Mann ki Baat: ಇಂದು ಬೆಳಗ್ಗೆ 11ಕ್ಕೆ ಪ್ರಧಾನಿ ಮೋದಿಯವರ ಮನ್ ಕೀ ಬಾತ್; ಎಲ್ಲೆಲ್ಲಿ ವೀಕ್ಷಿಸಬಹುದು? ಇಲ್ಲಿದೆ ಮಾಹಿತಿ..
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆಲ್ ಇಂಡಿಯಾ ರೇಡಿಯೋ (AIR)ದ ಎಲ್ಲ ನೆಟ್ವರ್ಕ್ಗಳಲ್ಲಿ ಇದು ಪ್ರಸಾರವಾಗಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು 82ನೇ ಆವೃತ್ತಿಯ ಮನ್ ಕೀ ಬಾತ್ (Mann ki Baat) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಅವರು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುವರು. ಸಾಮಾನ್ಯವಾಗಿ ಪ್ರತಿತಿಂಗಳ ಕೊನೇ ಭಾನುವಾರದಂದು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಇರುತ್ತದೆ. ಇದರಲ್ಲಿ ಅವರು ರಾಜಕೀಯ ಹೊರತಾದ ಮಾತುಗಳನ್ನು ಆಡುತ್ತಾರೆ. ಸಾಧಕರನ್ನು ಶ್ಲಾಘಿಸುತ್ತಾರೆ. ಈ ವಾರದ ಪ್ರಾರಂಭದಲ್ಲಿ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಈ ತಿಂಗಳ ಮನ್ ಕೀ ಬಾತ್ ಅಕ್ಟೋಬರ್ 24ರಂದು ನಡೆಯಲಿದೆ. ಈ ಬಗ್ಗೆ ಸಾರ್ವಜನಿಕರೂ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ ಎಂದು ಕೇಳಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆಲ್ ಇಂಡಿಯಾ ರೇಡಿಯೋ (AIR)ದ ಎಲ್ಲ ನೆಟ್ವರ್ಕ್ಗಳಲ್ಲಿ, ದೂರದರ್ಶನ, ಎಐಆರ್ ನ್ಯೂಸ್ ಮತ್ತು ಅವುಗಳ ಮೊಬೈಲ್ ಆ್ಯಪ್ಗಳಲ್ಲಿ ಮನ್ ಕೀ ಬಾತ್ ವೀಕ್ಷಿಸಬಹುದು. ಅದರ ಹೊರತಾಗಿ ಬಿಜೆಪಿಯ ಯೂಟ್ಯೂಬ್ ಚಾನಲ್ಗಳು, ಪ್ರಧಾನಮಂತ್ರಿ ಕಚೇರಿಯ ಅಧಿಕೃತ ವೆಬ್ಸೈಟ್ಗಳಲ್ಲಿ ಪ್ರಸಾರವಾಗುತ್ತದೆ. ಇನ್ನು ಮನ್ ಕೀ ಬಾತ್ ಮೂಲ ಆವೃತ್ತಿ ಹಿಂದಿಯಲ್ಲಿ ಪ್ರಸಾರವಾಗಲಿದೆ. ಅಂದರೆ ನರೇಂದ್ರ ಮೋದಿ ಹಿಂದಿಯಲ್ಲಿ ಮಾತನಾಡಲಿದ್ದಾರೆ. ಅದಾದ ಬಳಿಕ ಆಲ್ ಇಂಡಿಯಾ ರೇಡಿಯೋ ಸಂಜೆ 8 ಗಂಟೆ ಹೊತ್ತಿಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಿದೆ.
ಪ್ರತಿ ಮನ್ ಕೀ ಬಾತ್ ವೇಳೆಗೂ ಸಹ ಪ್ರಧಾನಿ ನರೇಂದ್ರ ಮೋದಿ ಯಾವ ವಿಚಾರ ಮಾತನಾಡಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಈಗ ಭಾರತ 100 ಕೋಟಿ ಡೋಸ್ ಲಸಿಕೆ ಮೈಲಿಗಲ್ಲು ಮುಟ್ಟಿದೆ. ಈ ಬಗ್ಗೆ ನರೇಂದ್ರ ಮೋದಿ ತುಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ಅದನ್ನೂ ಮನ್ ಕೀ ಬಾತ್ನಲ್ಲಿ ಉಲ್ಲೇಖಿಸಬಹುದು ಎಂಬ ನಿರೀಕ್ಷೆಯಂತೂ ಇದ್ದೇ ಇದೆ. ಕಳೆದ ತಿಂಗಳು ನಡೆಸಿದ್ದ ಮನ್ ಕೀ ಬಾತ್ನಲ್ಲಿ ಮಹಾತ್ಮ ಗಾಂಧಿಯವರ ತತ್ವಗಳನ್ನು ಜನರು ಅನುಸರಿಸಬೇಕು ಎಂದು ಕರೆ ನೀಡಿದ್ದರು. ಹಾಗೇ ನದಿಗಳ ದಿನಾಚರಣೆಯನ್ನು ನೆನಪಿಸಿ, ಜೀವ ಕೊಡುವ ನದಿಗಳ ಸ್ವಚ್ಛತೆ ಆದ್ಯತೆಯಾಗಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: Shocking News: ಮಹಿಳೆಯ ಕಿವಿಯೊಳಗೆ ರಾತ್ರಿಯಿಡೀ ವಾಸವಿದ್ದ ಜೇಡರ ಹುಳು; ಅಪರೂಪದ ಕೇಸ್ ಕಂಡು ವೈದ್ಯರಿಗೇ ಶಾಕ್!
ಪ್ರಭಾಸ್ ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಬೇಸರ ಮೂಡಿಸಿದ ಪ್ರಶಾಂತ್ ನೀಲ್; ‘ಸಲಾರ್’ ಟೀಮ್ ಎಡವಿದ್ದೆಲ್ಲಿ?