AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amit Shah: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 30 ಸ್ಥಾನ ಪಡೆದರೆ ಟಿಎಂಸಿ ಛಿದ್ರವಾಗಲಿದೆ; ಅಮಿತ್ ಶಾ

ಮಮತಾ ದೀದಿ ಸಿಎಎ ಅನುಷ್ಠಾನದ ವಿರುದ್ಧ ನಿಂತಿದ್ದಾರೆ. ಏಕೆಂದರೆ ಅವರು ತಮ್ಮ ಮತ ಬ್ಯಾಂಕ್‌ಗೆ ಹೆದರುತ್ತಾರೆ. ಒಳನುಸುಳುವಿಕೆಯ ವಿಷಯವು ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಗಂಭೀರ ಆತಂಕ ತಂದಿಟ್ಟಿದೆ. ಬಂಗಾಳದಲ್ಲಿ ಬಿಜೆಪಿ 30 ಸ್ಥಾನಗಳನ್ನು ಪಡೆದರೆ ಟಿಎಂಸಿ ವಿಭಜನೆಯಾಗುತ್ತದೆ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಗಮನ ಖಚಿತ ಎಂದು ಅಮಿತ್ ಶಾ ಹೇಳಿದ್ದಾರೆ.

Amit Shah: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 30 ಸ್ಥಾನ ಪಡೆದರೆ ಟಿಎಂಸಿ ಛಿದ್ರವಾಗಲಿದೆ; ಅಮಿತ್ ಶಾ
ಅಮಿತ್ ಶಾ
ಸುಷ್ಮಾ ಚಕ್ರೆ
|

Updated on: May 22, 2024 | 4:03 PM

Share

ಕೊಲ್ಕತ್ತಾ: 2019ರಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿ 25 ಪ್ಲಸ್ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಪಶ್ಚಿಮ ಬಂಗಾಳ, ತೆಲಂಗಾಣ ಮತ್ತು ಒಡಿಶಾದಲ್ಲಿ ಬಿಜೆಪಿಯ ಮತ ಹಂಚಿಕೆ ಮತ್ತು ಸ್ಥಾನಗಳು ಹೆಚ್ಚಾಗಲಿವೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಮಂಗಳವಾರ ಭವಿಷ್ಯ ನುಡಿದಿದ್ದಾರೆ. ಇದರ ನಡುವೆ ಪಶ್ಚಿಮ ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ 30 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ (BJP) ಗೆಲ್ಲಲಿದೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಇಂದು ಭವಿಷ್ಯ ನುಡಿದಿದ್ದಾರೆ.

ಒಂದು ವೇಳೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 30 ಸ್ಥಾನಗಳನ್ನು ಪಡೆದರೆ ಟಿಎಂಸಿ ವಿಭಜನೆಯಾಗುತ್ತದೆ ಮತ್ತು ಮಮತಾ ಬ್ಯಾನರ್ಜಿ ಸರ್ಕಾರದ ನಿರ್ಗಮನ ಖಚಿತ ಎಂದು ಅಮಿತ್ ಶಾ ಪುರ್ಬಾ ಮೇದಿನಿಪುರ ಜಿಲ್ಲೆಯ ಕಾಂತಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸರ್ಕಾರ ಬೇಕೆಂದೇ ದೆಹಲಿಗೆ ನೀರು ಪೂರೈಕೆ ನಿಲ್ಲಿಸಿದೆ; ಆಪ್ ಆರೋಪ

ಬಂಗಾಳದ 25 ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದ್ದು, ಉಳಿದ ಕ್ಷೇತ್ರಗಳಲ್ಲಿ ಮುಂದಿನ 2 ಹಂತಗಳಲ್ಲಿ 8 ಸ್ಥಾನಗಳಿಗೆ ಮೇ 25ರಂದು ಮತ್ತು 9 ಸ್ಥಾನಗಳಿಗೆ ಜೂನ್ 1ರಂದು ಮತದಾನ ನಡೆಯಲಿದೆ.

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬಂಗಾಳವು ನುಸುಳುಕೋರರಿಗೆ ಸುರಕ್ಷಿತ ಸ್ವರ್ಗವಾಗಿದೆ ಎಂದು ಅಮಿತ್ ಶಾ ಅವರು ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಒಳನುಸುಳುವಿಕೆಯ ವಿಷಯವು ಬಂಗಾಳಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಗಂಭೀರ ಆತಂಕ ತಂದಿಟ್ಟಿದೆ. ಬಂಗಾಳದಲ್ಲಿ ಜನಸಂಖ್ಯಾಶಾಸ್ತ್ರ ನಿರಂತರವಾಗಿ ಬದಲಾಗುತ್ತಿದೆ. ಮಮತಾ ದೀದಿ ಅವರು ತಮ್ಮ ಮತಬ್ಯಾಂಕ್ ರಾಜಕಾರಣಕ್ಕಾಗಿ ರಾಷ್ಟ್ರದ ಭದ್ರತೆಯನ್ನು ಪಣಕ್ಕಿಡುತ್ತಿದ್ದಾರೆ.” ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 272 ಸ್ಥಾನ ಗೆಲ್ಲದಿದ್ದರೆ ಬಿಜೆಪಿಯ ಪ್ಲಾನ್ ಬಿ ಏನು?; ಅಮಿತ್ ಶಾ ಉತ್ತರ ಹೀಗಿದೆ

ಒಳನುಸುಳುಕೋರರು ಮಮತಾ ಬ್ಯಾನರ್ಜಿಯವರ ವೋಟ್ ಬ್ಯಾಂಕ್ ಆಗಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ಮಮತಾ ದೀದಿ ಸಿಎಎ ಅನುಷ್ಠಾನದ ವಿರುದ್ಧ ನಿಂತಿದ್ದಾರೆ. ಏಕೆಂದರೆ ಅವರು ತಮ್ಮ ಮತ ಬ್ಯಾಂಕ್‌ಗೆ ಹೆದರುತ್ತಾರೆ. ಯುಪಿಎ ಆಡಳಿತದಲ್ಲಿ ಪಾಕಿಸ್ತಾನಿ ನುಸುಳುಕೋರರು ನಮ್ಮ ಮೇಲೆ ದಾಳಿ ಮಾಡಿ ನಂತರ ಪರಾರಿಯಾಗುತ್ತಿದ್ದರು. ಆದರೆ, ಮೋದಿ ಸರ್ಕಾರವು ಯುಆರ್‌ಐ ಮತ್ತು ವೈಮಾನಿಕ ದಾಳಿಯಂತಹ ಭಯೋತ್ಪಾದಕ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ