Karnataka Rain: ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka Rain: ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ಮಳೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 14, 2022 | 3:28 PM

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ (Bangal Kolli) ಮೇಲ್ಮೈ ಸುಳಿಗಾಳಿ ಬೀಸಿದ ಹಿನ್ನೆಲೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಹವಾಮಾನ ಇಲಾಖೆ ದಕ್ಷಿಣ ಒಳನಾಡಿ, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ (Bengaluru) ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 5 ದಿನ ಮಳೆಯಾಗಲಿದ್ದು, ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನಗಳ ಮಳೆ ಇರಲಿದ್ದು, ಇಲ್ಲಿಯು ಕೂಡ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಕರಾವಳಿ ಭಾಗದಲ್ಲೂ ಅಧೀಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಲ್ಲೋ ಅಲರ್ಟ್ ನೀಡಲಾಗಿದೆ.

ಬೆಂಗಳೂರಿನಲ್ಲಿ ಇನ್ನೂ 5 ದಿನ ಮಳೆ

ಬೆಂಗಳೂರಿನಲ್ಲಿ ಮುಂದಿನ 5 ಮಳೆಯಾಗಲಿದ್ದು, ಇಂದು ಮಾತ್ರ ಯಲ್ಲೋ ಅಲರ್ಟ್ ನೀಡಲಾಗಿದೆ. ಕೆಲವೊಮ್ಮೆ ಗುಡುಗು- ಮಿಂಚಿನ ಸಹಿತ ಮಳೆಯಾಗುವ ಸಾಧ್ಯಾತೆ ಇರುವುದರಿಂದ, ರಾಜಕಾಲುವೆ, ತಗ್ಗು ಪ್ರದೇಶ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಇಂದು ಬೆಳ್ಳಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು, ಮೆಜೆಸ್ಟಿಕ್, ವಿಜಯನಗರ, ಕಾರ್ಪೋರೇಷನ್, ಮೈಸೂರ್ ಬ್ಯಾಂಕ್ ಸರ್ಕಲ್, ಸೇರಿದಂತೆ ಹಲವೆಡೆ ತುಂತುರು ಮಳೆಯಾಗಿದೆ.

ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಹಾನಿ: ರಾಜ್ಯ ಸರ್ಕಾರದಿಂದ 124 ಕೋಟಿ ಅನುದಾನ ಬಿಡುಗಡೆ

 ರಾಜ್ಯದಲ್ಲಿ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ  ಹಾನಿ ಹಿನ್ನೆಲೆ ಮೂಲಭೂತ ಸೌಕರ್ಯ ಹಾನಿ ಪರಿಹಾರಕ್ಕೆ ರಾಜ್ಯ ಸರ್ಕಾರ  124 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಂದಾಯ ಇಲಾಖೆ ಮೂಲಕ ಡಿಸಿಗಳ, ಪಿಡಿ ಖಾತೆಗೆ ಅನುದಾನ ಬಿಡುಗಡೆ ಮಾಡಿದೆ. ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ನೆರೆ, ಪ್ರವಾಹ ಕೂಡ ಉಂಟಾಗಿದ್ದು, ಅನೇಕ ಪ್ರಮಾಣದಲ್ಲಿ ಹಾನಿಯಾಗಿದೆ. ಅನೇಕ ಜನರು ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹಾಗಾಗಿ ಮೂಲಭೂತ ಸೌಕರ್ಯ ಹಾನಿ ಪರಿಹಾರಕ್ಕೆಂದು ರಾಜ್ಯ ಸರ್ಕಾರ 124 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ಕರ್ನಾಟಕದಲ್ಲಿ ಇನ್ನೆರಡು ದಿನ ಭಾರೀ ಮಳೆ ಮುಂದುವರೆಯುವ ನಿರೀಕ್ಷೆಯಿದ್ದು, ನಿನ್ನೆ ರಾತ್ರಿಯೂ ಬೆಂಗಳೂರು ಸೇರಿದಂತೆ ಅಲ್ಲಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಇಂದು ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿಗಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ. ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕೆಲವು ರಸ್ತೆಗಳಲ್ಲಿ ನೀರು ತುಂಬಿಕೊಂಡಿವೆ.

ಹಳದಿ ಅಲರ್ಟ್ ಘೋಷಣೆ:

ರಾಜ್ಯದ ಹಲವು ಜಿಲ್ಲೆಗಳಲ್ಲಿ ಅ. 15ರವರೆಗೆ ಭಾರೀ ಮಳೆಯಾಗಲಿದೆ. ಇಂದು ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳಭಾಗಕ್ಕೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ಕೆಲವೊಂದು ಜಿಲ್ಲೆಗಳ ವಿವಿಧ ಪ್ರದೇಶಗಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಪರದಾಡುವಂತಾಗಿದ್ದು, ಮನೆಯೊಳಗೆ ಸಿಲುಕಿದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

ಚಾಮರಾಜನಗರ: ಕಳೆದ ರಾತ್ರಿ ಸುರಿದ ಮಳೆಯಿಂದ ನಗರದ ಸೋಮಣ್ಣ ಲೇಔಟ್​ ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನರ ಪರದಾಡುವಂತಾಯಿತು. ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:18 pm, Fri, 14 October 22

‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಮಾಲೂರು ಹತ್ತಿರದ ಪ್ರಸನ್ನ ವೆಂಕಟರಮಣ ದೇವಸ್ಥಾನ ಪ್ರಾಚೀನ ಇತಿಹಾಸದ ಪ್ರತೀಕ
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
ಸಂಚಾರಕ್ಕೆ ಅನುಮತಿ ನೀಡಿದರೆ ಸುವರ್ಣ ಸೌಧದ ಮುಂದೆ ಪ್ರತಿಭಟನೆ: ವಾಟಾಳ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
‘ಭೈರತಿ ರಣಗಲ್’ ಸಿನಿಮಾ ನೋಡಿದ ಗೀತಾ ಶಿವರಾಜ್ ಕುಮಾರ್ ಮೊದಲ ರಿಯಾಕ್ಷನ್
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
ಮಂಡ್ಯ: ಪಾಂಡವಪುರ ಪುರಸಭೆ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್
‘ಭೈರತಿ ರಣಗಲ್’ ಲುಕ್​ನಲ್ಲೇ ಶಿವಣ್ಣನ ಸಿನಿಮಾ ನೋಡಲು ಬಂದ ಡಾಲಿ ಧನಂಜಯ್