
ಪಾಟ್ನಾ, ಸೆಪ್ಟೆಂಬರ್ 30: ಬಿಹಾರದಲ್ಲಿ ಈ ವರ್ಷವೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರ ಬಳಿಕ ಚುನಾವಣಾ ಆಯೋಗವು ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಖಾಸಗಿ ಸಂಸ್ಥೆ ‘ವೋಟ್ ವೈಬ್’ ಬಿಹಾರದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸಿದೆ.
ಬಿಹಾರದಲ್ಲಿರುವ ಪ್ರಮುಖ ಸಮಸ್ಯೆಗಳು ಯಾವುವು, ಲಾಲು ಪ್ರಸಾದ್ ಕುಟುಂಬದಲ್ಲಿನ ಒಡಕು ಚುನಾವಣೆ ಮೇಲೆ ಪರಿಣಾಮ ಬೀರುತ್ತಾ? ಪ್ರಧಾನಿ ಮೋದಿ ಹಾಗೂ ತಾಯಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹಂಚಿಕೊಂಡ ಎಐ ವಿಡಿಯೋದಿಂದ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಾ, ಇಂಡಿ ಒಕ್ಕೂಟ ಬಿಹಾರದಲ್ಲಿ ಕೈಗೊಂಡಿದ್ದ ಮತದಾರರ ಅಧಿಕಾರ ಯಾತ್ರೆಯಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಾಗಿದೆಯೇ? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ನಾಗರಿಕರಲ್ಲಿ ಕೇಳಲಾಗಿತ್ತು. ಅದಕ್ಕೆ ಅವರು ಏನು ಅಭಿಪ್ರಾಯ ತಿಳಿಸಿದ್ದಾರೆ ಎಂಬುದನ್ನು ಈ ಸಮೀಕ್ಷೆ ಬಹಿರಂಗಪಡಿಸಿದೆ.
ಲಾಲು ಪ್ರಸಾದ್ ಕುಟುಂಬದಲ್ಲಿ ನಡೆಯುತ್ತಿರುವ ವಿವಾದ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ?
ಲಾಲು ಪ್ರಸಾದ್ ಕುಟುಂಬದಲ್ಲಿ ನಡೆಯುತ್ತಿರುವ ವಿವಾದವು ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಎಂದು ಜನರನ್ನು ಕೇಳಿದಾಗ ಶೇ.45.8ರಷ್ಟು ಮಂದಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಶೇ.29.5ರಷ್ಟು ಮಂದಿ ಆರ್ಜೆಡಿ ಹಾಗೂ ಎಂಜಿಬಿ ಮೇಲೆ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.24.4 ಮಂದಿ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮತ್ತಷ್ಟು ಓದಿ: Votevibe Survey: ತಮಿಳುನಾಡು ಚುನಾವಣೆ, ಜನರ ನಾಡಿ ಮಿಡಿತ ಅರಿಯಲು ‘ವೋಟ್ ವೈಬ್’ ಸಮೀಕ್ಷೆ
ಅದರಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಶೇ. 48.2ರಷ್ಟು ಪುರುಷರು, ಶೇ.43.1ರಷ್ಟು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಅವರಲ್ಲಿ ಬಹುತೇಕರು 25 ರಿಂದ 34ವರ್ಷ ಒಳಗಿನವರಾಗಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ವಿಷಯವಸ್ತು ಯಾವುದು?
ಬಿಹಾರ ಚುನಾವಣೆಯಲ್ಲಿ ಈ ಬಾರಿಯ ಚುನಾವಣಾ ವಿಷಯವಸ್ತು ಯಾವುದು ಅಥವಾ ಬಿಹಾರದಲ್ಲಿರುವ ಪ್ರಮುಖ ಸಮಸ್ಯೆಯಾವುದು ಎಂದು ಕೇಳಿದಾಗ ಶೇ.39.2ರಷ್ಟು ಮಂದಿ ಅದು ನಿರುದ್ಯೋಗ ಎಂದು ಹೇಳಿದ್ದಾರೆ. ಶೇ.15.7ರಷ್ಟು ಮಂದಿ ಮತಗಳ್ಳತನ ಎಂದು ಹೇಳಿದರೆ, ಶೇ.13ರಷ್ಟು ಮಂದಿ ಭ್ರಷ್ಟಾಚಾರ ಎಂದಿದ್ದಾರೆ.
ಮಹಿಳಾ ರೋಜ್ಗಾರ್ ಯೋಜನೆಯಡಿ ನೀವು, ನಿಮ್ಮ ಕುಟುಂಬ 10 ಸಾವಿರ ಹಣ ಪಡೆದಿದ್ದೀರಾ, ಈ ಚುನಾವಣೆಯಲ್ಲಿ ಮತ ಯಾರಿಗೆ ಹಾಕ್ತೀರಾ?
ನೀವು ಮಹಿಳಾ ರೋಜ್ಗಾರ್ ಯೋಜನೆಯಡಿಯಲ್ಲಿ ನೀವು, ನಿಮ್ಮ ಕುಟುಂಬ 10 ಸಾವಿರ ರೂ. ಪಡೆದಿದ್ದರೆ ಚುನಾವಣೆಯಲ್ಲಿ ನಿಮ್ಮ ಆಯ್ಕೆ ಯಾವ ಪಕ್ಷವಾಗಿರುತ್ತದೆ ಎನ್ನುವ ಪ್ರಶ್ನೆ ಕೇಳಿದಾಗ ಶೇ.34.9ರಷ್ಟು ಮಂದಿ ಮಹಾಘಟಬಂಧನ್ಗೆ ಮತ ಹಾಕುತ್ತೇವೆ ಎಂದು ಹೇಳಿದ್ದಾರೆ. ಶೇ.34.8 ಮಂದಿ ಎನ್ಡಿಎಗೆ ಮತ ಹಾಕುವುದಾಗಿ ಹೇಳಿದ್ದಾರೆ.
ಬಿಜೆಪಿ/ಜೆಡಿಯು ನಾಯಕರ ವಿರುದ್ಧ ಪ್ರಶಾಂತ್ ಕಿಶೋರ್ ಮಾಡಿರುವ ಭ್ರಷ್ಟಾಚಾರ ಆರೋಪಗಳಿಗೆ ನೀವೇನಂತೀರಾ?
ಬಜೆಪಿ, ಜೆಡಿಯುನಾಯಕರ ಿರುದ್ಧ ಪ್ರಶಾಂತ್ ಕಿಶೋರ್ ಮಾಡಿರುವ ಆರೋಪಗಳು ಇದು ಎನ್‌ಡಿಎ ಸಾಧನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಶೇ.49.6ರಷ್ಟು ಮಂದಿ ಹೇಳಿದ್ದಾರೆ. ಶೇ.36.0 ರಷ್ಟು ಮಂದಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ತೇಜಸ್ವಿ ಯಾದವ್ ಬಿಹಾರ ಅಧಿಕಾರ ಯಾತ್ರೆಯಿಂದ ಪ್ರಯೋಜನಾಗಿದೆಯಾ?
ಹೌದು ತೇಜಸ್ವಿ ಯಾದವ್ ಅವರ ಬಿಹಾರ ಅಧಿಕಾರ ಯಾತ್ರೆಯು ಆರ್ಜೆಡಿ ಕಾರ್ಯಕರ್ತರಿಗೆ ಹೊಸ ಹುರುಪು ತುಂಬಿದೆ ಎಂದು ಶೇ.43.8ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.ಶೇ.25ರಷ್ಟು ಮಂದಿ ಯಾವುದೇ ಪರಿಣಾಮ ಬೀರವುದಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:09 am, Tue, 30 September 25