ಎಲ್ಲ ಟ್ರೇನುಗಳ 2ಎಸ್ ಕೋಚ್ಗಳು ಇನ್ನುಮುಂದೆ ಅನ್ರಿಸರ್ವ್ಡ್ ಕ್ಲಾಸ್ ಕೋಚ್‌ಗಳಾಗಿ ಪರಿಗಣಿಸಲಾಗುತ್ತದೆ: ಇಂಡಿಯನ್ ರೇಲ್ವೇಸ್
2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್ರಿಸರ್ವ್ಡ್ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ.
ನಿಮಗೆ ಗೊತ್ತಿದೆ, ಕೋವಿಡ್-19 ಪಿಡುಗು ರೈಲು ಸಂಚಾರ, ಸೀಟು ಆಥವಾ ಬರ್ತ್ಗಳ ಬುಕಿಂಗ್ ಮೇಲೂ ಪ್ರಭಾವ ಬೀರಿತ್ತು. ಕೋವಿಡ್ ಸೋಂಕಿನ ಪ್ರಭಾವ ಈಗ ತಗ್ಗಿರುವ ಕಾರಣ ಇಂಡಿಯನ್ ರೇಲ್ವೇಸ್ (Indian Railways) ಎಲ್ಲ ಟ್ರೇನುಗಳು ಮೊದಲು ಅಂಕಿತಗೊಂಡಿದ್ದ ರೈಲುಗಾಡಿಯ ನಂಬರ್ ಅನುಸಾರವಾಗಿಯೇ ಸಂಚಾರ ಆರಂಭಿಸಿವೆ. ಸಾಮಾನ್ಯ ಟ್ರೇನ್ಗಳಲ್ಲಿ ಮೊದಲಿನ ಹಾಗೆ ಅಂದರೆ, ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಇರುತ್ತಿದ್ದ ಹಾಗೆ ಸಾಮಾನ್ಯ ಕೋಚ್ಗಳನ್ನು (general coaches), ರಿಸರ್ವ್ಡ್ (reserved) (ಕಾಯ್ದಿಟ್ಟ) ಮತ್ತು ಅನ್ರಿಸರ್ವ್ಡ್(ಸಾಮಾನ್ಯ) (unreserved) ಎಂದು ಗುರುತಿಲಸಲಾಗಿದೆ. ಇದನ್ನು ಮತ್ತಷ್ಟು ಸರಳ ಭಾಷೆಯಲ್ಲಿ ಹೇಳುವುದಾದರೆ, ಕೋವಿಡ್ ಪಿಡುಗುಗಿಂತ ಮುಂಚೆ ಒಂದು ನಿರ್ದಿಷ್ಟ ಟ್ರೇನು 4 ಅನ್ರಿಸರ್ವ್ಡ್ ಜನರಲ್ ಸೀಟಿಂಗ್ ಕೋಚ್ಗಳನ್ನು ಹೊಂದಿದ್ದರೆ ಅವನ್ನು ಈಗ 2ಎಸ್ (ಸೆಕೆಂಡ್ ಸೀಟಿಂಗ್) ಅನ್ರಿಸರ್ವ್ಡ್ ವರ್ಗ (ಕ್ಲಾಸ್) ಕೋಚ್‌ಗಳಾಗಿ ಪರಿಗಣಿಸಲಾಗುತ್ತದೆ ಅಂತ ರೇಲ್ವೆ ಇಲಾಖೆ ಪ್ರಕಟಣೆಯೊಂದು ತಿಳಿಸುತ್ತದೆ.
2ಎಸ್-ಸಾಮಾನ್ಯ ವರ್ಗದ ಕೋಚ್ ಆಗಿರುತ್ತವಾದರೂ ಸೀಟುಗಳನ್ನು (ಕೂರಲು) ಮುಂಗಡವಾಗಿ ಬುಕ್ ಮಾಡಬೇಕಾಗುತಿತ್ತು. ಈಗ ಆ ಪದ್ಧತಿಯನ್ನು ರದ್ದುಮಾಡಿ ಈ ಕೋಚ್ಗಳನ್ನು ಅನ್ರಿಸರ್ವ್ಡ್ (ಸಾಮಾನ್ಯ) ಆಗಿ ಪರಿವರ್ತಿಸಲಾಗಿದೆ. ನೀವು ಸೀಟನ್ನು 120 ದಿನಗಳಷ್ಟು ಮೊದಲು ಮುಂಗಡ ಬುಕಿಂಗ್ ಮಾಡಬಹುದಿತ್ತು. ಅಂದರೆ ಈಗಾಗಲೇ ಬುಕಿಂಗ್ ಆಗಿರುವುದು ಕೊನೆಗೊಂಡ ಕೂಡಲೇ ಈ ಕೋಚ್ ಗಳು ಅನ್ರಿಸರ್ವ್ಡ್ (ಸಾಮಾನ್ಯ) ಆಗಿಬಿಡುತ್ತವೆ.
ಅಷ್ಟಾಗಿಯೂ ಒಂದು ರೈಲು ಕೆಲ ಜಿಎಸ್ಸಿಜೆಡ್ ಅಥವಾ ಅದೇ ರೀತಿಯ ಕೋಚ್‌ಗಳನ್ನು ಕಾಯ್ದಿರಿಸಿದ ಎರಡನೇ ಸಿಟ್ಟಿಂಗ್ ಕೋಚ್‌ಗಳಾಗಿ (2S ವರ್ಗ) ಕೋವಿಡ್ ಪಿಡುಗು ತಲೆದೋರುವ ಮುಂಚಿನ ಸಮಯದಲ್ಲಿ ಓಡುತ್ತಿದ್ದರೆ, ಅವುಗಳು ಈಗಲೂ ಆ ರೈಲುಗಳಲ್ಲಿ ಕಾಯ್ದಿರಿಸಿದ ಸಿಟ್ಟಿಂಗ್ ಕೋಚ್‌ಗಳಾಗಿ ಮುಂದುವರಿಯುತ್ತವೆ.
ರಜಾದಿನ ವಿಶೇಷ (Holiday Special) ಅಥವಾ ಇತರ ವಿಶೇಷ ರೈಲುಗಳಲ್ಲಿ, ಸಾಂಕ್ರಾಮಿಕ ರೋಗದ ಮುಂಚಿನ ಅವಧಿಯಲ್ಲಿ ಚಾಲ್ತಿಯಲ್ಲಿರುವಂತೆ ಸಾಮಾನ್ಯ ಕೋಚ್‌ಗಳನ್ನು ಕಾಯ್ದಿರಿಸಲಾಗಿದೆ ಅಥವಾ ಕಾಯ್ದಿರಿಸಲಾಗಿಲ್ಲ ಅಂತಲೇ ಪರಿಗಣಿಸಲಾಗುವುದು.
ಇದನ್ನೂ ಓದಿ: ಯಶವಂತಪುರ ರೇಲ್ವೇ ಸ್ಟೇಶನ್ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!