Kannada News National virtual bilateral discussion between PM Modi and Crown Prince of Abu Dhabi Sheikh Mohammed says MEA
ಪ್ರಧಾನಿ ಮೋದಿ- ಅಬು ಧಾಬಿ ದೊರೆ ನಡುವೆ ದ್ವಿಪಕ್ಷೀಯ ಶೃಂಗಸಭೆ ಇಂದು; ಇದಕ್ಕಿದೆ ಹೆಚ್ಚು ಮಹತ್ವ! ಏನದು? ಇಲ್ಲಿದೆ ವಿವರ
PM Modi, Abu Dhabi Crown Prince virtual summit: ಉಭಯ ಪ್ರಯತ್ನದ ಫಲವಾಗಿ ಎರಡೂ ರಾಷ್ಟ್ರಗಳ ನಡುವೆ ಈ ಹಿಂದೆ ಕೊರೊನಾ ಮಹಾಸೋಂಕಿಗೂ ಮುನ್ನ ಇದ್ದ 60 ಬಿಲಿಯನ್ ಅಮೆರಿಕಾ ಡಾಲರ್ ವಹಿವಾಟು ಗಾತ್ರಕ್ಕೆ ಮರಳಲಿದೆ ಎಂಬುದು ದಾಖಲಾರ್ಹ ಸಂಗತಿಯಾಗಿದೆ. CEPA ಒಪ್ಪಂದ ಕೈಗೂಡಿದರೆ ಈ ಗಾತ್ರವನ್ನು ಹಿಂದಿಕ್ಕುವುದು ಕಷ್ಟವೇನೂ ಆಗದು. 2014ರಲ್ಲಿ ಕೊಲ್ಲಿ ರಾಷ್ಟ್ರಗಳ ಹೂಡಿಕೆಯು ಭಾರತದಲ್ಲಿ 3 ಬಿಲಿಯನ್ ಅಮೆರಿಕಾ ಡಾಲರ್ ಪ್ರಮಾಣದಲ್ಲಿತ್ತು. ಅದೀಗ 17 ಬಿಲಿಯನ್ ಅಮೆರಿಕಾ ಡಾಲರ್ ಗಾತ್ರಕ್ಕೆ ಏರಿದೆ.
ಪ್ರಧಾನಿ ಮೋದಿ- ಅಬು ಧಾಬಿ ದೊರೆ ದ್ವಿಪಕ್ಷೀಯ ಸಂಬಂಧ ಶೃಂಗಸಭೆ ಇಂದು
Follow us on
ನವದೆಹಲಿ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಮತ್ತು ಅಬು ಧಾಬಿ ದೊರೆ ಷೇಕ್ ಮಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed bin Zayed al Nahyan ) ಇಂದು ವರ್ಚುಯಲ್ ಸಭೆ ನಡೆಸಲಿದ್ದಾರೆ. ಉಭಯ ನಾಯಕರು ದ್ವಿಪಕ್ಷೀಯ ಸಹಕಾರ ಸಂಬಂಧ (Abu Dhabi) ಮಾತುಕತೆ ನಡೆಸಲಿದ್ದಾರೆ. ಪ್ರಾದೇಶಿಕ ವಿಷಯಗಳು ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಸಹ ಇಬ್ಬರೂ ನಾಯಕರು ಚರ್ಚೆಗಳನ್ನು ನಡೆಸಲಿದ್ದಾರೆ ಎಂದು ಭಾರತ ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.
ಪ್ರಧಾನಿ ಮೋದಿ- ಅಬು ಧಾಬಿ ದೊರೆ ನಡುವೆ ದ್ವಿಪಕ್ಷೀಯ ಶೃಂಗಸಭೆ ಇಂದು:
ಉಭಯ ರಾಷ್ಟ್ರಗಳು ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಅಂಕಿತವಾಗಲು ಉತ್ಸುಕವಾಗಿದ್ದು, ಅಂತಿಮ ಹಂತದ ಮಾತುಕತೆಯಲ್ಲಿ ತೊಡಗಿದೆ. ಈ ಹಿನ್ನೆಲೆಯಲ್ಲಿ UAE ವಾಣಿಜ್ಯ ಸಚಿವಾಲಯದ ಮುಖ್ಯಸ್ಥ ಅಬ್ದುಲ್ಲಾ ಬಿನ್ ತೌಕ್ ಅಲ್ ಮರ್ರಿ ನವದೆಹಲಿಗೆ ಭೇಟಿ ನೀಡಲಿದ್ದಾರೆ.
ಭಾರತ ಮತ್ತು ಅಬು ಧಾಬಿ ದ್ವಿಪಕ್ಷೀಯವಾಗಿ ಸಾಂಸ್ಕೃತಿಕವಾಗಿಯೂ ಹತ್ತಿರವಾಗಿದೆ. ಅಬು ಧಾಬಿಯಲ್ಲಿ ನಾರಾಯಣ ಗುರು ದೇಗುಲ ಬೃಹದಾದ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಭಾರತ ಮತ್ತು ಅಬು ಧಾಬಿ ರಾಷ್ಟ್ರಗಳು ಜಾಗತಿಕವಾಗಿ ತನ್ನ ಸ್ಥಾನಗಳನ್ನು ಭದ್ರಪಡಿಸಿಕೊಳ್ಳುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ 10 ರಾಷ್ಟ್ರಗಳಾಗಲ್ಲಿ ಸ್ಥಾನ ಹೊಂದಿವೆ.
ಕೋವಿಡ್ ಮಹಾಸೋಂಕು ಕಾಲದಲ್ಲಿಯೂ ಭಾರತ -ಅಬು ಧಾಬಿಯ ಉಭಯ ನಾಯಕರು ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದು, ಪರಸ್ಪರ ಸಹಕಾರ ಕೋರಿದ್ದರು. ಕೊಲ್ಲಿ ರಾಷ್ಟ್ರವು (UAE) ಅಲ್ಲಿರುವ 35 ದಶ ಲಕ್ಷ ಭಾರತೀಯರ ಯೋಗ ಕ್ಷೇಮವನ್ನು ಕೊರೊನಾ ಕಾಲದಲ್ಲಿ ಚೆನ್ನಾಗಿಯೇ ನೋಡಿಕೊಂಡಿತ್ತು. Air Bubble Arrangement -2020 ವ್ಯವಸ್ಥೆಯು ಯಶಸ್ವಿಯಾಗಿ ಬಹುತೇಕ ಮಂದಿ ಕೆಲಸ ಕಾರ್ಯಗಳು, ವಹಿವಾಟು ಕ್ಷೇತ್ರದಲ್ಲಿ ಮತ್ತೆ ತೊಡಗಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಬು ಧಾಬಿ ದೊರೆ ಷೇಕ್ ಮಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರ ನಾಯಕತ್ವವನ್ನು ಕೊಂಡಾಡಿದ್ದರು. ಅಬು ಧಾಬಿ ದೊರೆ ಷೇಕ್ ಮಹಮದ್ ಸಹ ಭಾರತೀಯರು ಕೊಲ್ಲಿ ರಾಷ್ಟ್ರಗಳ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡುತ್ತಿರುವುದನ್ನು ಪ್ರಶಂಸಿಸಿದ್ದಾರೆ.
ಉಭಯ ರಾಷ್ಟ್ರಗಳಿಗೆ ನೆರವಾಗುವಂತೆ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (Comprehensive Economic Partnership Agreement -CEPA) ಮಣೆ ಹಾಕಿರುವುದು ಗಮನಾರ್ಹ. 2021 ಸೆಪ್ಟೆಂಬರ್ ತಿಂಗಳಿನಲ್ಲಿ ಈ ಒಪ್ಪಂದ ಅಳವಡಿಕೆಗೆ ಮಾತುಕತೆ ಆರಂಭವಾಯಿತು. ಈ ಒಪ್ಪಂದಕ್ಕೆ ಅಂಕಿತವಾದರೆ ಉಭಯ ರಾಷ್ಟ್ರಗಳ ನಡುವಣ ವಾಣಿಜ್ಯ ವಹಿವಾಟು ಮುಂದಿನ ಮಹತ್ವದ ಹಂತಕ್ಕೆ ಸಾಗುತ್ತದೆ.
ಕೊಲ್ಲಿ ರಾಷ್ಟ್ರಗಳು (UAE) ಭಾರತದ ಮೂರನೆಯ ಅತಿ ದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ. ಹಾಗಾಗಿ ಇಂದು ನಡೆಯುವ ಉಭಯ ನಾಯಕರ ನಡುವಣ ಮಾತುಕತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು MEA ತಿಳಿಸಿದೆ.
ಈ ಉಭಯ ಪ್ರಯತ್ನದ ಫಲವಾಗಿ ಎರಡೂ ರಾಷ್ಟ್ರಗಳ ನಡುವೆ ಈ ಹಿಂದೆ ಕೊರೊನಾ ಮಹಾಸೋಂಕಿಗೂ ಮುನ್ನ ಇದ್ದ 60 ಬಿಲಿಯನ್ ಅಮೆರಿಕಾ ಡಾಲರ್ ವಹಿವಾಟು ಗಾತ್ರಕ್ಕೆ ಮರಳಲಿದೆ ಎಂಬುದು ದಾಖಲಾರ್ಹ ಸಂಗತಿಯಾಗಿದೆ. CEPA ಒಪ್ಪಂದ ಕೈಗೂಡಿದರೆ ಈ ಗಾತ್ರವನ್ನು ಹಿಂದಿಕ್ಕುವುದು ಕಷ್ಟವೇನೂ ಆಗದು. 2014ರಲ್ಲಿ ಕೊಲ್ಲಿ ರಾಷ್ಟ್ರಗಳ ಹೂಡಿಕೆಯು ಭಾರತದಲ್ಲಿ 3 ಬಿಲಿಯನ್ ಅಮೆರಿಕಾ ಡಾಲರ್ ಪ್ರಮಾಣದಲ್ಲಿತ್ತು. ಅದೀಗ 17 ಬಿಲಿಯನ್ ಅಮೆರಿಕಾ ಡಾಲರ್ ಗಾತ್ರಕ್ಕೆ ಏರಿದೆ. ಗಮನಾರ್ಹವೆಂದರೆ ಕೊಲ್ಲಿ ರಾಷ್ಟ್ರಗಳ ಉದ್ಯಮಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹೂಡಿಕೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ.
ಕೊರೊನಾ ಮಹಾಸೋಂಕು ಕಾಲದಲ್ಲಿ ಉಭಯ ರಾಷ್ಟ್ರಗಳು ವೈದ್ಯಕೀಯ ಮತ್ತು ಆಹಾರ ಭದ್ರತೆ ಕ್ಷೇತ್ರದಲ್ಲಿ ಹೆಚ್ಚಿನ ಸಹಯೋಗ ಹೊಂದಿದ್ದವು. ಮರಬಳಕೆ ಇಂಧನ, ಸ್ಟಾರ್ಟ್ ಅಪ್ಸ್ ಬಿಸಿನೆಸ್, ಹಣಕಾಸು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಂದಿನ ಮಾತುಕತೆ ಇಂಬು ನೀಡಲಿದೆ.
Dubai Expo 2020 ವಾಣಿಜ್ಯ ಮೇಳದಲ್ಲಿ ಅತಿ ದೊಡ್ಡ ಮಳಿಗೆಯಲ್ಲಿ ಭಾರತ ಪ್ರದರ್ಶನ ಕಂಡಿತು. Abu Dhabi IDEX ಮತ್ತು NAVDEX 2021 ವಸ್ತು ಪ್ರದರ್ಶನದಲ್ಲಿಯೂ ಭಾರತಕ್ಕೆ ಹೆಚ್ಚಿನ ಒತ್ತು ಸಿಕ್ಕಿತ್ತು.