ಸೇತುವೆ
ಉದ್ಘಾಟನೆಗೊಂಡು ಕೆಲವೇ ಗಂಟೆಗಳಲ್ಲಿ ವೈಜಾಗ್ನ ತೇಲುವ
ಸೇತುವೆ( Floating Bridge) ಕುಸಿದಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದೆ. ಆದರೆ ಇದಕ್ಕೆ ಆಂಧ್ರಪ್ರದೇಶ ಸರ್ಕಾರ ಸ್ಪಷ್ಟನೆ ಕೊಟ್ಟಿದ್ದು, ಇದು ಅಣಕು ಡ್ರಿಲ್‌ನ ಭಾಗ ಅಷ್ಟೇ, ಸೇತುವೆಗೆ ಏನೂ ಆಗಿಲ್ಲ ಎಂದಿದ್ದಾರೆ.
ಫೆಬ್ರವರಿ 25 ರಂದು ಸೇತುವೆಯ ಉದ್ಘಾಟನೆ ನಡೆದಿತ್ತು. ರ್‌ಕೆ ಬೀಚ್‌ನಲ್ಲಿ ಭಾನುವಾರ ವೈಎಸ್‌ಆರ್‌ಸಿಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ವೈವಿ ಸುಬ್ಬಾ ರೆಡ್ಡಿ ಅವರು ತೇಲುವ ಸೇತುವೆಯನ್ನು ಉದ್ಘಾಟನೆ ಮಾಡಿದ್ದರು.
24 ಗಂಟೆಗಳಲ್ಲಿ ಸೇತುವೆ ಒಂದು ಭಾಗ ಮುರಿದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿರೋಧ ಪಕ್ಷವಾದ ಟಿಡಿಪಿ ಪಕ್ಷವು ಟೀಕಿಸಿತ್ತು. ದು ವೈಎಸ್‌ಆರ್‌ಸಿಪಿ ಸರ್ಕಾರಕ್ಕೆ ದೊಡ್ಡ ಮುಜುಗರವನ್ನು ಉಂಟುಮಾಡಿತ್ತು. ಉಬ್ಬರವಿಳಿತದ ಕಾರಣ, ಸೇತುವೆಯ ಟಿ ಆಕಾರದ ವೀಕ್ಷಣಾ ಸ್ಥಳವನ್ನು ಬೇರ್ಪಡಿಸಿ ಅದರ ಸ್ಥಿರತೆಯನ್ನು ಪರೀಕ್ಷಿಸಲು ದೂರ ಇರಿಸಲಾಗಿದೆ.
ಆದರೆ ಕೆಲವರು ಸೇತುವೆ ಮತ್ತು ಬೇರ್ಪಟ್ಟ ವೀಕ್ಷಣಾ ಸ್ಥಳದ ನಡುವಿನ ಅಂತರದ ಚಿತ್ರಗಳನ್ನು ಕ್ಲಿಕ್ ಮಾಡಿ ತೇಲುವ ಸೇತುವೆ ಮುರಿದಿದೆ ಎಂದು ಆರೋಪಿಸಿದ್ದಾರೆ ಎಂದರು. ಅಣಕು ಡ್ರಿಲ್‌ನ ಭಾಗವಾಗಿ ಸೇತುವೆಯನ್ನು ಬೇರ್ಪಡಿಸಲಾಗಿದೆ, ಬಲವಾದ ಅಲೆಗಳು ಬಂದ ಸಮಯದಲ್ಲಿ ಅಂತಹ ಪ್ರತ್ಯೇಕತೆಯು ಸಾಮಾನ್ಯ ತಾಂತ್ರಿಕ ಪ್ರಕ್ರಿಯೆಯಾಗಿದೆ.
ಅಣಕು ಡ್ರಿಲ್‌ಗಳ ಭಾಗವಾಗಿ ಅಗತ್ಯವಿರುವಾಗ ಭವಿಷ್ಯದಲ್ಲಿಯೂ ಇದೇ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಸೋಮವಾರದಿಂದ ಸೇತುವೆಯ ಮೇಲೆ ಪ್ರವಾಸಿಗರನ್ನು ಅನುಮತಿಸಲು ಸರ್ಕಾರ ಬಯಸಿದ್ದರೂ, ಹವಾಮಾನದಲ್ಲಿನ ಬದಲಾವಣೆ ಮತ್ತು ಬಲವಾದ ಅಲೆ ಇದ್ದ ಕಾರಣ ಅವಕಾಶ ನೀಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏತನ್ಮಧ್ಯೆ, ಕೈಗಾರಿಕಾ ಸಚಿವ ಜಿ ಅಮರನಾಥ್ ಅವರು ಟಿಡಿಪಿ ತೇಲುವ ಸೇತುವೆಯ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.