ನವದೆಹಲಿ: ಕೇರಳದ ವಯನಾಡಿನ ಬದಲು ಉತ್ತರ ಪ್ರದೇಶದಲ್ಲಿ ತಮ್ಮ ಕುಟುಂಬದ ಭದ್ರಕೋಟೆಯಾಗಿರುವ ರಾಯ್ ಬರೇಲಿ (Raebareli) ಕ್ಷೇತ್ರವನ್ನು ರಾಹುಲ್ ಗಾಂಧಿ ಉಳಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಅವರಿಂದ ತೆರವಾಗುವ ವಯನಾಡಿನಿಂದ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಮೂಲಕ ಕೇರಳದಿಂದ ಪ್ರಿಯಾಂಕಾ ಗಾಂಧಿ (Priyanka Gandhi) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ. ಈ ಬೆಳವಣಿಗೆಯ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ (Rahul Gandhi) ವಯನಾಡ್ ತೊರೆಯುವುದು ಬಹಳ ಕಠಿಣ ನಿರ್ಧಾರವಾಗಿದೆ ಎಂದಿದ್ದಾರೆ.
ರಾಯ್ಬರೇಲಿ ಮತ್ತು ವಯನಾಡು ಎರಡೂ ನನಗೆ ಆಪ್ತವಾದ ಕ್ಷೇತ್ರಗಳು. ಇದು ಬಹಳ ಕಠಿಣವಾದ ನಿರ್ಧಾರವಾಗಿತ್ತು. ಇನ್ನು ವಯನಾಡಿನ ಜನರಿಗೆ ನನ್ನ ಪರವಾಗಿ ಪ್ರಿಯಾಂಕಾ ಕೆಲಸ ಮಾಡಲಿದ್ದಾರೆ. ನನ್ನ ಹಿಂದಿನ ಲೋಕಸಭೆ ವಾದ ವಯನಾಡಿಗೆ ನಾನು ಆಗಾಗ ಭೇಟಿ ನೀಡುತ್ತಿರುತ್ತೇನೆ. ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಗೆಲ್ಲುತ್ತಾರೆ ಎಂಬ ನಂಬಿಕೆ ನನಗಿದೆ. ವಯನಾಡ್ ಜನರು ಇನ್ನುಮುಂದೆ ಇಬ್ಬರು ಸಂಸದರನ್ನು ಹೊಂದಿದ್ದಾರೆಂದು ಭಾವಿಸಬಹುದು ಎಂದು ಅವರು ಹೇಳಿದ್ದಾರೆ.
#WATCH | Congress MP Rahul Gandhi says “I have an emotional connection with Waynand and Raebareli. I was an MP from Wayanad for the last 5 years. I thank the people for their love and support. Priyanka Gandhi Vadra will fight from elections from Wayanad but I will also… pic.twitter.com/olF8flIAU9
— ANI (@ANI) June 17, 2024
ಇದನ್ನೂ ಓದಿ: Rahul Gandhi: ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡ ರಾಹುಲ್ ಗಾಂಧಿ; ವಯನಾಡಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ
“ನನಗೆ ವಯನಾಡ್ ಮತ್ತು ರಾಯ್ ಬರೇಲಿಯೊಂದಿಗೆ ಭಾವನಾತ್ಮಕ ಸಂಬಂಧವಿದೆ. ನಾನು ಕಳೆದ 5 ವರ್ಷಗಳಿಂದ ವಯನಾಡಿನ ಸಂಸದನಾಗಿದ್ದೆ. ಅಲ್ಲಿನ ಜನರ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆದರೆ ನಾನು ಸಹ ಆಗಾಗ ಭೇಟಿ ನೀಡುತ್ತೇನೆ. ನಾನು ರಾಯ್‌ಬರೇಲಿಯೊಂದಿಗೆ ಹಳೆಯ ಸಂಬಂಧವನ್ನು ಹೊಂದಿದ್ದೇನೆ, ನಾನು ಅವರನ್ನು ಮತ್ತೆ ಪ್ರತಿನಿಧಿಸುತ್ತೇನೆ ಎಂದು ನನಗೆ ಸಂತೋಷವಾಗಿದೆ. ಆದರೆ ಇದು ಕಠಿಣ ನಿರ್ಧಾರವಾಗಿತ್ತು ಎಂದು ಅವರು ಹೇಳಿದ್ದಾರೆ.
#WATCH | Delhi: Congress president Mallikarjun Kharge says “Rahul Gandhi won from 2 LS seats but as per the law he has to vacate one seat. Rahul Gandhi will keep the Raebareli seat and vacate Wayanad Lok Sabha seat..” pic.twitter.com/yXdtvDMGwl
— ANI (@ANI) June 17, 2024
ನನ್ನ ಮನೆ, ಕಚೇರಿಯ ಬಾಗಿಲುಗಳು ವಯನಾಡಿನ ಜನರಿಗಾಗಿ ಯಾವಾಗಲೂ ತೆರೆದಿರುತ್ತದೆ. ನಾನು ವಯನಾಡಿನ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ರಾಯ್ಬರೇಲಿ ಅಥವಾ ವಯನಾಡು; ರಾಹುಲ್ ಗಾಂಧಿ ಆಯ್ಕೆಯ ಕುತೂಹಲಕ್ಕೆ ಇಂದು ತೆರೆ
2019ರಿಂದಲೂ ಪ್ರಿಯಾಂಕಾ ಗಾಂಧಿಯವರ ಚುನಾವಣಾ ಚೊಚ್ಚಲ ಸ್ಪರ್ಧೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಕಾಂಗ್ರೆಸ್‌ನಲ್ಲಿ ಅನೇಕರು ಈ ಬಾರಿ ಪ್ರಿಯಾಂಕಾ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾದ ವಾರಣಾಸಿಯಿಂದ ಅವರು ಸ್ಪರ್ಧಿಸುವ ಮೂಲಕ ಬಿಜೆಪಿ ವಿರುದ್ಧದ ಯುದ್ಧವನ್ನು ಮುನ್ನಡೆಸುತ್ತಾರೆ ಎಂದು ನಿರೀಕ್ಷಿಸಿದ್ದರು. ಇದೀಗ ವಯನಾಡಿನಿಂದ ಅವರು ಸ್ಪರ್ಧಿಸುವುದು ಖಚಿತವಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ