ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮಾಸ ಶಿವರಾತ್ರಿ ವಿಶೇಷ ದಿನವಾದ (Masa Shivaratri) ಇಂದು ಗುರುವಾರ ಉತ್ತರಾಖಂಡದ ಪಿಥೋರಗಢದ ಪಾರ್ವತಿ ಕುಂಡದಲ್ಲಿ (Parvati Kund, Pithoragarh, Uttarakhand) ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು (Spiritual). ಕುಮಾವೂನ್ ಪ್ರದೇಶಕ್ಕೆ (Kumaon region) ಒಂದು ದಿನದ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರವಾಸದ ವೇಳೆ ಪ್ರಧಾನಿ ಗುಂಜಿ ಗ್ರಾಮಕ್ಕೂ ಭೇಟಿ ನೀಡಲಿದ್ದಾರೆ.
ಈ ಭಾಗದಲ್ಲಿ ಅಭಿವೃದ್ಧಿ ಕೆಲಸಗಳ ವೇಗವನ್ನು ಹೆಚ್ಚಿಸಲು ನಾನು ಪಿಥೋರಗಢದಲ್ಲಿ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. “ಗುಂಜಿ ಗ್ರಾಮದ ಜನರೊಂದಿಗೆ ಸಂವಹನ ನಡೆಸುವ ಉತ್ತಮ ಅವಕಾಶವೂ ನನಗೆ ಸಿಗುತ್ತದೆ. ಪ್ರವಾಸದ ಸಮಯದಲ್ಲಿ ನಾನು ಆಧ್ಯಾತ್ಮಿಕವಾಗಿ ಮಹತ್ವಪೂರ್ಣವಾದ ಪಾರ್ವತಿ ಕುಂಡದ ದರ್ಶನ ಮತ್ತು ಜಗೇಶ್ವರ ಧಾಮದಲ್ಲಿ (Jageshwar Dham) ಪೂಜೆಯನ್ನು ಸಹ ಕಾತುರದಿಂದ ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದರು.
Sharing some more glimpses from Parvati Kund. pic.twitter.com/knqEzDpa6U
— Narendra Modi (@narendramodi) October 12, 2023
ನೈನಿ ಸೈನಿ ವಿಮಾನ ನಿಲ್ದಾಣದಿಂದ ಸಾರ್ವಜನಿಕ ಸಭೆಯ ಸ್ಥಳಕ್ಕೆ ಪ್ರಯಾಣಿಸುವಾಗ ಉತ್ತರಾಖಂಡದ ಕುಮಾವೂನ್ ಪ್ರದೇಶದ ಸಾಂಸ್ಕೃತಿಕ ತಂಡಗಳು ಭಿತ್ತಿಚಿತ್ರಗಳು ಮತ್ತು ವರ್ಣಚಿತ್ರಗಳಿಂದ ಅಲಂಕರಿಸಲ್ಪಟ್ಟ ನವೀಕರಿಸಿದ 6 ಕಿಮೀ ರಸ್ತೆಯ ಹಲವಾರು ಸ್ಥಳಗಳಲ್ಲಿ ಮೋದಿಗೆ ಸ್ವಾಗತ ಕೋರಲಾಗಿದೆ.
#WATCH | Uttarakhand: Prime Minister Narendra Modi performs pooja at Parvati Kund in Pithoragarh. pic.twitter.com/7b0kvg1IrY
— ANI (@ANI) October 12, 2023
ಮೋದಿ ಅವರು ಜೋಲಿಂಗ್‌ಕಾಂಗ್‌ನಲ್ಲಿ ಶಿವನ ವಾಸಸ್ಥಾನವಾದ ಆದಿ ಕೈಲಾಸ ಶಿಖರದ ದರ್ಶನದೊಂದಿಗೆ ತಮ್ಮ ಭೇಟಿಯನ್ನು ಪ್ರಾರಂಭಿಸಿದ್ದಾರೆ, ಅಲ್ಲಿಂದ ಅವರು ಗುಂಜಿ ಗ್ರಾಮಕ್ಕೆ ತೆರಳುತ್ತಾರೆ. ಅಲ್ಲಿ ಅವರು ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿಯನ್ನು ಭೇಟಿಯಾಗಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಬಿಡುಗಡೆ ಮಾಡಿದ ಪ್ರವಾಸವನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.
#WATCH | Pithoragarh, Uttarakhand: PM Narendra Modi performs pooja at Parvati Kund.
PM Modi will also visit Gunji village to interact with local people, along with the Army, ITBP and BRO. pic.twitter.com/BPLv8eql5I
— ANI (@ANI) October 12, 2023
ನಂತರ ಅವರು ಜಗೇಶ್ವರ ಧಾಮದಲ್ಲಿ ಭಗವಾನ್ ಶಿವನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಪಿಥೋರಗಢದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Thu, 12 October 23