ಮದುವೆ ಮನೆಯಲ್ಲಿ ಹಿಂಸಾಚಾರ, ಗರ್ಭಿಣಿ ಪತ್ನಿ ಎದುರೇ ವಧುವಿನ ಸೋದರಸಂಬಂಧಿ ಹತ್ಯೆ
ಮದುವೆ(Marriage) ಬಳಿಕ ಎರಡೂ ಕುಟುಂಬದ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಮದುವೆಯಾದ 24 ಗಂಟೆಗಳಲ್ಲಿ, ವಧುವಿನ ಸೋದರಸಂಬಂಧಿ ನೀರಜ್ ಠಾಕೂರ್ ಅವರನ್ನು ಗರ್ಭಿಣಿ ಪತ್ನಿಯ ಮುಂದೆಯೇ ಹೊಡೆದು ಕೊಂದಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಬಾಲಾಪರಾಧಿಗಳು ಸೇರಿದಂತೆ ಕನಿಷ್ಠ ಆರು ಆರೋಪಿಗಳನ್ನು ಬಂಧಿಸಲಾಗಿದೆ.

ಛತ್ತೀಸ್ಗಢ, ಅಕ್ಟೋಬರ್ 21: ಮದುವೆ(Marriage) ಬಳಿಕ ಎರಡೂ ಕುಟುಂಬದ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.ಮದುವೆಯಾದ 24 ಗಂಟೆಗಳಲ್ಲಿ, ವಧುವಿನ ಸೋದರಸಂಬಂಧಿ ನೀರಜ್ ಠಾಕೂರ್ ಅವರನ್ನು ಗರ್ಭಿಣಿ ಪತ್ನಿಯ ಮುಂದೆಯೇ ಹೊಡೆದು ಕೊಂದಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಬಾಲಾಪರಾಧಿಗಳು ಸೇರಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಪೂಜಾ ಮತ್ತು ತಿಲಕ್ ಸಾಹು ತಮ್ಮ ಕುಟುಂಬಗಳ ಒಪ್ಪಿಗೆಯಿಲ್ಲದೆ ಓಡಿಹೋಗಿ ದೇವಸ್ಥಾನದಲ್ಲಿ ವಿವಾಹವಾದರು. ಅವರ ವಿವಾಹದ ಸುದ್ದಿ ಅವರ ಸಂಬಂಧಿಕರಿಗೆ ತಲುಪಿದಾಗ, ಉದ್ವಿಗ್ನತೆ ಭುಗಿಲೆದ್ದಿತು, ಅಂತಿಮವಾಗಿ ಪೂಜಾಳ ಕುಟುಂಬ ಸದಸ್ಯರು ಮತ್ತು ತಿಲಕ್ ಅವರ ಸಂಬಂಧಿಕರು ಮತ್ತು ಸ್ನೇಹಿತರ ನಡುವೆ ಹಿಂಸಾತ್ಮಕ ವಾಗ್ವಾದಕ್ಕೆ ಕಾರಣವಾಯಿತು.
ಪೊಲೀಸರ ಪ್ರಕಾರ, ಠಾಕೂರ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಪರಿಸ್ಥಿತಿಯನ್ನು ಉಲ್ಬಣಗೊಳಿಸದಂತೆ ಎರಡೂ ಕಡೆಯವರನ್ನು ಒತ್ತಾಯಿಸಿದರು ಮತ್ತು ಏನು ನಡೆಯಬೇಕಿತ್ತೋ ಅದು ನಡೆದು ಹೋಗಿದೆ ಈಗ ಜಗಳವಾಡಿ ಪ್ರಯೋಜನವಿಲ್ಲ ಎಂದು ಸಮಾಧಾನಪಡಿಸಲು ಮುಂದಾದರು.
ಮತ್ತಷ್ಟು ಓದಿ: ಬೆಳಗ್ಗೆ ತಾಳಿ ಕಟ್ಟುವಾಗ ಮದುವೆ ಬೇಡವೆಂದ್ಲು, ಸಂಜೆಯೇ ಪ್ರಿಯಕರನ ಜತೆ ವಿವಾಹವಾದ್ಲು!
ಈ ಮಾತುಗಳು ತಿಲಕ್‌ನ ಸ್ನೇಹಿತರನ್ನುಕೆರಳಿಸಿತ್ತು. ಗರ್ಭಿಣಿ ಹೆಂಡತಿಯ ಮುಂದೆಯೇ ದೊಣ್ಣೆ ಮತ್ತು ಚಾಕುವಿನಿಂದ ಅವನ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಠಾಕೂರ್ ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ಸ್ವಲ್ಪ ಸಮಯದ ನಂತರ, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Tue, 21 October 25




