ಆಮ್ ಆದ್ಮಿ ಪಕ್ಷವನ್ನು ಓಡಿಸಿ; ದ್ವಾರಕಾದಲ್ಲಿ ನಡೆದ ವಿಕಾಸ್ ದೆಹಲಿ ಸಂಕಲ್ಪ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ

ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಇಂದು ದ್ವಾರಕಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, "ದೆಹಲಿಯ ಅಭಿವೃದ್ಧಿಯಲ್ಲಿ ಬಿಜೆಪಿ ಸರ್ಕಾರ ಯಾವುದೇ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ" ಎಂದು ಹೇಳಿದ್ದಾರೆ. ದ್ವಾರಕಾದಲ್ಲಿ ನಡೆದ ವಿಕಾಸ್ ದೆಹಲಿ ಸಂಕಲ್ಪ ರ್ಯಾಲಿಯಲ್ಲಿ ಪ್ರಧಾನಿ ಮೋದಿ 'ನಾವು ಎಎಪಿ-ಡಿಎ ಅನ್ನು ದೆಹಲಿಯಿಂದ ಓಡಿಸಬೇಕು' ಎಂದು ಕರೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷವನ್ನು ಓಡಿಸಿ; ದ್ವಾರಕಾದಲ್ಲಿ ನಡೆದ ವಿಕಾಸ್ ದೆಹಲಿ ಸಂಕಲ್ಪ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ
Modi In Dwaraka

Updated on: Jan 31, 2025 | 4:56 PM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ದ್ವಾರಕದಲ್ಲಿ ನಡೆದ ವಿಕಾಸ್ ದೆಹಲಿ ಸಂಕಲ್ಪ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೆಹಲಿಯ ಅಭಿವೃದ್ಧಿಯಲ್ಲಿ ಬಿಜೆಪಿ ಸರ್ಕಾರ ಎಲ್ಲ ಪ್ರಯತ್ನವನ್ನೂ ಮಾಡುತ್ತದೆ. ದೆಹಲಿಯಲ್ಲಿ ಅಭಿವೃದ್ಧಿ ಉಂಟುಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಆಮ್ ಆದ್ಮಿ ಪಕ್ಷ ಸರ್ಕಾರವನ್ನು ಟೀಕಿಸುತ್ತಾ ‘ಆಪ್ಡಾ’ ಎಂದು ಕರೆದ ಮೋದಿ, ಅವರು ಜಗಳ ಮತ್ತು ವಾದಗಳಲ್ಲಿ ಮಾತ್ರ ತೊಡಗುತ್ತಾರೆಯೇ ವಿನಃ ಅಭಿವೃದ್ಧಿಯತ್ತ ಮುಖ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ದೆಹಲಿಗೆ ಸಮತೋಲನ ಕಾಯ್ದುಕೊಳ್ಳಬಲ್ಲ ಸರ್ಕಾರ ಬೇಕು ಎಂದು ಅವರು ಹೇಳಿದ್ದಾರೆ.

ಎಎಪಿ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ದೆಹಲಿಯಿಂದ ಲೂಟಿ ಮಾಡಿದ ಹಣದಿಂದ ಆಮ್ ಆದ್ಮಿ ಪಕ್ಷ ಇತರ ರಾಜ್ಯಗಳಲ್ಲಿ ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸುತ್ತಿದೆ ಎಂದು ಹೇಳಿದ್ದಾರೆ. “ದೆಹಲಿಯ ಜನರು ಆಪ್ ಸರ್ಕಾರವನ್ನು ಓಡಿಸಲು ನಿರ್ಧರಿಸಿದ್ದಾರೆ. ಈ ಬಾರಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಸರ್ಕಾರ ರಚಿಸಬೇಕಾಗಿದೆ. ನಾನು ಶ್ರೀ ಕೃಷ್ಣನ ನಗರವಾದ ದ್ವಾರಕೆಗೆ ಬಂದಾಗಲೆಲ್ಲಾ ಮನಸಿಗೆ ಖುಷಿಯಾಗುತ್ತದೆ.” ಎಂದಿದ್ದಾರೆ.

ಇದನ್ನೂ ಓದಿ: Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು


“ಮುಂಬರುವ ನಗರದಲ್ಲಿ ಈ ಇಡೀ ಪ್ರದೇಶವು ಸ್ಮಾರ್ಟ್ ಸಿಟಿಯಾಗಲಿದೆ. ಇಲ್ಲಿ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಭಾರತ್ ವಂದನಾ ಪಾರ್ಕ್ ಅನ್ನು ನಿರ್ಮಿಸುತ್ತಿದೆ. ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ. ಅಭಿವೃದ್ಧಿ ಹೊಂದಿದ ಭಾರತದ ರಾಜಧಾನಿ ಹೀಗಿರಬೇಕು. ಇಡೀ ದೆಹಲಿ ನಗರದಲ್ಲಿ ಇದೇ ರೀತಿಯ ಅಭಿವೃದ್ಧಿ ಆಗಬೇಕು” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ