆ ದೂಧಸಾಗರ್ ಜಲಪಾತಕ್ಕೆ ಇಳಿಯದಂತೆ ದೃಷ್ಟಿ ಮರೈನ್ ಜನರಿಗೆ ಎಚ್ಚರಿಕೆ ನೀಡಿದೆ. ಪ್ರವಾಹದ ನೀರಿನಲ್ಲಿ ಸಿಲುಕಿದವರನ್ನು ರಕ್ಷಿಸಿದವರನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಅಭಿನಂದಿಸಿದ್ದಾರೆ. ಪ್ರವಾಸಿಗರನ್ನು ರಕ್ಷಿಸಿದ ಜೀವರಕ್ಷಕ ಸಂಸ್ಥೆಯನ್ನು ಸಿಎಂ ಸಾವಂತ್ ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಮೋದ್ ಸಾವಂತ್, “ಅಧಿಕ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಿದ ಸೇತುವೆಯನ್ನು ದಾಟಿದ ಕಾರಣ ದೂಧಸಾಗರ್ ಜಲಪಾತದಲ್ಲಿ ಸಿಲುಕಿಕೊಂಡಿದ್ದ ಸುಮಾರು 40 ಪ್ರವಾಸಿಗರನ್ನು ರಿವರ್ ಲೈಫ್ ಸೇವರ್ಸ್ ರಕ್ಷಿಸಿದೆ. ಪ್ರವಾಸಿಗರನ್ನು ರಕ್ಷಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.” ಎಂದಿದ್ದಾರೆ.

ಇದನ್ನೂ ಓದಿ: Karnataka Rain: ಬೆಂಗಳೂರು, ಕರಾವಳಿ, ಮಲೆನಾಡಿಗೆ ಇಂದು ಹಳದಿ ಅಲರ್ಟ್; ಉತ್ತರ ಕರ್ನಾಟಕದಲ್ಲೂ ಮಳೆಯ ಅಬ್ಬರ

ಗೋವಾ-ಕರ್ನಾಟಕ ಗಡಿಯಲ್ಲಿರುವ ಸುಂದರವಾದ ದೂಧ್​ಸಾಗರ್ ಜಲಪಾತವು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಳೆಗಾಲದ ಆರಂಭದಲ್ಲಿ ಈ ಜಲಪಾತಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಲಾಗಿತ್ತು. ಆದರೆ ಈ ವಾರದ ಆರಂಭದಲ್ಲಿ ಪ್ರವಾಸಿಗರಿಗೆ ಮತ್ತೆ ತೆರೆಯಲಾಗಿತ್ತು. ಗೋವಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಉತ್ತರ ಗೋವಾದ ಸತಾರಿಯಲ್ಲಿ ಭಾರೀ ಮಳೆಯಿಂದಾಗಿ ಶುಕ್ರವಾರದಂದು ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳಲ್ಲಿ ಪ್ರವಾಹದ ನೀರು ನಿಂತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:36 pm, Sat, 15 October 22