Viral Video: ಚಲಿಸುವ ರೈಲಿನಿಂದ ಬಿದ್ದ ತಾಯಿ-ಮಗುವನ್ನು ಕಾಪಾಡಿದ ಯೋಧರು; ವಿಡಿಯೋ ವೈರಲ್

ಮಹಿಳೆ ಮತ್ತು ಆಕೆ ಮಗು ರೈಲು ಹತ್ತಲು ಪ್ರಯತ್ನಿಸಿದಾಗ ಕಾಲು ಜಾರಿ ರೈಲ್ವೆ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದರು. ಅಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ನಿಂದ ವೇಗವಾಗಿ ಚಲಿಸಿದ್ದು, ತಕ್ಷಣ ಓಡಿಬಂದ ಎಚ್‌ಪಿಎಫ್ ಸಿಬ್ಬಂದಿ ಕೂಡಲೆ ಅವರನ್ನು ರಕ್ಷಿಸಿದ್ದಾರೆ.

Viral Video: ಚಲಿಸುವ ರೈಲಿನಿಂದ ಬಿದ್ದ ತಾಯಿ-ಮಗುವನ್ನು ಕಾಪಾಡಿದ ಯೋಧರು; ವಿಡಿಯೋ ವೈರಲ್
ರೈಲಿನಡಿ ಸಿಲುಕುತ್ತಿದ್ದ ಮಹಿಳೆಯನ್ನು ಕಾಪಾಡಿದ ಸೈನಿಕ
Edited By:

Updated on: Nov 02, 2022 | 12:52 PM

ಮುಂಬೈ: ಮುಂಬೈನ ಮನ್ಖುರ್ದ್ ರೈಲು ನಿಲ್ದಾಣದಲ್ಲಿ ಇಂದು ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಬಿದ್ದ ಮಹಿಳೆ ಮತ್ತು ಆಕೆಯ ಮಗುವಿನ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ (ಆರ್‌ಪಿಎಫ್) ಅಪರಾಧ ವಿಭಾಗದ ಇಬ್ಬರು ಯೋಧರು ರಕ್ಷಿಸಿದ್ದಾರೆ. ಚಲಿಸುತ್ತಿದ್ದ ರೈಲಿಗೆ ಹತ್ತಲು ತಾಯಿ- ಮಗ ಹರಸಾಹಸ ಪಡುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ವೈರಲ್ ಆಗಿದೆ. ಮಹಿಳೆ ಮತ್ತು ಆಕೆ ಮಗು ರೈಲು ಹತ್ತಲು ಪ್ರಯತ್ನಿಸಿದಾಗ ಕಾಲು ಜಾರಿ ರೈಲ್ವೆ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವೆ ಸಿಲುಕಿಕೊಂಡಿದ್ದರು. ಅಷ್ಟರಲ್ಲಿ ರೈಲು ಪ್ಲಾಟ್‌ಫಾರ್ಮ್‌ನಿಂದ ವೇಗವಾಗಿ ಚಲಿಸಿದ್ದು, ತಕ್ಷಣ ಓಡಿಬಂದ ಎಚ್‌ಪಿಎಫ್ ಸಿಬ್ಬಂದಿ ಕೂಡಲೆ ಅವರನ್ನು ರಕ್ಷಿಸಿದ್ದಾರೆ.

ಇದನ್ನೂ ಓದಿ: ಚಾಕೊಲೇಟ್ ಕದ್ದ ವಿಡಿಯೋ ವೈರಲ್, ಮನನೊಂದು ವಿದ್ಯಾರ್ಥಿನಿಗೆ ಆತ್ಮಹತ್ಯೆಗೆ ಶರಣು

ತಾಯಿ ಮತ್ತು ಮಗುವಿನ ರಕ್ಷಣೆಗೆ ಇಬ್ಬರು ಯೋಧರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಯೋಧರ ಮಾನವೀಯತೆ ಮತ್ತು ನಿಸ್ವಾರ್ಥ ಸೇವೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us