ವಿಶಾಖಪಟ್ಟಣಂ ವಿಷ ಅನಿಲ: ರಾತ್ರೋರಾತ್ರಿ ಸುತ್ತಮುತ್ತ ಗ್ರಾಮಸ್ಥರು ಏನು ಮಾಡಿದರು?

|

Updated on: May 08, 2020 | 7:55 AM

ವಿಶಾಖಪಟ್ಟಣಂ: ಒಂದೇ ದಿನದಲ್ಲಿ 11 ಬಲಿಪಡೆದ ಆಂಧ್ರದ ವಿಶಾಖಪಟ್ಟಣಂ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ರಾತ್ರಿ ಇಡೀ ನಿದ್ದೆ ಮಾಡದೆ ಓಡಾಟ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟಿದ ಸುಳ್ಳು ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಂಡು ಊರು ಬಿಡಲು ಮುಂದಾಗಿದ್ರು. ಪ್ರಕರಣಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ವದಂತಿಗಳು ಹರಿದಾಡುತ್ತಿವೆ. ಮತ್ತೆ ವಿಷಾನಿಲ ಸೋರಿಕೆಯಾಗುತ್ತಿದೆ ಹಾಗೂ ಬೇರೆ ರಸಾಯನ ಸ್ಫೋಟದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಭಯ ಭೀತರಾದ ನೆರೆಹೊರೆ ಗ್ರಾಮಸ್ಥರು ರಾತ್ರಿ ಇಡೀ […]

ವಿಶಾಖಪಟ್ಟಣಂ ವಿಷ ಅನಿಲ: ರಾತ್ರೋರಾತ್ರಿ ಸುತ್ತಮುತ್ತ ಗ್ರಾಮಸ್ಥರು ಏನು ಮಾಡಿದರು?
Follow us on

ವಿಶಾಖಪಟ್ಟಣಂ: ಒಂದೇ ದಿನದಲ್ಲಿ 11 ಬಲಿಪಡೆದ ಆಂಧ್ರದ ವಿಶಾಖಪಟ್ಟಣಂ ವಿಷಾನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ರಾತ್ರಿ ಇಡೀ ನಿದ್ದೆ ಮಾಡದೆ ಓಡಾಟ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟಿದ ಸುಳ್ಳು ಸುದ್ದಿಗಳ ಬಗ್ಗೆ ತಲೆಕೆಡಿಸಿಕೊಂಡು ಊರು ಬಿಡಲು ಮುಂದಾಗಿದ್ರು.

ಪ್ರಕರಣಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ವದಂತಿಗಳು ಹರಿದಾಡುತ್ತಿವೆ. ಮತ್ತೆ ವಿಷಾನಿಲ ಸೋರಿಕೆಯಾಗುತ್ತಿದೆ ಹಾಗೂ ಬೇರೆ ರಸಾಯನ ಸ್ಫೋಟದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಭಯ ಭೀತರಾದ ನೆರೆಹೊರೆ ಗ್ರಾಮಸ್ಥರು ರಾತ್ರಿ ಇಡೀ ನಿದ್ದೆ ಮಾಡದೆ ಊರು ಬಿಡಲು ಯತ್ನಿಸಿದ್ದಾರೆ.

ವೆಂಕಟಾಪುರಂ, ಗೋಪಾಲಪಟ್ನಂ, ಪೆಂದುರ್ತಿ ಗ್ರಾಮಸ್ಥರು ಸುರಕ್ಷಿತ ಪ್ರದೇಶಗಳಿಗೆ ಹೋಗಲು ಮುಂದಾಗಿದ್ರು. ನಂತರ ಜನರು ವದಂತಿಗಳನ್ನ ನಂಬಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.