AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weather Today: ನಾಳೆಯಿಂದ ಕೇರಳ, ತಮಿಳುನಾಡಿನಲ್ಲಿ ಮತ್ತೆ ಮಳೆಯ ಆರ್ಭಟ; ಇಂದಿನ ಹವಾಮಾನ ಹೀಗಿದೆ

Weather Forecast: ಮಾರ್ಚ್ 2 ಮತ್ತು 3ರ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಕ್ಷಿಣ ತಮಿಳುನಾಡು, ಕೇರಳ ಮತ್ತು ಮಾಹೆಯಲ್ಲಿ ಗುಡುಗು ಮತ್ತು ಮಿಂಚಿನ ಜೊತೆಗೆ ವ್ಯಾಪಕವಾದ ಮಳೆ ಉಂಟಾಗಲಿದೆ.

Weather Today: ನಾಳೆಯಿಂದ ಕೇರಳ, ತಮಿಳುನಾಡಿನಲ್ಲಿ ಮತ್ತೆ ಮಳೆಯ ಆರ್ಭಟ; ಇಂದಿನ ಹವಾಮಾನ ಹೀಗಿದೆ
ಮಳೆ
TV9 Web
| Updated By: ಸುಷ್ಮಾ ಚಕ್ರೆ|

Updated on: Mar 01, 2022 | 6:13 AM

Share

ಬೆಂಗಳೂರು: ಕರ್ನಾಟಕದಲ್ಲಿ ಮಳೆ ಮುಗಿದು, ಚಳಿಗಾಲವೂ ಮುಗಿದು ಬೇಸಿಗೆ ಶುರುವಾಗಿದೆ. ಇನ್ನು ಮೂರು ತಿಂಗಳ ಕಾಲ ಬಿಸಿಲ ಧಗೆ ಹೆಚ್ಚಾಗಲಿದೆ. ಆದರೆ, ನೆರೆಯ ರಾಜ್ಯಗಳಾದ ಕೇರಳ (Kerala Rain), ತಮಿಳುನಾಡು (Tamil Nadu Rain), ಪುದುಚೇರಿಯಲ್ಲಿ ಆರ್ದ್ರ ವಾತಾವರಣವಿರಲಿದ್ದು, ಗಾಳಿ ಹೆಚ್ಚಾಗಲಿದೆ. ಮಾರ್ಚ್ 2 ಮತ್ತು 3ರ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಕ್ಷಿಣ ತಮಿಳುನಾಡು, ಕೇರಳ ಮತ್ತು ಮಾಹೆಯಲ್ಲಿ ಗುಡುಗು ಮತ್ತು ಮಿಂಚಿನ ಜೊತೆಗೆ ವ್ಯಾಪಕವಾದ ಮಳೆ ಉಂಟಾಗಲಿದೆ.

ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ. ಇದು ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಮಳೆ ತೀವ್ರಗೊಳ್ಳುತ್ತದೆ. ಈ ಭಾಗದಲ್ಲಿ ಮುಂದಿನ 48 ಗಂಟೆಗಳಲ್ಲಿ ಕಡಿಮೆ ಒತ್ತಡದ ವ್ಯವಸ್ಥೆಯು ರೂಪುಗೊಳ್ಳುವ ಸಾಧ್ಯತೆಯಿದೆ. ಮಾರ್ಚ್ 3ರಂದು ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಎಚ್ಚರಿಸಿದೆ.

ಮಾರ್ಚ್ 3ರವರೆಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ. ಇರಲಿದೆ. ಈ ಹಿನ್ನೆಲೆಯಲ್ಲಿ ಈ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬುಧವಾರದವರೆಗೆ ಪಶ್ಚಿಮ ಹಿಮಾಲಯದ ಪ್ರದೇಶಗಳಲ್ಲಿ ಚದುರಿದ ಹಿಮ ಅಥವಾ ಮಳೆಯ ಮುನ್ಸೂಚನೆ ನೀಡಲಾಗಿದೆ. ಮುಂದಿನ ವಾರಾಂತ್ಯದಲ್ಲಿ ಪಂಜಾಬ್, ಹರಿಯಾಣದಲ್ಲಿ ಆಲಿಕಲ್ಲು ಮಳೆ ಮತ್ತು ಲಘು ಮಳೆಯಾಗಿದೆ.

ಇದನ್ನೂ ಓದಿ: Weather Today: ಕೇರಳ, ಲಡಾಖ್ ಸೇರಿ ಹಲವು ರಾಜ್ಯಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆ

Weather Today: ತಮಿಳುನಾಡು, ಕೇರಳ, ಅಸ್ಸಾಂ, ಅರುಣಾಚಲ ಪ್ರದೇಶ ಸೇರಿ ಹಲವೆಡೆ ಇನ್ನೆರಡು ದಿನ ಭಾರೀ ಮಳೆ