ನವದೆಹಲಿ: ದೆಹಲಿಯಲ್ಲಿ 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ಉಂಟಾಗಿದೆ. ಉತ್ತರ ಭಾರತದಾದ್ಯಂತ ಶಾಖದ ಅಲೆಯು (Heatwave) ವ್ಯಾಪಿಸುತ್ತಿರುವ ಸಮಯದಲ್ಲಿ ದೆಹಲಿಯ (Delhi) ಹಲವಾರು ಪ್ರದೇಶಗಳಲ್ಲಿ ನೀರಿನ ಕೊರತೆ (Water Crisis) ಉಂಟಾಗಿದೆ. ದೆಹಲಿಯಲ್ಲಿ ಇದೀಗ ನೀರಿನ ಬಿಕ್ಕಟ್ಟು ಹೆಚ್ಚಾಗಿದೆ. ಈ ನಡುವೆ ದೆಹಲಿಯಲ್ಲಿ ನೀರಿನ ಸಮಸ್ಯೆಯ ಕುರಿತು ಆಮ್ ಆದ್ಮಿ ಪಕ್ಷ (AAP) ಮತ್ತು ಬಿಜೆಪಿ (BJP) ನಡುವೆ ಮಾತಿನ ಚಕಮಕಿ ನಡೆದಿದೆ. ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿಸಲು ಬಿಜೆಪಿ ಹೊಸ ಸಂಚು ರೂಪಿಸಿದೆ. ಹರಿಯಾಣ ಸರ್ಕಾರದ ಮೂಲಕ ಬಿಜೆಪಿ ಉದ್ದೇಶಪೂರ್ವಕವಾಗಿಯೇ ರಾಷ್ಟ್ರ ರಾಜಧಾನಿ ದೆಹಲಿಗೆ ನೀರು ಸರಬರಾಜು ನಿಲ್ಲಿಸಿದೆ ಎಂದು ದೆಹಲಿ ಸಚಿವೆ ಅತಿಶಿ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ಎಎಪಿಯನ್ನು ಗುರಿಯಾಗಿಸಲು ಬಿಜೆಪಿ ಷಡ್ಯಂತ್ರಗಳನ್ನು ರೂಪಿಸುತ್ತಿದೆ ಎಂದು ಅತಿಶಿ ಹೇಳಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾದ 5 ದಿನಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಎಎಪಿ ಚುನಾವಣೆಯಲ್ಲಿ ಪ್ರಚಾರ ಮಾಡಲು ಸಾಧ್ಯವಾಗದಂತೆ ಬಂಧಿಸಲಾಯಿತು. ಅವರು ಮಧ್ಯಂತರ ಜಾಮೀನಿನ ಮೇಲೆ ಹೊರಬಂದ ನಂತರ, ಅವರು ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರನ್ನು ಬಳಸಿಕೊಂಡು ಕೇಜ್ರಿವಾಲ್ ಮೇಲೆ ಆರೋಪ ಹೊರಿಸಲು ಪ್ರಯತ್ನಿಸಿದರು. ಆದರೆ ಆ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಅತಿಶಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಆಮ್ ಆದ್ಮಿ ಪಕ್ಷಕ್ಕೆ ವಿದೇಶಗಳಿಂದ 7 ಕೋಟಿ ದೇಣಿಗೆ; ಗೃಹ ಸಚಿವಾಲಯಕ್ಕೆ ಪತ್ರ ಬರೆದ ಇಡಿ
ದೆಹಲಿಯಲ್ಲಿ ನೀರಿನ ಬಿಕ್ಕಟ್ಟು ಸೃಷ್ಟಿಸಲು ಮತ್ತು ಹರಿಯಾಣ ಸರ್ಕಾರದ ಮೂಲಕ ರಾಷ್ಟ್ರ ರಾಜಧಾನಿಗೆ ನೀರು ಪೂರೈಕೆಯನ್ನು ನಿಲ್ಲಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ ಅತಿಶಿ ಆರೋಪಿಸಿದ್ದಾರೆ. ಈ ಮೊದಲು ಸಮಸ್ಯೆ ಇರದ ಸ್ಥಳಗಳಿಂದಲೂ ನೀರಿನ ಕೊರತೆಯ ಬಗ್ಗೆ ದೂರುಗಳು ಬಂದಿವೆ. ಇದರಿಂದಾಗಿ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅತಿಶಿ ಹೇಳಿದ್ದಾರೆ.
#WATCH | Delhi minister and AAP leader Atishi says, “Ahead of the voting on 25th May (in Delhi), BJP has hatched a new conspiracy to target AAP and disturb the people of Delhi. Under this conspiracy, through its Haryana government, the BJP has stopped the water flow to Delhi.… pic.twitter.com/ystZxceoVF
— ANI (@ANI) May 22, 2024
ದೆಹಲಿಯ ಎಎಪಿ ಸರ್ಕಾರವು ಇಂದು ಹರಿಯಾಣ ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದು ಅವರು ಹೇಳಿದ್ದಾರೆ. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದರೆ ಆಮ್ ಆದ್ಮಿ ಪಕ್ಷ ನೇತೃತ್ವದ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೋಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಮ್ ಆದ್ಮಿ ನಾಯಕರೊಂದಿಗೆ ನಾಳೆ ಬಿಜೆಪಿ ಕಚೇರಿಗೆ ಬರುತ್ತೇನೆ, ಬಂಧಿಸಿ ನೋಡೋಣ; ಕೇಜ್ರಿವಾಲ್
ಮೇ 21ರಂದು ಬಹುಶಃ ಇತಿಹಾಸದಲ್ಲಿ ಮೊದಲ ಬಾರಿಗೆ ಯಮುನಾ ನದಿಯ ನೀರಿನ ಮಟ್ಟ 670.9 ಅಡಿಗಳಿಗೆ ಇಳಿದಿದೆ” ಎಂದು ಅವರು ಹೇಳಿದ್ದಾರೆ. ಎಎಪಿ ಸರ್ಕಾರದ ಇಮೇಜ್ ಅನ್ನು ಕಳಂಕಗೊಳಿಸಲು ಮತ್ತು ದೆಹಲಿಯ ಜನರಿಗೆ ತೊಂದರೆ ನೀಡಲು ಬಿಜೆಪಿ ಈ ನೀರಿನ ಬಿಕ್ಕಟ್ಟನ್ನು ಉಂಟುಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದಲೂ ಎಎಪಿಯನ್ನು ಗುರಿಯಾಗಿಸಲು ಬಿಜೆಪಿ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಆಮ್ ಆದ್ಮಿ ಪಕ್ಷಕ್ಕೆ ವಿದೇಶಿ ನಿಧಿಯ ಹಳೆಯ ವಿಷಯವನ್ನು ಈಗ ಎಳೆದುತರಲಾಗಿದೆ. ಈಗ ಬಿಜೆಪಿಯ ಹರಿಯಾಣ ಸರ್ಕಾರದ ಮೂಲಕ ದೆಹಲಿಗೆ ಯಮುನಾ ನೀರು ಪೂರೈಕೆಯನ್ನು ನಿಲ್ಲಿಸಲಾಗಿದೆ ಎಂದು ಅತಿಶಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ