Priyanka Gandhi: ವಯನಾಡಿನಲ್ಲಿ ರಾಹುಲ್ ಗಾಂಧಿಯ ಅನುಪಸ್ಥಿತಿ ಕಾಡದಂತೆ ಕೆಲಸ ಮಾಡುವೆ; ಪ್ರಿಯಾಂಕಾ ಗಾಂಧಿ ಭರವಸೆ
ರಾಯ್ಬರೇಲಿ ಮತ್ತು ವಯನಾಡು ಲೋಕಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಇಂದು ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಅವರು ರಾಯ್ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ.
ನವದೆಹಲಿ: ಈ ಮೊದಲೇ ಎಲ್ಲರೂ ಊಹೆ ಮಾಡಿದ್ದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ತಮ್ಮ ಕುಟುಂಬದ ಭದ್ರಕೋಟೆಯಾದ ರಾಯ್ಬರೇಲಿಯನ್ನು (RaeBareli) ಆಯ್ಕೆ ಮಾಡಿಕೊಂಡಿದ್ದು, ಈ ಹಿಂದೆ ಸಂಸದರಾಗಿದ್ದ ವಯನಾಡನ್ನು (Wayanad) ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ರಾಹುಲ್ ಗಾಂಧಿಯಿಂದ ತೆರವಾಗುವ ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ (Priyanka Gandhi) ಸ್ಪರ್ಧಿಸಲಿದ್ದಾರೆ. ಈ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡಿನಿಂದ ಚುನಾವಣೆ ಪ್ರವೇಶಿಸಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ ಗಾಂಧಿ, “ವಯನಾಡನ್ನು ಪ್ರತಿನಿಧಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ವಯನಾಡಿನ ಜನರಿಗೆ ರಾಹುಲ್ ಅವರ ಅನುಪಸ್ಥಿತಿ ಕಾಡದಂತೆ ನಾನು ಕೆಲಸ ಮಾಡುತ್ತೇನೆ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಎಲ್ಲರನ್ನು ಸಂತೋಷಪಡಿಸಲು ಮತ್ತು ಉತ್ತಮ ಪ್ರತಿನಿಧಿಯಾಗಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ” ಎಂದಿದ್ದಾರೆ.
#WATCH | Congress leader Priyanka Gandhi Vadra says, “I am very happy to be able to represent Wayanad and I will not let them feel his (Rahul Gandhi’s) absence. I will work hard and I will try my best to make everyone happy and be a good representative. I have a very old… pic.twitter.com/Ii7kcrrlKC
— ANI (@ANI) June 17, 2024
“ಕೇರಳದ ವಯನಾಡಿಗೆ ರಾಹುಲ್ ಗಾಂಧಿ ಆಗಾಗ ಬರುತ್ತಾರೆ. ನಾನು ಕೂಡ ಅಷ್ಟೇ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ಎಲ್ಲರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತೇನೆ” ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡ ರಾಹುಲ್ ಗಾಂಧಿ; ವಯನಾಡಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ
ಈ ಮೂಲಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಬಹುನಿರೀಕ್ಷಿತ ಚುನಾವಣಾ ಚೊಚ್ಚಲ ಪ್ರವೇಶವು ಕೇರಳದ ವಯನಾಡ್‌ನಿಂದ ನಡೆಯಲಿದೆ. ಉತ್ತರ ಪ್ರದೇಶದ ಮತ್ತೊಂದು ಕುಟುಂಬದ ಭದ್ರಕೋಟೆಯಾದ ಅಮೇಥಿ ಈಗಾಗಲೇ ಕಾಂಗ್ರೆಸ್ ಕೈಗೆ ಮರಳಿದೆ. ದೀರ್ಘಕಾಲದ ಗಾಂಧಿ ಕುಟುಂಬದ ಸಹಾಯಕ ಕೆಎಲ್ ಶರ್ಮಾ ಬಿಜೆಪಿಯ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಸೋಲಿಸಿದ್ದಾರೆ.
#WATCH | Congress MP Rahul Gandhi says “I have an emotional connection with Waynand and Raebareli. I was an MP from Wayanad for the last 5 years. I thank the people for their love and support. Priyanka Gandhi Vadra will fight from elections from Wayanad but I will also… pic.twitter.com/olF8flIAU9
— ANI (@ANI) June 17, 2024
“ರಾಹುಲ್ ಗಾಂಧಿ ಅವರ ಹೃದಯಕ್ಕೆ ಹತ್ತಿರವಾಗಿರುವುದರಿಂದ ಮತ್ತು ಗಾಂಧಿ ಕುಟುಂಬದವರು ತಲೆಮಾರುಗಳಿಂದ ರಾಯ್ಬರೇಲಿಯೊಂದಿಗೆ ಬಾಂಧವ್ಯ ಹೊಂದಿರುವುದರಿಂದ ರಾಹುಲ್ ಗಾಂಧಿ ಅದೇ ಸ್ಥಾನವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ” ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಇಂದು ಸಂಜೆ ಸಭೆಯ ನಂತರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರ ತೊರೆಯಲಿದ್ದಾರೆ; ಸುಳಿವು ನೀಡಿದ ಸುಧಾಕರನ್
2004ರಿಂದ ಸೋನಿಯಾ ಗಾಂಧಿ ಅವರು ಈ ವರ್ಷದ ಆರಂಭದಲ್ಲಿ ರಾಜ್ಯಸಭೆಗೆ ತೆರಳುವವರೆಗೂ ರಾಯ್ಬರೇಲಿ ಕ್ಷೇತ್ರದ ಸ್ಥಾನವನ್ನು ಹೊಂದಿದ್ದರು. ರಾಹುಲ್ ಗಾಂಧಿಯವರ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಅವರ ಪತಿ ಫಿರೋಜ್ ಗಾಂಧಿಯವರು ಸಹ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಲ್ಲಿ ರಾಯ್ಬರೇಲಿ ಗಾಂಧಿ ಕುಟುಂಬದ ಭದ್ರಕೋಟೆಯಾಗಿದೆ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಜೂನ್ 18ರೊಳಗೆ ವಯನಾಡು ಅಥವಾ ರಾಯ್ಬರೇಲಿಯೊಳಗೆ ತಮ್ಮ ಆಯ್ಕೆ ಯಾವುದೆಂದು ರಾಹುಲ್ ಗಾಂಧಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲಿ ಇಂದು ರಾಹುಲ್ ರಾಯ್ಬರೇಲಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ