Water Crisis: ಬೆಂಗಳೂರಿನಲ್ಲಿ ಉಲ್ಬಣಗೊಳ್ಳುತ್ತಿದೆ ನೀರಿನ ಬಿಕ್ಕಟ್ಟು, ದಕ್ಷಿಣ ಭಾರತದ ಜಲಾಶಯಗಳ ಸ್ಥಿತಿಗತಿ ಹೇಗಿದೆ?
ದಕ್ಷಿಣ ಭಾರತದ ಜಲಾಶಯಗಳು ಒಣಗುತ್ತಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ, ಎಲ್ಲಕ್ಕಿಂತ ಮೊದಲು ಬೆಂಗಳೂರಿನಲ್ಲಿ ನೀರಿನ ಅಭಾವ ತಲೆದೋರಿದೆ. ಹಾಗಾದರೆ ದಕ್ಷಿಣ ಭಾರತದ ಜಲಾಶಯಗಳ ಸ್ಥಿತಿಗತಿ ಹೇಗಿದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಬೆಂಗಳೂರಿನ ವಸತಿ ಮತ್ತು ಕೈಗಾರಿಕಾ ಪ್ರದೇಶಗಳು ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಆದರೆ ಸಮಸ್ಯೆಯು ಒಂದು ರಾಜ್ಯದಲ್ಲಿ ಒಂದು ನಗರಕ್ಕೆ ಸೀಮಿತವಾಗಿದ್ದಲ್ಲ. ನೈಋತ್ಯ ಮುಂಗಾರಿನ ದುರ್ಬಲತೆಯಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಾವೇರಿ ನದಿ ಜಲಾನಯನ ಜಲಾಶಯಗಳಲ್ಲಿನ ನೀರಿನ ಸಂಗ್ರಹವು ಕುಗ್ಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಗೆ ಒದಗಿಸುವ ಅಣೆಕಟ್ಟುಗಳಲ್ಲಿಯೂ ಕಡಿಮೆ ನೀರು ಸಂಗ್ರಹವಾಗಿದೆ. ಈ ಕುರಿತು ಇಂಡಿಯಾ ಟುಡೇ ಮಾಡಿರುವ ವರದಿ ಇಲ್ಲಿದೆ.
ಕರ್ನಾಟಕವು 16 ಪ್ರಮುಖ ಜಲಾಶಯಗಳನ್ನು ಹೊಂದಿದ್ದು, 2023ರಲ್ಲಿ ಶೇಕಡಾ 45 ಕ್ಕೆ ಹೋಲಿಸಿದರೆ ಶೇಕಡಾ 29 ರಷ್ಟು ಮಾತ್ರ ತುಂಬಿದೆ. 16 ಜಲಾಶಯಗಳಲ್ಲಿ 12 ನೀರಿನ ಮಟ್ಟವು ಹತ್ತು ವರ್ಷಗಳ ಸರಾಸರಿ 40 ಶೇಕಡಾಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಜಲ ಆಯೋಗದ ಪ್ರಕಾರ ನಾರಾಯಣಪುರ, ಕೃಷ್ಣರಾಜ ಸಾಗರ, ಮತ್ತು ಭದ್ರಾ ಜಲಾಶಯಗಳಲ್ಲಿ ದಶಕದ ಸರಾಸರಿಗಿಂತ ಶೇಕಡಾ 30ರಷ್ಟು ಕಡಿಮೆ ನೀರು ಇದೆ .
ಜಲಾಶಯಗಳಲ್ಲಿನ ನೀರಿನ ಕೊರತೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಆಂಧ್ರಪ್ರದೇಶದ ಜಲಾಶಯಗಳಲ್ಲಿ ಕಳೆದ ವರ್ಷ ಶೇ.66ರಷ್ಟು ನೀರು ಸಂಗ್ರಹವಾಗಿದ್ದರೆ, ಶೇ.22ರಷ್ಟು ನೀರು ಸಂಗ್ರಹವಾಗಿದೆ. ತೆಲಂಗಾಣವು ಕಳೆದ ವರ್ಷ ಶೇಕಡಾ 59 ರ ವಿರುದ್ಧ ಶೇಕಡಾ 42 ರಷ್ಟಿದೆ. ಮತ್ತು ಕೇರಳವು ಕಳೆದ ವರ್ಷ ಶೇಕಡಾ 70 ರ ವಿರುದ್ಧ ಶೇಕಡಾ 35 ರಷ್ಟು ಹೊಂದಿದೆ. ಒಟ್ಟಾರೆಯಾಗಿ, ದಕ್ಷಿಣದ ಜಲಾಶಯಗಳು ಕಳೆದ ವರ್ಷ 52 ಪ್ರತಿಶತಕ್ಕಿಂತ 43 ಪ್ರತಿಶತದಷ್ಟು ಸಾಮರ್ಥ್ಯ ಹೊಂದಿವೆ.
ಮತ್ತಷ್ಟು ಓದಿ: Bengaluru Water Crisis: ಬೆಂಗಳೂರಿನಲ್ಲಿ ಟ್ಯಾಂಕರ್ ಕಳ್ಳಾಟಕ್ಕೆ ಬ್ರೇಕ್, ಕೊನೆಗೂ ಟ್ಯಾಂಕರ್ ನೀರಿಗೆ ದರ ಫಿಕ್ಸ್: ಇಲ್ಲಿದೆ ದರ ವಿವರ
ಜಲಾಶಯದ ಸ್ಥಿತಿಯನ್ನು ಪತ್ತೆಹಚ್ಚಿದ 21 ಪ್ರಮುಖ ರಾಜ್ಯಗಳಲ್ಲಿ, 15 ಜಲಾಶಯಗಳು ದಶಕದ ಸರಾಸರಿಗಿಂತ ಕೆಳಗಿವೆ. ತಮಿಳುನಾಡು, ಕರ್ನಾಟಕ, ಮತ್ತು ಆಂಧ್ರಪ್ರದೇಶ, ಬಿಹಾರ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ, ಜಲಾಶಯದ ಮಟ್ಟವು ದಶಕದ ಸರಾಸರಿಗಿಂತ 20 ಪ್ರತಿಶತಕ್ಕಿಂತ ಕಡಿಮೆಯಾಗಿದೆ.
ಏತನ್ಮಧ್ಯೆ, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂದರೆ ಹೌಸಿಂಗ್ ಸೊಸೈಟಿಯು ನಿವಾಸಿಗಳಿಗೆ 5,000 ರೂಪಾಯಿ ದಂಡವನ್ನು ಘೋಷಿಸಿದೆ ಮತ್ತು ಕುಡಿಯುವ ನೀರಿನ ದುರ್ಬಳಕೆಯ ಮೇಲೆ ನಿಗಾ ಇಡಲು ಪ್ರತ್ಯೇಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಅಲ್ಲದೆ, ನಾಲ್ಕು ತಿಂಗಳ ಅವಧಿಗೆ 200 ಖಾಸಗಿ ಟ್ಯಾಂಕರ್‌ಗಳಿಗೆ ಜಿಲ್ಲಾಡಳಿತ ದರ ನಿಗದಿ ಮಾಡಿದೆ. ಕರ್ನಾಟಕ ರಾಜಧಾನಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಕಾರಣ ಖಾಸಗಿ ಟ್ಯಾಂಕರ್‌ಗಳು ತಮ್ಮ ಬೆಲೆಯನ್ನು ದ್ವಿಗುಣಗೊಳಿಸುತ್ತಿರುವ ಮಧ್ಯೆ ಈ ಬೆಳವಣಿಗೆಯಾಗಿದೆ.
ಮತ್ತಷ್ಟು ಓದಿ: Bengaluru Water Crisis: ಬೆಂಗಳೂರಿನಲ್ಲಿ ಕಂಡು ಕೇಳರಿಯದ ನೀರಿನ ಬಿಕ್ಕಟ್ಟು, ಇಲ್ಲಿವೆ ಪ್ರಮುಖ ಕಾರಣಗಳು
ಟ್ಯಾಂಕರ್ ನೀರಿನ ದರ ವಿವರ ಇಲ್ಲಿದೆ 6 ಸಾವಿರ ಲೀಟರ್ ಟ್ಯಾಂಕರ್ಗೆ 600 ರೂ. ದರ ನಿಗದಿ. ಇದು 5 ಕಿಲೋ ಮೀಟರ್ ಒಳಗಡೆಗೆ ಮಾತ್ರ ಅನ್ವಯವಾಗಲಿದೆ. 6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. ಇದು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ. 8 ಸಾವಿರ ಲೀಟರ್ ಟ್ಯಾಂಕರ್ಗೆ 700 ರೂ. ದರ ನಿಗದಿ ಮಾಡಲಾಗಿದ್ದು, ಇದು 5 ಕಿಲೋ ಮೀಟರ್ ಒಳಗೆ ಅನ್ವಯವಾಗಲಿದೆ. 8 ಸಾವಿರ ಲೀಟರ್ಗೆ 850 ರೂ. ದರ ನಿಗದಿ ಮಾಡಲಾಗಿದ್ದು, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ದರ ಪಡೆಯಬಹುದಾಗಿದೆ. 5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್ಗೆ 1000 ರೂ. ದರ ನಿಗದಿ ಮಾಡಲಾಗಿದೆ. 1200 ಲೀಟರ್ ಟ್ಯಾಂಕರ್ಗೆ 1200 ರೂ. ದರ ಫಿಕ್ಸ್ ಮಾಡಲಾಗಿದ್ದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ