ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯ ವಿವರ ತಿಳಿಯುವ ಹಕ್ಕು ಮತದಾರನಿಗೆ ಇಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

|

Updated on: Apr 09, 2024 | 5:17 PM

Supreme Court matters: ಅಭ್ಯರ್ಥಿಗಳ ಎಲ್ಲಾ ಚರಾಸ್ತಿ ವಿವರಗಳನ್ನು ತಿಳಿಯುವ ಸಂಪೂರಣ ಹಕ್ಕು ಮತದಾರನಿಗೆ ಇಲ್ಲ ಎನ್ನುವ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಅರುಣಾಚಲದ ತೇಜು ವಿಧಾನಸಭಾ ಕ್ಷೇತ್ರದಲ್ಲಿ 2019ರಲ್ಲಿ ಗೆದ್ದು ಶಾಸಕರಾಗಿದ್ದ ಕಾರಿಖೋ ಕ್ರಿ ಅವರು ಆಸ್ತಿ ಘೋಷಣೆಯಲ್ಲಿ ತಮ್ಮ ಪತ್ನಿ ಮತ್ತು ಮಗನ ಹೆಸರಲ್ಲಿದ್ದ ಕಾರುಗಳ ವಿವರವನ್ನು ತಿಳಿಸಿಲ್ಲ ಎಂದು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಆರೋಪಿಸಿದ್ದರು. ಗುವಾಹಟಿ ಹೈಕೋರ್ಟ್ ಈ ಆರೋಪವನ್ನು ಪುರಸ್ಕರಿಸಿತ್ತು. ಆದರೆ, ಸುಪ್ರೀಂಕೋರ್ಟ್ ಬೇರೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯ ವಿವರ ತಿಳಿಯುವ ಹಕ್ಕು ಮತದಾರನಿಗೆ ಇಲ್ಲ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಸುಪ್ರೀಂಕೋರ್ಟ್
Follow us on

ನವದೆಹಲಿ, ಏಪ್ರಿಲ್ 9: ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ನಿರಾಳ ತರುವಂತಹ ತೀರ್ಪೊಂದರಲ್ಲಿ ಸುಪ್ರೀಂಕೋರ್ಟ್, ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯನ್ನು ತಿಳಿಯುವ ಹಕ್ಕು ಮತದಾರನಿಗೆ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಪಡದ ಸಂಗತಿಯಲ್ಲಿ ಅಭ್ಯರ್ಥಿ ತಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಹಕ್ಕು ಇರುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಅರುಣಾಚಲಪ್ರದೇಶದ ತೇಜು ವಿಧಾನಸಭಾ ಕ್ಷೇತ್ರದಲ್ಲಿ (Tezu assembly constituency) 2019ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದಿದ್ದ ಕಾರಿಖೋಕ ಕ್ರಿ (Karikho kri) ಅವರ ಶಾಸಕ ಸ್ಥಾನವನ್ನು ಕೋರ್ಟ್ ಎತ್ತಿಹಿಡಿದಿದೆ. ಸರಿಯಾಗಿ ಆಸ್ತಿ ಘೋಷಣೆ ಮಾಡಿಲ್ಲವೆಂದು ಕಾರಿಖೋ ಕ್ರಿ ಅವರ ಶಾಸಕ ಸ್ಥಾನವನ್ನು ಅಸಿಂಧು ಎಂದು ತೀರ್ಮಾನಿಸಿದ್ದ ಗುವಾಹಟಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಚರಾಸ್ತಿ ಬಹಳ ದೊಡ್ಡ ಮೊತ್ತದ್ದಾಗಿದ್ದರೆ ಮತ್ತು ಐಷಾರಾಮಿ ಜೀವನಶೈಲಿಯನ್ನು ಬಿಂಬಿಸುತ್ತಿದ್ದರೆ ಮಾತ್ರ ಅದನ್ನು ಆಸ್ತಿ ಘೋಷಣೆಯ ಅಫಿಡವಿಟ್​ನಲ್ಲಿ ಸೇರಿಸಬಹುದು. ಇಲ್ಲದಿದ್ದರೆ ಅಭ್ಯರ್ಥಿಗಳು ಪ್ರತಿಯೊಂದು ಚರಾಸ್ತಿಯ ವಿವರವನ್ನು ಬಹಿರಂಗಪಡಿಸುವ ಅಗತ್ಯ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸಂಜಯ್ ಕುಮಾರ್ ಅವರಿದ್ದ ಸುಪ್ರೀಂ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ.

ಅರುಣಾಚಲದ ಕಾರಿಖೋ ಕ್ರಿ ಮೇಲಿನ ಆರೋಪ ಏನಿದೆ?

ಕಾರಿಖೋ ಕ್ರಿ ಅವರ ಪತ್ನಿ ಮತ್ತು ಮಗ ಇಬ್ಬರ ಬಳಿ ಮೂರು ವಾಹನಗಳಿವೆ. ಅವನ್ನು ಕ್ರಿ ಅವರು ತಮ್ಮ ನಾಮಪತ್ರದ ವೇಳೆ ಅಫಿಡವಿಟ್​ನಲ್ಲಿ ಸೇರಿಸಿಲ್ಲ. ಇದು ನಿಯಮಕ್ಕೆ ವಿರುದ್ಧವಾಗಿದೆ. ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಎಂದು ಕೋರಿ ಆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನೆ ಮಾಡಿದ್ದರು. ಗುವಾಹಟಿ ಹೈಕೋರ್ಟ್ ಈ ಅಭಿಪ್ರಾಯವನ್ನು ಪುರಸ್ಕರಿಸಿತ್ತು.

ಇದನ್ನೂ ಓದಿ: ಕೇಜ್ರಿವಾಲ್​ಗೆ ಜೈಲೇ ಗತಿ; ಬಂಧನ ಕ್ರಮ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಆದರೆ, ಸುಪ್ರೀಂಕೋರ್ಟ್​ನಲ್ಲಿ ಈ ವಾದ ನಿಲ್ಲಲಿಲ್ಲ. ಕಾರಿಖೋ ಕ್ರಿ ನಾಮಪತ್ರ ಸಲ್ಲಿಸುವ ಮುನ್ನ ಈ ವಾಹನಗಳನ್ನು ಬೇರೆಯವರಿಗೆ ಉಡುಗೊರೆ ಕೊಡಲಾಗಿರುವುದು ಮತ್ತು ಮಾರಾಟ ಮಾಡಲಾಗಿರುವುದು ಗೊತ್ತಾಗಿದೆ. ಹೀಗಾಗಿ, ಇವನ್ನು ಕ್ರಿ ಅವರ ಪತ್ನಿ ಮತ್ತು ಮಗನ ಮಾಲಕತ್ವದಲ್ಲಿ ಈಗಲೂ ಇದೆ ಎಂದು ಪರಿಗಣಿಸಲಾಗದು ಎಂದೂ ಕೋರ್ಟ್ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ