AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳೆಯನ ಕತ್ತು ಸೀಳಿ ಕೊಲೆಗೈದ ಗರ್ಭಿಣಿ ಗೆಳತಿ

ಛತ್ತೀಸ್​ಗಢದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಗರ್ಭಿಣಿ(Pregnant) ಗೆಳತಿ ತನ್ನ ಗೆಳೆಯನ ಕತ್ತು ಸೀಳಿರುವ ಘಟನೆ ವರದಿಯಾಗಿದೆ. ರಾಯ್‌ಪುರ ಪೊಲೀಸರು ಭಾನುವಾರ ನಗರದ ಗಂಜ್ ಪೊಲೀಸ್ ಠಾಣೆ ಪ್ರದೇಶದ ಲಾಡ್ಜ್‌ನಿಂದ ಯುವಕನ ಶವವನ್ನು ವಶಪಡಿಸಿಕೊಂಡಿದ್ದಾರೆ. ಈ ಭೀಕರ ಹತ್ಯೆಯನ್ನು ಅವನ 16 ವರ್ಷದ ಗೆಳತಿ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ, ಬಿಲಾಸ್‌ಪುರಕ್ಕೆ ಹಿಂತಿರುಗಿ ತನ್ನ ತಾಯಿಗೆ ಘಟನೆಯನ್ನು ವಿವರಿಸಿ ಬಳಿಕ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ಗೆಳೆಯನ ಕತ್ತು ಸೀಳಿ ಕೊಲೆಗೈದ ಗರ್ಭಿಣಿ ಗೆಳತಿ
ಕ್ರೈಂ
ನಯನಾ ರಾಜೀವ್
|

Updated on:Sep 30, 2025 | 1:21 PM

Share

ರಾಯ್​ಪುರ,ಸೆಪ್ಟೆಂಬರ್ 30: ಛತ್ತೀಸ್​ಗಢದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಗರ್ಭಿಣಿ(Pregnant) ಗೆಳತಿ ತನ್ನ ಗೆಳೆಯನ ಕತ್ತು ಸೀಳಿರುವ ಘಟನೆ ವರದಿಯಾಗಿದೆ. ರಾಯ್‌ಪುರ ಪೊಲೀಸರು ಭಾನುವಾರ ನಗರದ ಗಂಜ್ ಪೊಲೀಸ್ ಠಾಣೆ ಪ್ರದೇಶದ ಲಾಡ್ಜ್‌ನಿಂದ ಯುವಕನ ಶವವನ್ನು ವಶಪಡಿಸಿಕೊಂಡಿದ್ದಾರೆ. ಈ ಭೀಕರ ಹತ್ಯೆಯನ್ನು ಅವನ 16 ವರ್ಷದ ಗೆಳತಿ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ, ಬಿಲಾಸ್‌ಪುರಕ್ಕೆ ಹಿಂತಿರುಗಿ ತನ್ನ ತಾಯಿಗೆ ಘಟನೆಯನ್ನು ವಿವರಿಸಿ ಬಳಿಕ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ಪೊಲೀಸರ ಪ್ರಕಾರ, ಬಿಲಾಸ್ಪುರದ ಕೋನಿ ಪೊಲೀಸ್ ಠಾಣೆ ಪ್ರದೇಶದ ನಿವಾಸಿಯಾಗಿರುವ ಆರೋಪಿ ಬಾಲಕಿ ಸೆಪ್ಟೆಂಬರ್ 28 ರಂದು ತನ್ನ ಗೆಳೆಯ ಮೊಹಮ್ಮದ್ ಸದ್ದಾಂ ಅವರನ್ನು ಭೇಟಿಯಾಗಲು ರಾಯ್ಪುರಕ್ಕೆ ಹೋಗಿದ್ದಳು.

ಮೂಲತಃ ಬಿಹಾರದ ಸದ್ದಾಂ ಅಭನ್ಪುರದಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ರಾಯ್ಪುರದ ರಾಮನ್ ಮಂದಿರ ವಾರ್ಡ್‌ನ ಸತ್ಕರ್ ಗಲ್ಲಿಯಲ್ಲಿರುವ ಏವನ್ ಲಾಡ್ಜ್‌ನಲ್ಲಿ ಶನಿವಾರದಿಂದ ವಾಸವಿದ್ದರು. ಗರ್ಭಿಣಿಯಾಗಿರುವ ಅಪ್ರಾಪ್ತ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಸದ್ದಾಂ ಒತ್ತಡ ಹೇರಿದ್ದ ಎನ್ನಲಾಗಿದೆ.

ಇದರಿಂದಾಗಿ ಇಬ್ಬರ ಸಂಬಂಧ ಹಳಸಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ ಲಾಡ್ಜ್ ಹೊರಗೆ ನಡೆದ ತೀವ್ರ ವಾಗ್ವಾದದ ಸಂದರ್ಭದಲ್ಲಿ ಸದ್ದಾಂ ಆಕೆಗೆ ಚಾಕುವಿನಿಂದ ಬೆದರಿಕೆ ಹಾಕಿದ್ದ. ಸೆಪ್ಟೆಂಬರ್ 28 ರ ರಾತ್ರಿ, ಸದ್ದಾಂ ಲಾಡ್ಜ್ ಕೋಣೆಯೊಳಗೆ ಮಲಗಿದ್ದಾಗ, ಹುಡುಗಿ ಅದೇ ಹರಿತವಾದ ಚಾಕುವಿನಿಂದ ಅವನ ಕತ್ತು ಸೀಳಿದ್ದಳು.

ನಂತರ ಆಕೆ ಕೋಣೆಯನ್ನು ಹೊರಗಿನಿಂದ ಲಾಕ್ ಮಾಡಿ, ಸದ್ದಾಂನ ಮೊಬೈಲ್ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಳು. ನಂತರ ಪೊಲೀಸರ ದಾರಿ ತಪ್ಪಿಸಲು ಲಾಡ್ಜ್ ಕೋಣೆಯ ಕೀಲಿಯನ್ನು ಹತ್ತಿರದ ರೈಲ್ವೆ ಹಳಿ ಮೇಲೆ ಎಸೆದಿದ್ದಳು.

ಮತ್ತಷ್ಟು ಓದಿ: ಮದುವೆ ಆಗುತ್ತೇನೆ ಎಂದು ಗರ್ಭಿಣಿ ಮಾಡಿ ಓಡಿಹೋದ: ಕ್ರಿಕೆಟ್ ಕೋಚ್​​​ನ ಪಲ್ಲಂಗದಾಟ ಬಿಚ್ಚಿಟ್ಟ ಸಂತ್ರಸ್ತೆ

ಮರುದಿನ ಬೆಳಗ್ಗೆ, ಬಾಲಕಿ ಬಿಲಾಸ್ಪುರಕ್ಕೆ ಹಿಂತಿರುಗಿದ್ದಳು, ಆಕೆಯ ತಾಯಿ ಅವಳ ಬಳಿ ಪ್ರಶ್ನೆ ಕೇಳಿದಾಗ, ಹುಡುಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಘಾತಕ್ಕೊಳಗಾದ ಆಕೆಯ ತಾಯಿ ತಕ್ಷಣ ಆಕೆಯೊಂದಿಗೆ ಕೋನಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಅಲ್ಲಿ ಅವರು ಅಪರಾಧದ ಬಗ್ಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಸದ್ದಾಂ ದೇಹವನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರದಲ್ಲಿರುವ ಸದ್ದಾಂ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದಳು.ಇಬ್ಬರ ನಡುವೆ ಇದೇ ಕಾರಣಕ್ಕೆ ಪದೇ ಪದೇ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:19 pm, Tue, 30 September 25

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ