West Bengal: ಬಂಕುರಾದಲ್ಲಿ ಎರಡು ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಹಳಿ ತಪ್ಪಿದ 12 ಬೋಗಿಗಳು
ಪಶ್ಚಿಮ ಬಂಗಾಳದ ಓಂಡಾ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಭಾನುವಚಾರ ಮುಂಜಾನೆ 4 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ.
ಪಶ್ಚಿಮ ಬಂಗಾಳ(West Bengal)ದ ಓಂಡಾ ರೈಲು ನಿಲ್ದಾಣದ ಬಳಿ ಎರಡು ಗೂಡ್ಸ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿದೆ. ಭಾನುವಚಾರ ಮುಂಜಾನೆ 4 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ. ಗೂಡ್ಸ್ ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ಗೆ ಪ್ರವೇಶಿಸಿತ್ತು ಮತ್ತು ಹಳಿಯಲ್ಲಿದ್ದ ಮತ್ತೊಂದು ಸರಕು ರೈಲಿಗೆ ಡಿಕ್ಕಿ ಹೊಡೆದಿದೆ.
12 ಬೋಗಿಗಳು ಹಳಿ ತಪ್ಪಿವೆ. ಜೂನ್ 2 ರಂದು ಬಾಲಸೋರ್ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ರೈಲು ಅವಘಡ ಸಂಭವಿಸಿದೆ. ಖರಗ್ಪುರ-ಬಂಕುರಾ-ಆದ್ರಾ ಮಾರ್ಗದಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮತ್ತಷ್ಟು ಓದಿ: Odisha Train Accident: ರೈಲು ಅಪಘಾತಕ್ಕೆ ಮೂಲ ಕಾರಣ ಹಾಗೂ ಕಾರಣಕರ್ತರನ್ನು ಪತ್ತೆಹಚ್ಚಲಾಗಿದೆ: ಅಶ್ವಿನಿ ವೈಷ್ಣವ್
ಇತ್ತೀಚಿನ ವರದಿಗಳ ಪ್ರಕಾರ ಗೂಡ್ಸ್ ರೈಲಿನ ಲೋಕೊ ಪೈಲಟ್ ಗಾಯಗೊಂಡಿದ್ದಾರೆ, ರೈಲು ಮಾರ್ಗದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ತಲುಪಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ