ಪದ್ಮ ಪುರಸ್ಕಾರ | ಎಸ್​ಪಿಬಿ, ಬಿ.ಎಂ. ಹೆಗ್ಡೆಗೆ ಪದ್ಮವಿಭೂಷಣ, ಕಂಬಾರಗೆ ಪದ್ಮಭೂಷಣ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಕೇಂದ್ರ ಸರ್ಕಾರ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಘೋಷಣೆ ಮಾಡಿದೆ. ಎಸ್​.ಪಿ. ಬಾಲಸುಬ್ರಹ್ಮಣ್ಯಂ, ಬಿ.ಎಂ. ಹೆಗ್ಡೆ ಸೇರಿದಂತೆ ಹಲವು ಗಣ್ಯರಿಗೆ ಪದ್ಮವಿಭೂಷಣ ಗೌರವ ಸಿಕ್ಕಿದೆ.

ಪದ್ಮ ಪುರಸ್ಕಾರ | ಎಸ್​ಪಿಬಿ, ಬಿ.ಎಂ. ಹೆಗ್ಡೆಗೆ ಪದ್ಮವಿಭೂಷಣ, ಕಂಬಾರಗೆ ಪದ್ಮಭೂಷಣ
ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ
TV9kannada Web Team

| Edited By: ganapathi bhat

Apr 06, 2022 | 8:40 PM

ದೆಹಲಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಕೇಂದ್ರ ಸರ್ಕಾರ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಗಮನಾರ್ಹ ಸಾಧನೆ ಮಾಡಿರುವ ಪೊಲೀಸ್ ಸಿಬ್ಬಂದಿಗೂ ವಿವಿಧ ಮೆಡಲ್​ಗಳನ್ನು ಘೋಷಿಸಲಾಗಿದೆ.

ಪದ್ಮ ವಿಭೂಷಣ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ (ಕಲೆ), ಉಡುಪಿಯ ಖ್ಯಾತ ವೈದ್ಯ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ-ಔಷಧ ಕ್ಷೇತ್ರ), ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ (ಸಾರ್ವಜನಿಕ ಕ್ಷೇತ್ರ), ನರೀಂದರ್ ಸಿಂಗ್ ಕಪಾನಿ (ವಿಜ್ಞಾನ ಮತ್ತು ಇಂಜಿನಿಯರಿಂಗ್) ಮೌಲಾನಾ ವಹಿದುದೀನ್ ಖಾನ್ (ಆಧ್ಯಾತ್ಮ ವಿಭಾಗ), ಬಿ.ಬಿ. ಲಾಲ್ (ಪುರಾತತ್ವ ಶಾಸ್ತ್ರ ವಿಭಾಗ) ಹಾಗೂ ಒಡಿಶಾದ ಸುದರ್ಶನ್ ಸಾಹೊ (ಕಲೆ).

ಪದ್ಮ ಭೂಷಣ 10 ಸಾಧಕರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಮಾಜಿ ಕೇಂದ್ರ ಸಚಿವ ದಿವಂಗತ ರಾಮ್‌ವಿಲಾಸ್‌ ಪಾಸ್ವಾನ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್‌, ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್, ಗುಜರಾತ್ ಮಾಜಿ ಮುಖ್ಯಮಂತ್ರಿ ಕೆಶು ಭಾಯ್ ಪಟೇಲ್, ಕೆ.ಎಸ್.​​ ಚಿತ್ರ, ನೃಪೇಂದ್ರ ಮಿಸ್ರಾ, ಕಲ್ಬೆ ಸಾದಿಕ್, ರಜನಿಕಾಂತ್ ದೇವಿದಾಸ್ ಶ್ರೋಫ್, ತಾರ್​ಲೋಚನ್ ಸಿಂಗ್ ಮುಂತಾದವರಿಗೆ ಪದ್ಮ ಭೂಷಣ ಲಭಿಸಿದೆ.

ಸಾಹಿತಿ ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ ಮತ್ತು ವೈದ್ಯ ಬಿ.ಎಂ. ಹೆಗ್ಡೆ ಅವರಿಗೆ ಪದ್ಮವಿಭೂಷಣ ಸಿಕ್ಕಿದೆ.

ಪದ್ಮಶ್ರೀ ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಕರ್ನಾಟಕದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆರ್.ಲಕ್ಷ್ಮೀನಾರಾಯಣ ಕಶ್ಯಪ್‌ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಕ್ಷೇತ್ರದಿಂದ ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ.

ಪೊಲೀಸ್ ಮೆಡಲ್ ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವೀಸ್​ಗೆ ಕರ್ನಾಟಕದಿಂದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ. IGP ಡಾ. ಸುಬ್ರಮಣ್ಯೇಶ್ವರ ರಾವ್ ಅಯ್ಯಂಕಿ, SP ಬಾಬಾಸಾಬ್ ಶಿವಗೌಡ ನೆಮಗೌಡ್, DYSPಗಳಾದ ಬಸವಣ್ಣಪ್ಪ ರಾಮಚಂದ್ರ, ಅಶೋಕ ಡಿ, ಸಿ. ಬಾಲಕೃಷ್ಣ, ವಾಸುದೇವ್ ವಿ.ಕೆ., CI ಬಾಲಚಂದ್ರ ನಾಯ್ಕ್, ACIಗಳಾದ ಹೊನ್ನಗಂಗಯ್ಯ ಈಶ್ವರಯ್ಯ, ಪ್ರಕಾಶ್, ಪೊಲೀಸ್ ಅಧಿಕಾರಿ ಬಸವಯ್ಯ ಪುಟ್ಟಸ್ವಾಮಿ, ರಿಸರ್ವ್ SIಗಳಾದ ವೆಂಕಟೇಶ್, ಮೋಹನ್​ರಾಜು ಕುರುಡಗಿ, ವೆಂಕಟಸ್ವಾಮಿ ಚಿನ್ನಪ್ಪ, ಜೀತೇಂದ್ರ ಕುಡುಕಾಡಿ ರಾಧಾಕೃಷ್ಣ ರೈ, ಶಶಿಕಕುಮಾರ್, ಸಶಸ್ತ್ರ ಪಡೆಯ ಮುಖ್ಯ ಪೇದೆ ರಾಮಚಂದ್ರ ಲೋಕೇಶ್, ಮುಖ್ಯ ಪೇದೆ ಶ್ರೀ ಉಸ್ಮಾನ್ ಸಾಬ್, ಸತೀಶ್ ಕೆಂಪಯ್ಯ ವೆಂಕಟಪ್ಪ ಹಾಗೂ ಪ್ರಕಾಶ್ ಶೆಟ್ಟಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಮೆಡಲ್ ಪಡೆಯಲಿದ್ದಾರೆ.

ಗಣರಾಜ್ಯೋತ್ಸವ ವಿಶೇಷ | ಸಂವಿಧಾನ ಪ್ರತಿಯ ಮೆರುಗು ಹೆಚ್ಚಿಸಿದ ಶಾಂತಿನಿಕೇತನ ಕಲಾವಿದರ ಚಿತ್ರಕಲೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada