AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃಗಾಲಯಕ್ಕೆ ತೆರಳಿದ್ದಾಗ ಪತಿ ಹೃದಯಾಘಾತದಿಂದ ಸಾವು, ಮನೆಗೆ ಬಂದು 7ನೇ ಮಹಡಿಯಿಂದ ಜಿಗಿದು ಪತ್ನಿ ಆತ್ಮಹತ್ಯೆ

ಪತಿಯ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಪತ್ನಿ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಘಾಜಿಯಾಬಾದ್​ನಲ್ಲಿ ನಡೆದಿದೆ. ದೆಹಲಿಯ ಮೃಗಾಲಯಕ್ಕೆ ತೆರಳಿದ್ದಾಗ ಅಭಿಷೇಕ್ ಎಂಬುವವರಿಗೆ ಹೃದಯಾಘಾತವಾಗಿತ್ತು ಬಳಿಕ ಅವರು ಸಾವನ್ನಪ್ಪಿದ್ದರು, ಈ ನೋವು ತಾಳಲಾರದೆ ಪತ್ನಿ ಸಾವಿಗೆ ಶರಣಾಗಿದ್ದಾರೆ.

ಮೃಗಾಲಯಕ್ಕೆ ತೆರಳಿದ್ದಾಗ ಪತಿ ಹೃದಯಾಘಾತದಿಂದ ಸಾವು, ಮನೆಗೆ ಬಂದು 7ನೇ ಮಹಡಿಯಿಂದ ಜಿಗಿದು ಪತ್ನಿ ಆತ್ಮಹತ್ಯೆ
Image Credit source: India TV
ನಯನಾ ರಾಜೀವ್
|

Updated on: Feb 28, 2024 | 8:24 AM

Share

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ(Heart Attack)ದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೆಹಲಿಯ ಮೃಗಾಲಯಕ್ಕೆ ದಂಪತಿ ತೆರಳಿದ್ದರು ಈ ವೇಳೆ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅದೇ ನೋವಿನಲ್ಲಿ ಮನೆಗೆ ಬಂದ ಪತ್ನಿ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗಾಜಿಯಾಬಾದ್‌ನ ಯುವ ದಂಪತಿ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ಪತಿ 25 ವರ್ಷದ ಅಭಿಷೇಕ್ ಅಹ್ಲುವಾಲಿಯಾ ಮಾರಣಾಂತಿಕ ಹೃದಯಾಘಾತದಿಂದ ಬಳಲುತ್ತಿದ್ದರು. ಪತಿಯನ್ನು ಕಳೆದುಕೊಂಡ ಆಘಾತವನ್ನು ಸಹಿಸಲಾಗದೆ ಪತ್ನಿ ಅಂಜಲಿ ಏಳನೇ ಮಹಡಿಯ ಬಾಲ್ಕನಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಭಿಷೇಕ್​ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೇ ಅವರನ್ನು ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್‌ನಲ್ಲಿರುವ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ನವದೆಹಲಿಯ ಏಮ್ಸ್ ಆಸ್ಪತ್ರೆಯ ಎದುರಿನ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು.

ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಮತ್ತು ಹೃದಯಾಘಾತವು ಸಾವಿಗೆ ಕಾರಣ ಎಂದು ಹೇಳಲಾಗಿದೆ. ಅಭಿಷೇಕ್ ಅವರ ಪಾರ್ಥಿವ ಶರೀರವು ಗಾಜಿಯಾಬಾದ್‌ನ ವೈಶಾಲಿಯಲ್ಲಿರುವ ಅಹ್ಲ್ಕಾನ್ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆಗೆ ರಾತ್ರಿ 9ರ ಸುಮಾರಿಗೆ ಬಂದಿತ್ತು.

ಮತ್ತಷ್ಟು ಓದಿ:Heart Attack: ಹೃದಯಾಘಾತದ ಲಕ್ಷಣಗಳು ಮಹಿಳೆ- ಪುರುಷರಲ್ಲಿ ಬದಲಾಗುವುದೇಕೆ?

ಪತಿಯ ಅಕಾಲಿಕ ಮರಣದ ಆಘಾತವನ್ನು ಸಹಿಸಲಾಗದೆ ಅಂಜಲಿ ತಮ್ಮ ಏಳನೇ ಮಹಡಿಯ ಬಾಲ್ಕನಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ದೇಹವನ್ನು ಮನೆಗೆ ತಂದ ನಂತರ, ಪತ್ನಿ ಅದರ ಪಕ್ಕದಲ್ಲಿ ಕುಳಿತು ತುಂಬಾ ಅಳುತ್ತಿದ್ದರು,ನಂತರ ಇದ್ದಕ್ಕಿದ್ದಂತೆ ಎದ್ದು ಬಾಲ್ಕನಿಯತ್ತ ಓಡಿದಳು. ಜಿಗಿಯುತ್ತಾಳೆ ಎಂದು ನಾನು ಭಾವಿಸಿದೆ. ನಾನು ಅವಳ ಹಿಂದೆ ಓಡಿದೆ, ಆದರೆ ನಾನು ಅವಳನ್ನು ತಡೆಯುವ ಮೊದಲು ಅವಳು ಜಿಗಿದಿದ್ದಳು ಎಂದು ಸಂಬಂಧಿ ಬಬಿತಾ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ