Mann ki Baat: ರಾಷ್ಟ್ರೀಯ ಏಕತಾ ದಿನ ಸಮೀಪಿಸುತ್ತಿದೆ ಎಂದು ನೆನಪಿಸಿದ ಪ್ರಧಾನಿ ಮೋದಿ; ಸರ್ದಾರ್ ವಲ್ಲಭಭಾಯಿ​ ಪಟೇಲ್​​ರಿಗೆ ನಮನ

| Updated By: Lakshmi Hegde

Updated on: Oct 24, 2021 | 11:58 AM

ಅಕ್ಟೋಬರ್​ 31ರಂದು ನಾವೆಲ್ಲ ಸೇರಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತೇವೆ. ಅಂದು ರಾಷ್ಟ್ರೀಯ ಏಕತೆಯನ್ನು ಸಾರಲು ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ತುಂಬ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Mann ki Baat: ರಾಷ್ಟ್ರೀಯ ಏಕತಾ ದಿನ ಸಮೀಪಿಸುತ್ತಿದೆ ಎಂದು ನೆನಪಿಸಿದ ಪ್ರಧಾನಿ ಮೋದಿ; ಸರ್ದಾರ್ ವಲ್ಲಭಭಾಯಿ​ ಪಟೇಲ್​​ರಿಗೆ ನಮನ
ಮನ್​ ಕೀ ಬಾತ್​​
Follow us on

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ 82ನೇ ಆವೃತ್ತಿಯ ಮನ್​ ಕೀ ಬಾತ್​ (Mann ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ 100 ಕೋಟಿ ಡೋಸ್​ ಲಸಿಕೆ ನೀಡಿಕೆ ದಾಖಲೆ ನಿರ್ಮಿತಗೊಂಡ ಬೆನ್ನಲ್ಲೇ,  ಕೊರೊನಾ ಲಸಿಕೆ ನೀಡಲು ವ್ಯಾಪಕವಾಗಿ ಶ್ರಮಿಸಿದ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿದರು. ಪ್ರಾರಂಭದಲ್ಲಿ ಉತ್ತರಾಖಂಡ್​​​ನ ದುರ್ಗಮ ಪ್ರದೇಶಗಳಿಗೆ ತೆರಳಿ, ಅಲ್ಲಿನ ಜನರಿಗೆ ಕೊರೊನಾ ಲಸಿಕೆ ಬಗ್ಗೆ ಅರಿವು ಮೂಡಿಸಿ, ಪ್ರತಿಯೊಬ್ಬರೂ ಲಸಿಕೆ ಪಡೆಯಲು ಶ್ರಮಿಸಿದ ಸಹಾಯಕ ನರ್ಸ್​ ಪೂನಂ ಎಂಬುವರ ಜತೆ ಮಾತನಾಡಿದರು. ಹಾಗೇ, ನೀವು ಲಸಿಕೆ ಕೊಡಲು ವಹಿಸಿದ ಶ್ರಮದ ಬಗ್ಗೆ ಹೇಳಿ ಎಂದು ಅವರ ಬಾಯಲ್ಲೇ ಕೇಳಿದ್ದಾರೆ.

ಇದೇ ವೇಳೆ ಶೇ.100ರಷ್ಟು ಮೊದಲ ಡೋಸ್​ ಲಸಿಕೆ ನೀಡಿದ ಉತ್ತರಾಖಂಡ್​ ಮತ್ತು ಹಿಮಾಚಲ ಪ್ರದೇಶಗಳನ್ನು ಉಲ್ಲೇಖಿಸಿ ಮಾತನಾಡಿದರು. ದುರ್ಗಮ ಪ್ರದೇಶಗಳು, ಅತಿಯಾದ ಮಳೆ ಬೀಳುವ ಪ್ರದೇಶಗಳನ್ನೊಳಗೊಂಡ ಈ ರಾಜ್ಯಗಳಲ್ಲಿ ಕೊರೊನಾ ಲಸಿಕೆ ಅಭಿಯಾನ ಸುಲಭವಾಗಿರಲಿಲ್ಲ. ಅಂಥದ್ದರಲ್ಲಿ ಈಗಾಗಲೇ ಪ್ರತಿಶತ ನೂರರಷ್ಟು ಮೊದಲ ಡೋಸ್​ ಲಸಿಕೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಏಕತಾ ದಿನ
ಅಕ್ಟೋಬರ್​ 31ರಂದು ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ ಜನ್ಮದಿನ ಎಂಬುದನ್ನು ಇಂದಿನ ಮನ್​ ಕೀ ಬಾತ್​​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೆನಪಿಸಿದರು. ಹಾಗೇ, ಮನ್​ ಕೀ  ಬಾತ್​​ನ ಪ್ರತಿಯೊಬ್ಬ ಕೇಳುಗರ ಪರವಾಗಿ ಸರ್ದಾರ್​ ಪಟೇಲ್​ ಜೀ ಅವರಿಗೆ ನಮನ ಸಲ್ಲಿಸುತ್ತೇನೆ, ಅಕ್ಟೋಬರ್​ 31ರಂದು ನಾವೆಲ್ಲ ಸೇರಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತೇವೆ. ಅಂದು ರಾಷ್ಟ್ರೀಯ ಏಕತೆಯನ್ನು ಸಾರಲು ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ತುಂಬ ಮುಖ್ಯ ಎಂದು ಹೇಳಿದರು. ನಾವು ಸರ್ದಾರ್​ ವಲ್ಲಭಭಾಯಿ ಪಟೇಲ್​​ ಅವರ ಜೀವನದ ಬಗ್ಗೆ ತಿಳಿದುಕೊಳ್ಳುವುದು ತುಂಬ ಇದೆ. ಇತ್ತೀಚೆಗಷ್ಟೇ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ ಚಿತ್ರಾತ್ಮಕ ಜೀವನಚರಿತ್ರೆಯನ್ನು ಬಿಡುಗಡೆ ಮಾಡಿದೆ. ಇದನ್ನು ಹೆಚ್ಚೆಚ್ಚು ಜನರು ನೋಡಬೇಕು. ತನ್ಮೂಲಕ ಪಟೇಲ್​ ಜಿ ಅವರ ಬಗೆಗಿನ ಆಸಕ್ತಿದಾಯಕ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ನಾವೀಗ ಭಾರತಕ್ಕೆ ಸ್ವಾತಂತ್ರ್ಯ ಬಂದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ದೇಶಭಕ್ತಿ ಗೀತೆ ಬರೆಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಅಕ್ಟೋಬರ್​ 31ರ ರಾಷ್ಟ್ರೀಯ ಏಕತಾ ದಿನದಂದು ಈ ಸ್ಪರ್ಧೆಗಳು ಪ್ರಾರಂಭವಾಗುತ್ತದೆ. ಅದರ ಬಗ್ಗೆ ಸಂಬಂಧಪಟ್ಟ ಸಚಿವಾಲಯದ ವೆಬ್​ಸೈಟ್​ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಪ್ರಧಾನಮಂತ್ರಿ ತಿಳಿಸಿದರು.

ಡ್ರೋಣ್​ ತಂತ್ರಜ್ಞಾನದಲ್ಲಿ ಯುವಕರ ಆಸಕ್ತಿ
ಇನ್ನು ಡ್ರೋಣ್​ ತಂತ್ರಜ್ಞಾನದ ಬಗ್ಗೆ ಮನ್​ ಕೀ ಬಾತ್​​ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಳ್ಳಿಗಳಲ್ಲಿರುವ ಭೂಮಿಯ ಬಗೆಗಿನ ದಾಖಲೆಗಳನ್ನು ಡ್ರೋಣ್​ ಮೂಲಕ ಡಿಜಿಟಲೀಕರಣಗೊಳಿಸುತ್ತಿರುವ ವಿಶ್ವದ ಮೊದಲ ದೇಶ ಭಾರತವಾಗಿದೆ. ನಾವು ಡ್ರೋಣ್​ ತಂತ್ರಜ್ಞಾನದತ್ತ ಇನ್ನಷ್ಟು ಆಸಕ್ತಿ ಬೆಳೆಸಿಕೊಳ್ಳಬೇಕು. ಯುವಕರು ಕ್ರಮೇಣ ಈ ಟೆಕ್ನಾಲಜಿಯತ್ತ ಒಲವು ತೋರಿಸುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ಕೂಡ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ವೋಕಲ್​ ಫಾರ್​ ಲೋಕಲ್​ಗೆ ಒತ್ತು
ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಿ, ಅದನ್ನು ಖರೀದಿಸಲು ಮೊದಲಿನಿಂದಲೂ ಕರೆ ನೀಡುತ್ತ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಪ್ರಸಕ್ತ ಮನ್​ ಕೀ ಬಾತ್​ನಲ್ಲಿ ಕೂಡ ವೋಕಲ್​ ಫಾರ್​ ಲೋಕಲ್​ ಎಂಬುದಕ್ಕೆ ಒತ್ತು ನೀಡಿದರು. ಇನ್ನೇನು ದೀಪಾವಳಿ ಹತ್ತಿರ ಬರುತ್ತಿದೆ. ಈ ಹೊತ್ತಲ್ಲಿ ಸಾಮಾನ್ಯವಾಗಿ ಜನರು ಶಾಪಿಂಗ್​​ನಲ್ಲಿ ವಾಲುತ್ತಾರೆ. ಆದರೆ ಈ ದೀಪಾವಳಿಯಲ್ಲಿ ಖರೀದಿಯೆಂಬುದು ವೋಕಲ್​ ಫಾರ್​ ಲೋಕಲ್​ ಆಗಿರಲಿ. ಅಂದರೆ ಸ್ಥಳೀಯ ಉತ್ಪನ್ನಗಳ ಖರೀದಿಗೆ ಪ್ರತಿಯೊಬ್ಬರೂ ಒತ್ತು ನೀಡಿ. ನೀವು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿದರೆ ಕೇವಲ ನಿಮ್ಮ ಮನೆಯಲ್ಲಷ್ಟೇ ಅಲ್ಲ, ಅಲ್ಲಿಯೇ ನಿಮ್ಮ ಮನೆ ಸಮೀಪ ಇರುವ ಬಡವರ ಮನೆಯಲ್ಲೂ ದೀಪ ಬೆಳಗಿದಂತೆ ಆಗುತ್ತದೆ ಎಂದು ಹೇಳಿದರು. ಇದೇ ಹೊತ್ತಲ್ಲಿ ಸ್ವಚ್ಛತೆಯ ಬಗ್ಗೆಯೂ ಒತ್ತುಕೊಟ್ಟು ಮಾತನಾಡಿದರು.

ಇದನ್ನೂ ಓದಿ: ಉಡುಪಿ: ಅಕಾಲಿಕ ಮಳೆಗೆ ಕಂಗಾಲಾದ ಭತ್ತ ಬೆಳೆಗಾರರು; ಹೆಚ್ಚುವರಿ ಕೃಷಿಗೆ ಹಾನಿ

ಹಳೇ ದ್ವೇಷ ಹಿನ್ನೆಲೆ ಗ್ಯಾಂಗ್ ವಾರ್; ಓರ್ವನ ಕೊಲೆ, ಇಬ್ಬರ ಸ್ಥಿತಿ ಗಂಭೀರ

Published On - 11:25 am, Sun, 24 October 21