ದೆಹಲಿ ಗಲಭೆ; ದ್ವೇಷ ಭಾಷಣ ಮಾಡಿದ ರಾಹುಲ್, ಸೋನಿಯಾ, ಪ್ರಿಯಾಂಕಾ ಗಾಂಧಿ, ಬಿಜೆಪಿ ಸಚಿವರಿಗೆ ನೋಟಿಸ್ ಜಾರಿ
ದ್ವೇಷದ ಭಾಷಣಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಗೂ ಮೊದಲು ದ್ವೇಷದ ಭಾಷಣಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ದಾಖಲಿಸುವಂತೆ ಕೋರಿರುವ ಅರ್ಜಿಗಳಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿ ಅಳವಡಿಸಿಕೊಳ್ಳುವಂತೆ ಕೋರಿದೆ. ಈ ಹಿಂದೆ ಕೋರ್ಟ್ ಅರ್ಜಿದಾರರನ್ನು ಕಕ್ಷಿದಾರರನ್ನಾಗಿ ಮಾಡದೆ ಯಾರ ವಿರುದ್ಧ ಆರೋಪ ಮಾಡಲಾಗಿದೆ ಎಂದು ನಿರ್ದೇಶನಗಳನ್ನು ನೀಡಲು ಮುಂದುವರಿಯಬಹುದೇ ಎಂದು ಕೇಳಿತ್ತು. 2020ರಿಂದ ಬಾಕಿ ಉಳಿದಿರುವ ಅರ್ಜಿಗಳಿಗೆ ಪ್ರತಿವಾದಿಗಳಾಗಿ ಎಫ್‌ಐಆರ್‌ಗಳನ್ನು ಕೋರುತ್ತಿರುವ ಕನಿಷ್ಠ 24 ವ್ಯಕ್ತಿಗಳನ್ನು ಸೇರಿಸಲು ಕೋರಿ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿಯ ಹೊರತಾಗಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ, ಅಮಾನತುಲ್ಲಾ ಖಾನ್, ಎಐಎಂಐಎಂ ನಾಯಕರಾದ ಅಕ್ಬರುದ್ದೀನ್ ಓವೈಸಿ, ವಾರಿಶ್ ಪಠಾಣ್, ವಕೀಲ ಮೆಹಮೂದ್ ಪ್ರಾಚಾ, ಕಾರ್ಯಕರ್ತ ಹರ್ಷ್ ಮಂದರ್, ಮಾಜಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶ ಬಿ.ಜಿ ಕೋಲ್ಸೆ ಪಾಟೀಲ್, ಬಂಧಿತ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್, ನಟಿ ಸ್ವರಾ ಭಾಸ್ಕರ್ ಮತ್ತಿತರರಿಗೆ ನೋಟಿಸ್ ಜಾರಿಯಾಗಿದೆ.
ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಅವರ ವಿಭಾಗೀಯ ಪೀಠವು ಮಾರ್ಚ್ 22ರಂದು ಈ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವಾಗ ಪ್ರಸ್ತಾವಿತ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. “ಪ್ರಸ್ತಾಪಿತ ಪ್ರತಿವಾದಿಗಳಿಗೆ ಪ್ರಸ್ತುತ ರಿಟ್ ಅರ್ಜಿಯಲ್ಲಿ ಪಕ್ಷದ ಪ್ರತಿವಾದಿಗಳಾಗಿ ಅವರು ಪ್ರಾರ್ಥಿಸಿದಂತೆ ಸೂಚಿಸಬೇಕೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ನೋಟಿಸ್ ನೀಡುವುದು ಕಾನೂನಿನ ಪ್ರಕಾರ ಸೂಕ್ತವೆಂದು ನಾವು ಪರಿಗಣಿಸುತ್ತೇವೆ” ಎಂದು ನ್ಯಾಯಪೀಠ ಹೇಳಿದೆ.
ಹಿಂಸಾಚಾರದ ಸಂತ್ರಸ್ತರಾದ ಫಾರೂಕ್ ಮತ್ತು ಇತರರು ತಮ್ಮ ಅರ್ಜಿಯಲ್ಲಿ ನಾಲ್ವರು ಪ್ರಮುಖ ವ್ಯಕ್ತಿಗಳು ಮತ್ತು ಆಡಳಿತ ಪಕ್ಷದ ಇತರ ವ್ಯಕ್ತಿಗಳಿಗೆ ಸಂಬಂಧಿಸಿದ ರೆಕಾರ್ಡ್ ವಿಡಿಯೋಗಳನ್ನು ವೈರಲ್ ಮಾಡಿದ್ದಾರೆ. ಈ ಎಲ್ಲ ವಿಡಿಯೋಗಳಲ್ಲಿ ನಾಲ್ವರು ರಾಜಕಾರಣಿಗಳು ಮತ್ತು ಸಿಎಎ ವಿರುದ್ಧ ಪ್ರತಿಭಟಿಸುವವರನ್ನು ಕೊಲ್ಲಬೇಕು ಎಂದು ತಮ್ಮ ಅನುಯಾಯಿಗಳಿಗೆ ಹೇಳಿದ್ದರು.
ಇದನ್ನೂ ಓದಿ: ದ್ವೇಷ ಭಾಷಣ: ಯತಿ ನರಸಿಂಹಾನಂದ್‌ಗೆ ಜಾಮೀನು ನಿರಾಕರಿಸಿದ ಹರಿದ್ವಾರದ ಸಿಜೆಎಂ ನ್ಯಾಯಾಲಯ
Published On - 8:34 pm, Mon, 28 February 22