Sasikala ‘ಜಯಲಲಿತಾ ಸಮಾಧಿ ಯಾಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು; ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ’

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 10, 2021 | 3:11 PM

ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ ಎಂದು ಮಾಧ್ಯಮಗಳಿಗೆ ವಿ.ಕೆ.ಶಶಿಕಲಾ ನಟರಾಜನ್​ ಪ್ರತಿಕ್ರಿಯಿಸಿದರು. ಜಯಾ ಸಮಾಧಿ ಏಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ತಲೆಬಾಗುತ್ತೇನೆ. ಎಲ್ಲರನ್ನೂ ಭೇಟಿಯಾಗಿ ಚರ್ಚಿಸಿ ರಾಜಕೀಯಕ್ಕೆ ಬರುತ್ತೇನೆ ಎಂದು 4 ವರ್ಷಗಳ ನಂತರ ಮಾಧ್ಯಮಗಳಿಗೆ ಶಶಿಕಲಾ ಪ್ರತಿಕ್ರಿಯೆ ನೀಡಿದರು.

Sasikala ‘ಜಯಲಲಿತಾ ಸಮಾಧಿ ಯಾಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು; ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ’
ವಿ.ಕೆ.ಶಶಿಕಲಾ ನಟರಾಜನ್​
Follow us on

ಚೆನ್ನೈ: ನಾನು ಖಂಡಿತವಾಗಿಯೂ ರಾಜಕೀಯಕ್ಕೆ ಬಂದೇ ಬರ್ತೇನೆ ಎಂದು ಮಾಧ್ಯಮಗಳಿಗೆ ವಿ.ಕೆ.ಶಶಿಕಲಾ ನಟರಾಜನ್​ ಪ್ರತಿಕ್ರಿಯಿಸಿದರು. ಜಯಾ ಸಮಾಧಿ ಏಕೆ ಮುಚ್ಚಿದ್ದಾರೆಂದು ಜನರಿಗೆ ಗೊತ್ತು. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ತಲೆಬಾಗುತ್ತೇನೆ. ಎಲ್ಲರನ್ನೂ ಭೇಟಿಯಾಗಿ ಚರ್ಚಿಸಿ ರಾಜಕೀಯಕ್ಕೆ ಬರುತ್ತೇನೆ ಎಂದು 4 ವರ್ಷಗಳ ನಂತರ ಮಾಧ್ಯಮಗಳಿಗೆ ಶಶಿಕಲಾ ಪ್ರತಿಕ್ರಿಯೆ ನೀಡಿದರು.

ಇನ್ನು, ಚೆನ್ನೈನತ್ತ ಪಯಣ ಬೆಳೆಸಿರುವ ಶಶಿಕಲಾ ನಟರಾಜನ್ ವೆಲೂರಿನ ಕೂತಂಭಾಕಂ ತಲುಪಿದ್ದಾರೆ. ವಿ.ಕೆ.ಶಶಿಕಲಾಗೆ ಅಲ್ಲಿ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ, ಅವರನ್ನು ನೋಡಲು ಸಾವಿರಾರು ಜನ ಜಮಾಯಿಸಿದರು.

ಅಂದ ಹಾಗೆ, ವೆಲೂರಿನ ಕೂತಂಭಾಕಂನಿಂದ ಚೆನ್ನೈ ಕೇವಲ 155 ಕಿ.ಮೀ. ಹಾಗಾಗಿ, ಚೆನ್ನೈ ಎಂಟ್ರಿ ಆಗುತ್ತಿದ್ದಂತೆ ನಗರದ ರಾಮಪುರಂನಲ್ಲಿರುವ ದಿ. ಮಾಜಿ ಸಿಎಂ M.G ರಾಮಚಂದ್ರನ್​​ ಮನೆಗೆ ಶಶಿಕಲಾ ಭೇಟಿ ನೀಡಲಿದ್ದಾರೆ. ಜಯಲಲಿತಾ ಓಡಾಡುತ್ತಿದ್ದ TN09.BX3377 ಟೊಯೋಟ ಲ್ಯಾಂಡ್ ಕ್ರೂಸರ್​ನಲ್ಲಿ ಶಶಿಕಲಾ ಪ್ರಯಾಣಿಸುತ್ತಿದ್ದಾರೆ.

MGR ಪ್ರತಿಮೆಗೆ ಮಾರ್ಲಾಪಣೆ ಮಾಡಿದ ನಂತರ ಶಶಿಕಲಾ T.ನಗರದಲ್ಲಿರುವ ತಮ್ಮ ಅಕ್ಕನ ಮಗಳ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

‘ತಮಿಳುನಾಡು ಸಿಎಂ ಬಂದರೂ ನೀವು ಹೀಗೆ ಮಾಡ್ತೀರಾ?’
ಈ ನಡುವೆ, ಬೆಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿರುವ ಶಶಿಕಲಾ ಬೆಂಬಲಿಗರು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ಪಲ್ಲಿಗೊಂಡ ಟೋಲ್​​ ಬಳಿ ರಸ್ತೆಗೆ ಅಡ್ಡಲಾಗಿ ಹಾಕಿದ್ದ ಬ್ಯಾರಿಕೇಡ್​ಗಳನ್ನ ತೆಗೆಯುವಂತೆ ಬೆಂಬಲಿಗರು ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ಪೊಲೀಸರ ಜೊತೆ ಶಶಿಕಲಾ ಅಡ್ವೊಕೇಟ್ ಟೀಂ ವಾಗ್ವಾದ ನಡೆಸಿತು. ಪೊಲೀಸರ ವಿರುದ್ಧ ಅಭಿಮಾನಿಗಳು ಧಿಕ್ಕಾರ ಕೂಗಿದರು. ತಮಿಳುನಾಡು ಸಿಎಂ ಬಂದರೂ ನೀವು ಹೀಗೆ ಮಾಡ್ತೀರಾ? ನಾಳೆ ಬೆಳಗ್ಗೆಯಾದ್ರೆ ಅವರು ವಿರೋಧ ಪಕ್ಷದಲ್ಲಿ ಇರ್ತಾರೆ ಎಂದು ಸಿಎಂ ಯಡಪ್ಪಾಡಿ ಪಳನಿ ಸ್ವಾಮಿ, ಡಿಸಿಎಂ ವಿರುದ್ಧ ಆಕ್ರೋಶ ಹೊರಹಾಕಿದರು.

Anti cow slaughter bill ವಿಧಾನಪರಿಷತ್​ನಲ್ಲಿ ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ

 

Published On - 7:55 pm, Mon, 8 February 21