ಸರ್ಕಾರದ ಜತೆಯೇ ಚರ್ಚಿಸುತ್ತೇವೆ, ತಜ್ಞರ ಸಮಿತಿಯೆದುರು ಹೋಗುವುದಿಲ್ಲ: ರೈತ ನಾಯಕ ರಾಕೇಶ್ ಟಿಕಾಯತ್

ತಜ್ಞರ ಸಮಿತಿ ರಚನೆಯನ್ನು ಸ್ವಾಗತಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಮಿತಿ ತಿಳಿಸಿದಾಗ ಕೇಂದ್ರದ ವಾದವನ್ನು ಸಮಿತಿಯೆದುರು ಮಂಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಸರ್ಕಾರದ ಜತೆಯೇ ಚರ್ಚಿಸುತ್ತೇವೆ, ತಜ್ಞರ ಸಮಿತಿಯೆದುರು ಹೋಗುವುದಿಲ್ಲ: ರೈತ ನಾಯಕ ರಾಕೇಶ್ ಟಿಕಾಯತ್
ರೈತ ನಾಯಕ ರಾಕೇಶ್ ಟಿಕಾಯತ್ (ಸಂಗ್ರಹ ಚಿತ್ರ)
Edited By:

Updated on: Jan 15, 2021 | 9:26 PM

ದೆಹಲಿ: ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯೆದುರು ಹಾಜರಾಗುವುದಿಲ್ಲ. ಕೇಂದ್ರ ಸರ್ಕಾರದ ಜತೆ ಮಾತ್ರ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್​ನ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ. 9ನೇ ಸುತ್ತಿನ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇಂದಿನ ಸಭೆಯಲ್ಲಿ ಒಮ್ಮತ ಮೂಡದಿದ್ದರೆ ನ್ಯಾಯಾಲಯ ರಚಿಸಿದ ತಜ್ಞರ ಸಮಿತಿ ಜತೆ ಮಾತಕತೆ ನಡೆಸಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

ತಜ್ಞರ ಸಮಿತಿ ರಚನೆಯನ್ನು ಸ್ವಾಗತಿಸಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸಮಿತಿ ತಿಳಿಸಿದಾಗ ಕೇಂದ್ರದ ವಾದವನ್ನು ಸಮಿತಿಯೆದುರು ಮಂಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್​ ಪಕ್ಷವನ್ನು ಟೀಕಿಸಿರುವ ಅವರು, ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆ ತರುವುದಾಗಿ 2019ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ‘ಬಹುಶಃ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪ್ರಣಾಳಿಕೆಯನ್ನು ಮರೆತಿರಬಹುದು. ಮತ್ತೊಮ್ಮೆ ಓದಿ ನೆನಪಿಸಿಕೊಳ್ಳಲು ಅವರಿಗೆ ಸಲಹೆ ನೀಡುತ್ತೇನೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾಧ್ಯಮಗಳೆದುರು ತಾವು ಪ್ರಣಾಳಿಕೆಯನ್ನು ಮರೆತಿದ್ದೇವೆ ಎಂದು ಒಪ್ಪಿಕೊಳ್ಳಬೇಕು ಅಥವಾ ಈಗ ಸುಳ್ಳು ಹೇಳುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇಂದಿನ ಸಭೆಯಲ್ಲೂ ಮೂಡಲಿಲ್ಲ ಒಮ್ಮತ: 19 ರಂದು 10 ನೇ ಸುತ್ತಿನ ಸಭೆ