ಆಸ್ಟ್ರೇಲಿಯಾದಿಂದ ವಾಪಸ್ ಆಗುತ್ತಿದ್ದಂತೆ ವಾಷಿಂಗ್ಟನ್​ ಸುಂದರ್​ ಹೆಗಲಿಗೆ ಪ್ರಮುಖ ಜವಾಬ್ದಾರಿ..

| Updated By: ರಾಜೇಶ್ ದುಗ್ಗುಮನೆ

Updated on: Jan 25, 2021 | 9:26 PM

ವಾಷಿಂಗ್ಟನ್ ಸುಂದರ್​ ಈ ಬಾರಿ ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದ ಚೊಚ್ಚಲ ಟೆಸ್ಟ್​ ಪಂದ್ಯಾವಳಿಯಲ್ಲಿ ಅರ್ಧಶತಕದೊಂದಿಗೆ ಭರ್ಜರಿ ಮಿಂಚಿ ತವರಿಗೆ ಆಗಮಿಸಿದ್ದಾರೆ. ಐತಿಹಾಸಿಕ ಗೆಲುವು ಹೊತ್ತು ಭಾರತಕ್ಕೆ ಮರಳಿದ ವಾಷಿಂಗ್ಟನ್ ಸುಂದರ್​ಗೆ ಇಲ್ಲಿಯೂ ಒಂದು ಸರ್ಪ್ರೈಸ್ ಕಾದಿತ್ತು.

ಆಸ್ಟ್ರೇಲಿಯಾದಿಂದ ವಾಪಸ್ ಆಗುತ್ತಿದ್ದಂತೆ ವಾಷಿಂಗ್ಟನ್​ ಸುಂದರ್​ ಹೆಗಲಿಗೆ ಪ್ರಮುಖ ಜವಾಬ್ದಾರಿ..
ವಾಷಿಂಗ್ಟನ್​ ಸುಂದರ್​
Follow us on

ಚೆನ್ನೈ: ಭಾರತ ಕ್ರಿಕೆಟ್​ ತಂಡದ ಆಲ್​ರೌಂಡರ್​ಆಟಗಾರ ವಾಷಿಂಗ್ಟನ್ ಸುಂದರ್​ ಅವರನ್ನು ಚೆನ್ನೈನ ಜಿಲ್ಲಾ ಚುನಾವಣಾ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ವಿಚಾರಕ್ಕೆ ವಾಷಿಂಗ್ಟನ್​ ಸುಂದರ್ ಸಿಕ್ಕಾಪಟೆ ಖುಷಿಯಾಗಿದ್ದಾರೆ. ಹೆಚ್ಚಿನ ಮತದಾರರನ್ನು ಸೆಳೆಯುವ, ಅದರಲ್ಲೂ ಯುವಕರನ್ನು ಹೆಚ್ಚಾಗಿ ಆಕರ್ಷಿಸುವ ಗುರಿಯನ್ನಿಟ್ಟುಕೊಂಡು ಕ್ರಿಕೆಟರ್ ವಾಷಿಂಗ್ಟನ್​ ಸುಂದರ್​ರನ್ನು ಚುನಾವಣಾ ಐಕಾನ್​ ಆಗಿ ನೇಮಕ ಮಾಡಿದ್ದಾಗಿ ಜಿಲ್ಲಾ ಚುನಾವಣಾ ಕಚೇರಿಯೂ ಆಗಿರುವ ಚೆನ್ನೈ ಕಾರ್ಪೋರೇಷನ್ ತಿಳಿಸಿದೆ.

ವಾಷಿಂಗ್ಟನ್ ಸುಂದರ್​ ಈ ಬಾರಿ ಆಸ್ಟ್ರೇಲಿಯಾದ ಗಬ್ಬಾದಲ್ಲಿ ನಡೆದ ಚೊಚ್ಚಲ ಟೆಸ್ಟ್​ ಪಂದ್ಯಾವಳಿಯಲ್ಲಿ ಅರ್ಧಶತಕದೊಂದಿಗೆ ಭರ್ಜರಿ ಮಿಂಚಿ ತವರಿಗೆ ಆಗಮಿಸಿದ್ದಾರೆ. ಐತಿಹಾಸಿಕ ಗೆಲುವು ಹೊತ್ತು ಭಾರತಕ್ಕೆ ಮರಳಿದ ವಾಷಿಂಗ್ಟನ್ ಸುಂದರ್​ಗೆ ಇಲ್ಲಿಯೂ ಒಂದು ಸರ್ಪ್ರೈಸ್ ಕಾದಿತ್ತು. ಬರುತ್ತಿದ್ದಂತೆ ಚೆನ್ನೈನ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ನೇಮಕವಾಗಿದ್ದಾರೆ.

ವಾಷಿಂಗ್ಟನ್​ ಸುಂದರ್​ ಅವರು ಆಸ್ಟ್ರೇಲಿಯಾದಿಂದ ಬರುತ್ತಿದ್ದಂತೆ ನಾವು ನಮ್ಮ ಯೋಚನೆಯನ್ನು ಅವರಿಗೆ ತಿಳಿಸಿದೆವು. ಅವರು ಕೂಡಲೇ ಒಪ್ಪಿಕೊಂಡರು. ಮುಂಬರುವ ವಿಧಾನಸಭಾ ಚುನಾವಣೆಯತ್ತ ಯುವಕರನ್ನು ಹೆಚ್ಚೆಚ್ಚು ಸೆಳೆಯುವ ಉದ್ದೇಶದಿಂದ, ಅದಕ್ಕೆ ಹೊಂದಿಕೆಯಾಗುವಂಥವರನ್ನು ಹುಡುಕುತ್ತಿದ್ದೆವು. ವಾಷಿಂಗ್ಟನ್​ ಸುಂದರ್​ ತಕ್ಕವರು ಎನ್ನಿಸಿತು ಚೆನ್ನೈ ಕಾರ್ಪೋರೇಷನ್ ಜಿಲ್ಲಾಧಿಕಾರಿ ಮೇಘನಾಥ್​ ರೆಡ್ಡಿ ತಿಳಿಸಿದ್ದಾರೆ.

ವಾಷಿಂಗ್ಟನ್ ಸುಂದರ್​ ಅವರನ್ನು ಒಳಗೊಂಡು ಸೋಷಿಯಲ್​ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಲು ನಿರ್ಧಿರಿಸಿರುವ ಜಿಲ್ಲಾಡಳಿತ, IthuNammaInnings ಎಂಬ ಹ್ಯಾಷ್​ಟ್ಯಾಗ್​ ಬಳಸಲು ತೀರ್ಮಾನಿಸಿದೆ.

ಇನ್ಮುಂದೆ ಕ್ರಿಕೆಟ್​ನಲ್ಲಿ ಬೌನ್ಸರ್​ ಬ್ಯಾನ್​?: ಮಹತ್ವದ ವರದಿ ನೀಡಿದ ತಜ್ಞರ ತಂಡ