ಪೂಂಚ್ನಲ್ಲಿ ಮುಂದುವರಿದ ಉಗ್ರರ ವಿರುದ್ಧ ಕಾರ್ಯಾಚರಣೆ; ಯೋಧ, ಇಬ್ಬರು ಪೊಲೀಸ್ ಅಧಿಕಾರಿಗೆ ಗಾಯ
ರಾಜೌರಿ ಮತ್ತು ಪೂಂಚ್ನಲ್ಲಿ ಅಡಗಿರುವ ಉಗ್ರರ ಗುಂಪಿನ ಬಳಿ ಭಾರಿ ಶಸ್ತ್ರಾಸ್ತ್ರಗಳಿವೆ. ಹಾಗೇ ತರಬೇತಿಯನ್ನೂ ಪಡೆದವರಾಗಿದ್ದಾರೆ ಎಂದು ಸೇನಾ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಚ್ (Poonch Encounter)ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ಮುಂದುವರಿದಿದ್ದು, ಇಂದು ಮುಂಜಾನೆ ಒಬ್ಬ ಯೋಧ ಮತ್ತು ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೂಂಚ್ನಲ್ಲಿ ಅಕ್ಟೋಬರ್ 10 ರಾತ್ರಿ ಉಗ್ರರ ದಾಳಿಗೆ ಮೂವರು ಯೋಧರು ಮತ್ತು ಒಬ್ಬ ಕಿರಿಯ ನಿಯೋಜಿತ ಅಧಿಕಾರಿ ಮೃತಪಟ್ಟಿದ್ದಾರೆ. ಅವರು ಹುತಾತ್ಮರಾದ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವನ್ನು ಗುರುತಿಸಲು ಈಗಾಗಲೇ ಬಂಧಿತನಾದ ಡೆಟೆನ್ಯೂ ಝಿಯಾ ಮುಸ್ತಫಾ ಎಂಬ ಲಷ್ಕರ್ ಎ ತೊಯ್ಬಾದ ಉಗ್ರನನ್ನು ಭದ್ರತಾ ಸಿಬ್ಬಂದಿ ಕರೆದೊಯ್ದಿದ್ದರು. ಈ ವೇಳೆ ಅಲ್ಲಿ ಅಡಗಿದ್ದ ಉಗ್ರರು ಒಮ್ಮೆಲೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೆಟೆನ್ಯೂ ಝಿಯಾ ಮುಸ್ತಫಾನನ್ನು ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಸ್ಥಳಕ್ಕೆ ಕರೆದೊಯ್ದರು. ಅದು ಗೊತ್ತಾಗುತ್ತಿದ್ದಂತೆ ಅಡಗಿದ್ದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಈ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ಯೋಧ ಗಾಯಗೊಂಡಿದ್ದಾರೆ. ಜತೆಗೆ ಇದ್ದ ಉಗ್ರ ಝಿಯಾ ಮುಸ್ತಫಾ ಕೂಡ ಗಾಯಗೊಂಡಿದ್ದಾನೆ. ಒಂದೇ ಸಮಯ ಗುಂಡಿನ ದಾಳಿ ನಡೆಯುತ್ತಲೇ ಇದ್ದುದರಿಂದ ಆತನಿಗೆ ಅಲ್ಲಿಂದ ಹೊರಬೀಳಲೂ ಸಾಧ್ಯವಾಗಲಿಲ್ಲ ಎಂದೂ ತಿಳಿಸಿದ್ದಾರೆ.
ಪೂಂಚ್ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರಿದಿದೆ. ರಾಜೌರಿ ಮತ್ತು ಪೂಂಚ್ನಲ್ಲಿ ಅಡಗಿರುವ ಉಗ್ರರ ಗುಂಪಿನ ಬಳಿ ಭಾರಿ ಶಸ್ತ್ರಾಸ್ತ್ರಗಳಿವೆ. ಹಾಗೇ ತರಬೇತಿಯನ್ನೂ ಪಡೆದವರಾಗಿದ್ದಾರೆ. ಜಮ್ಮು-ಕಾಶ್ಮೀರದ ಜೈಲಿನಲ್ಲಿ ಈಗಿರುವ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದ ಉಗ್ರರೇ ಆಗಿದ್ದಾರೆ. ಬಂಧಿತ ಉಗ್ರರ ಮೊಬೈಲ್ ಪರಿಶೀಲನೆ ವೇಳೆ ಇದು ಗೊತ್ತಾಗಿದೆ ಎಂದೂ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಹಾಗೇ, ಇವರೆಲ್ಲರೂ ಪಾಕಿಸ್ತಾನ ಪೋಷಿತ ಉಗ್ರರೇ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಉಪೇಂದ್ರ ಬಗ್ಗೆ ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಸುದೀಪ್ ಮಾತು; ಉಪ್ಪಿ ಅಂದ್ರೆ ಸ್ಫೂರ್ತಿಯ ಕಿಚ್ಚು
ನಿರೂಪಣೆಯಿಂದ ಅರುಣ್ ಸಾಗರ್ ನಿವೃತ್ತಿ ತಗೊಂಡ್ರಾ? ‘ಕೋಟಿಗೊಬ್ಬ 3’ ವೇದಿಕೆಯಲ್ಲಿ ಕಾಲೆಳೆದ ಸುದೀಪ್