WITT 2024: ರಾಮ ಮಂದಿರ ಉದ್ಘಾಟನೆ ಬಿಜೆಪಿಯ ಕಾರ್ಯಕ್ರಮವಲ್ಲ, ಪ್ರಧಾನಿ ಮೋದಿ ದೇಶವನ್ನು ಪ್ರತಿನಿಧಿಸುತ್ತಾರೆ: ಅಮಿತ್ ಶಾ

ಟಿವಿ9 ನೆಟ್​ವರ್ಕ್​ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಗ್ಗೆ ಮಾತನಾಡಿದರು. ರಾಮಮಂದಿರದ ಬಹುಕಾಲದ ಕನಸು ನನಸಾಗಿದೆ. ಇದು ಬಿಜೆಪಿ ಕಾರ್ಯಕ್ರಮವಾಗಿರಲಿಲ್ಲ ಎಂದರು.

WITT 2024: ರಾಮ ಮಂದಿರ ಉದ್ಘಾಟನೆ ಬಿಜೆಪಿಯ ಕಾರ್ಯಕ್ರಮವಲ್ಲ, ಪ್ರಧಾನಿ ಮೋದಿ ದೇಶವನ್ನು ಪ್ರತಿನಿಧಿಸುತ್ತಾರೆ: ಅಮಿತ್ ಶಾ
ರಾಮ ಮಂದಿರ ಉದ್ಘಾಟನೆ ಬಿಜೆಪಿ ಕಾರ್ಯಕ್ರಮ ಎನ್ನುತ್ತಾರೆ; ಆದರೆ ವೇದಿಕೆಯಲ್ಲಿದ್ದ ಬಿಜೆಪಿ ಸದಸ್ಯ ಯಾರು ಎಂದು ಪ್ರಶ್ನಿಸಿದ ಅಮಿತ್ ಶಾ
Follow us
Rakesh Nayak Manchi
|

Updated on: Feb 27, 2024 | 10:56 PM

ನವದೆಹಲಿ, ಫೆ.27: ಟಿವಿ9 ನೆಟ್​ವರ್ಕ್​ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಅಯೋಧ್ಯೆ ರಾಮ ಮಂದಿರ (Ayodhya Ram Mandir) ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಗ್ಗೆ ಮಾತನಾಡಿದರು. ರಾಮಮಂದಿರದ ಬಹುಕಾಲದ ಕನಸು ನನಸಾಗಿದೆ. ಇದು ಬಿಜೆಪಿ ಕಾರ್ಯಕ್ರಮವಾಗಿರಲಿಲ್ಲ ಎಂದರು.

ಕಳೆದ 500 ವರ್ಷಗಳಿಂದ ಭಗವಾನ್ ಶ್ರೀರಾಮನು ತನ್ನ ಜನ್ಮ ಸ್ಥಳದಲ್ಲಿ ಕುಳಿತಿರಲಿಲ್ಲ. ಇಡೀ ದೇಶವು ರಾಮ ಮಂದಿರ ನಿರ್ಮಾಣದ ಕ್ಷಣಕ್ಕಾಗಿ ಕಾಯುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬಹುಕಾಲದ ಕನಸಾಗಿರುವ ರಾಮ ಮಂದಿರವನ್ನು 10 ವರ್ಷದೊಳಗೆ ನಿರ್ಮಾಣ ಮಾಡಿದರು ಎಂದರು.

ದೇಶದ ಧಾರ್ಮಿಕ ಕೇಂದ್ರಗಳನ್ನು ಗೌರವಿಸಲು ಕಾಂಗ್ರೆಸ್ ಹೆದರುತ್ತಿದೆ

ಪ್ರಾಣ ಪ್ರತಿಷ್ಠೆಯ ಕುರಿತು ಮಾತನಾಡಿದ ಅವರು, ಇದು ಪ್ರಪಂಚದಾದ್ಯಂತದ ಎಲ್ಲಾ ಭಕ್ತರಿಗೆ ಅದ್ಭುತ ಮತ್ತು ಮರೆಯಲಾಗದ ಸಂದರ್ಭವಾಗಿದೆ. ಇಡೀ ದೇಶವೇ ಆ ದಿನ ಭಾವೋದ್ವೇಗದಿಂದ ತುಂಬಿತ್ತು. ಅಂದು ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಕುಳಿತಿದ್ದೆ. ಅಲ್ಲಿ ಸುಮಾರು ಸಾವಿರ ಜನ ಕುಳಿತಿದ್ದರು. ಎಲ್ಲರ ಕಣ್ಣಲ್ಲೂ ನೀರು ತುಂಬಿತ್ತು. ತುಷ್ಟೀಕರಣದ ರಾಜಕೀಯದಿಂದಾಗಿ ನಮ್ಮ ದೇಶದ ಧಾರ್ಮಿಕ ಕೇಂದ್ರಗಳನ್ನು ಗೌರವಿಸಲು ಕಾಂಗ್ರೆಸ್ ಹೆದರುತ್ತಿದೆ ಎಂದರು.

ಇದನ್ನೂ ಓದಿ: WITT 2024: ಮತಾಂತರಕ್ಕೆ ವಿದೇಶದಿಂದ ಹಣ ಬಂದರೆ ಖಂಡಿತ ತಡೆಯುತ್ತೇವೆ: ಅಮಿತ್ ಶಾ

ಅನೇಕ ವಿರೋಧ ಪಕ್ಷದ ನಾಯಕರನ್ನು ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅದು ಬಿಜೆಪಿ ಕಾರ್ಯಕ್ರಮ ಎಂದು ಕಾಂಗ್ರೆಸ್​ನವರು ಬಂದಿರಲಿಲ್ಲ. ಆದರೆ ಅಲ್ಲಿ ಬಿಜೆಪಿ ಸದಸ್ಯ ಯಾರು?ಮೋದಿ ಅವರು ದೇಶದ ಪ್ರಧಾನಿಯಾಗಿದ್ದಾರೆ. ಪ್ರಧಾನಿ ಮೋದಿ ದೇಶದ 140 ಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಇವರನ್ನು ಹೊರತುಪಡಿಸಿದರೆ ವೇದಿಕೆಯಲ್ಲಿದ್ದವರು ಸಂತರು ಎಂದರು.

ಕ್ಯಾನ್ಸರ್ ಹುಣ್ಣುಗಳನ್ನು ನಿವಾರಿಸಿದ ಪ್ರಧಾನಿ ಮೋದಿ

ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಅಡಿಪಾಯ ಹಾಕಲು ಪ್ರಧಾನಿ ಮೋದಿ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜಾತೀಯತೆ ಮತ್ತು ತುಷ್ಟೀಕರಣದಿಂದ ಯಾವುದೇ ದೇಶದ ಪ್ರಜಾಪ್ರಭುತ್ವವು ಅರಳಲು ಸಾಧ್ಯವಿಲ್ಲ. ನಮ್ಮ ಚುನಾವಣೆಗಳು ಯಾವಾಗಲೂ ಈ ನಾಲ್ಕು ಹುಣ್ಣುಗಳಲ್ಲಿ ಒಂದಲ್ಲ ಒಂದು ಹುಣ್ಣುಗಳಿಂದ ಸುತ್ತುವರೆದಿರುತ್ತದೆ. ಈ ಕ್ಯಾನ್ಸರ್ ಹುಣ್ಣುಗಳನ್ನು ನಿವಾರಿಸುವ ಮೂಲಕ ಕಾರ್ಯಕ್ಷಮತೆಯನ್ನು ಸ್ಥಾಪಿಸಲು ಪ್ರಧಾನಿ ಮೋದಿ ಕೆಲಸ ಮಾಡಿದ್ದಾರೆ. ದೇಶವನ್ನು ಅಭಿವೃದ್ದಿಪಡಿಸುವ ಮತ್ತು ಅಭಿವೃದ್ಧಿ ಮಾಡುವವನು ದೇಶವನ್ನು ಆಳುತ್ತಾನೆ. ನಾವು ರಾಷ್ಟ್ರೀಯ ಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತೇವೆ ಎಂದರು.

ಇದನ್ನೂ ಓದಿ: WITT 2024: ಮಕ್ಕಳನ್ನು ಪ್ರಧಾನಿ-ಸಿಎಂ ಮಾಡಲು ಹೊರಟಿರುವ ಕುಟುಂಬ ಪಕ್ಷಗಳ ಮೈತ್ರಿಯೇ ಐಎನ್​ಡಿಐ: ಅಮಿತ್ ಶಾ

ದೇಶದ ಪ್ರತಿಷ್ಠಿತ ಪ್ರಶಸ್ತಿಗಳ ಬಗ್ಗೆ ಪ್ರಸ್ತಾಪಿಸಿದ ಅಮಿತ್ ಶಾ, ಹಲವು ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಭಾರತ ರತ್ನ ನೀಡಿದೆ. ನಮ್ಮ ಪಕ್ಷ ಅಜ್ಜ, ತಂದೆ, ತಾಯಿಗೆ ಮಾತ್ರ ಭಾರತ ರತ್ನ ನೀಡುವ ಕಾಂಗ್ರೆಸ್ ಪಕ್ಷವಲ್ಲ. ಬಿಜೆಪಿ ಯಾವಾಗಲೂ ದೇಶಕ್ಕೆ ಕೊಡುಗೆ ನೀಡಿದವರನ್ನು ಗೌರವಿಸುತ್ತದೆ ಎಂದರು.

ಅಲ್ಲದೆ, ಪದ್ಮ ಪ್ರಶಸ್ತಿ, ಪ್ರತಿಷ್ಠಿತ ಪ್ರಶಸ್ತಿಗಳ ಹಂಚಿಕೆಯನ್ನು ರಾಜಕೀಯವಾಗಿ ಮಾಡಬಾರದು ಎಂದರು. ಬಿಜೆಪಿ, ಎನ್‌ಡಿಎ ಮತ್ತು ಪ್ರಧಾನಿ ಮೋದಿ ಅವರು ಭಾರತ ರತ್ನ ಅಥವಾ ಪದ್ಮ ಪ್ರಶಸ್ತಿಗಳನ್ನು ನಿಜವಾದ ಸಾಧಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಹಿಂದೆ ಕೆಲವು ಪತ್ರಕರ್ತರ ಶಿಫಾರಸಿನ ಮೇರೆಗೆ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ, ಇಂದು ಅಂತಹ ಪ್ರಕ್ರಿಯೆ ಇಂದು ಜಾಗವಿಲ್ಲ ಎಂದರು.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ