West Bengal Assembly Elelctions 2021: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೇರ್ಪಡೆ

| Updated By: ganapathi bhat

Updated on: Apr 06, 2022 | 7:21 PM

ಬಾಲಿವುಡ್ ಖ್ಯಾತ ನಟ ಮಿಥುನ್ ಚಕ್ರವರ್ತಿ ಇಂದು (ಮಾರ್ಚ್ 7) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಜ್ಯದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮಿಥುನ್ ಬಿಜೆಪಿ ಬಾವುಟ ಹಾರಿಸಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದರು.

West Bengal Assembly Elelctions 2021: ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೇರ್ಪಡೆ
ಬಿಜೆಪಿ ಸೇರ್ಪಡೆಗೊಂಡ ನಟ ಮಿಥುನ್ ಚಕ್ರವರ್ತಿಗೆ ಟಿಕೆಟ್ ಸಿಕ್ಕಿಲ್ಲ!
Follow us on

ಕೋಲ್ಕತ್ತಾ: ಬಾಲಿವುಡ್ ಖ್ಯಾತ ನಟ ಮಿಥುನ್ ಚಕ್ರವರ್ತಿ ಇಂದು (ಮಾರ್ಚ್ 7) ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ರಾಜ್ಯದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಮಿಥುನ್ ಬಿಜೆಪಿ ಬಾವುಟ ಹಾರಿಸಿ ಪಕ್ಷಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಶ್ ಮಿಥುನ್ ಚಕ್ರವರ್ತಿಯನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್​ವರ್ಗಿಯಾ ಉಪಸ್ಥಿತರಿದ್ದರು.

ಭಾರತದ ಸಿನಿಮಾ ಉದ್ಯಮದಲ್ಲಿ ಮಿಥುನ್ ಚಕ್ರವರ್ತಿಯವರ ಹೆಸರು ಅಪರಿಚಿತವೇನಲ್ಲ. 1976ರಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ಅವರ ಮೃಗಯಾ ಚಿತ್ರದ ಮೂಲಕ ಹಿರಿತೆರೆಯ ಮೇಲೆ ಕಾಣಿಸಿಕೊಂಡ ಮಿಥುನ್ ಚಕ್ರವರ್ತಿ ಅದಕ್ಕೂ ಮುನ್ನ ನಕ್ಸಲ್ ಚಳವಳಿ ಸೇರಿದ್ದರು ಎಂಬುದು ಬಹುತೇಕರು ಮರೆತ ವಿಷಯ. ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್​ಟಿಟ್ಯೂಟ್​ನಲ್ಲಿ ಪದವಿ ಪಡೆದ ಅವರು, ಸಿನಿಮಾ ರಂಗ ಸೇರುವುದಕ್ಕೂ ಮುಂಚೆ ನಕ್ಸಲ್ ಚಳವಳಿ ಸೇರಿದ್ದರು. ಆದರೆ, ಅವರ ಸಹೋದರ ಅಪಘಾತವೊಂದರಲ್ಲಿ ಮೃತಪಟ್ಟ ನಂತರ ನಕ್ಸಲ್ ಚಳವಳಿ ತ್ಯಜಿಸಿ, ಮರಳಿ ಮನೆ ಸೇರಿದರು ಎನ್ನುತ್ತದೆ ಇತಿಹಾಸ. ಕುಖ್ಯಾತ ನಕ್ಸಲ್​ ಹೋರಾಟಗಾರ ರವಿ ರಂಜನ್ ಅವರ ಪ್ರೀತಿಯ ಆಪ್ತರಕ್ಷಕನೂ ಆಗಿ ಮಿಥುನ್ ಚಕ್ರವರ್ತಿ ಕೆಲ ಕಾಲ ಕೆಲಸ ನಿರ್ವಹಿಸಿದ್ದರು.

ಡಿಸ್ಕೊ ಡಾನ್ಸರ್ ಎಂದರೆ ಈಗಲೂ ಥಟ್ ಎಂದು 1980ರ ದಶಕದ ಜಿಮ್ಮಿಯ ಕುಣಿತವೇ ಕಣ್ಣಿಗೆ ಕಟ್ಟುತ್ತದೆ. ಡಿಸ್ಕೋ ಡಾನ್ಸರ್ ಮಿಥುನ್​ ಚಕ್ರವರ್ತಿ ಅವರಿಗೆ ಅಷ್ಟು ಪ್ರಸಿದ್ಧಿ ಗಳಿಸಿಕೊಟ್ಟಿತ್ತು. ಕೇವಲ ಹಿಂದಿ ಒಂದೇ ಅಲ್ಲದೇ, ಬೆಂಗಾಳಿ ಭಾಷೆಯಲ್ಲೂ ಅವರು ಹಲವು ಹಿಟ್ ಸಿನಿಮಾ ನೀಡಿದ್ದರು. 2014ರಲ್ಲಿ ಇದೇ ಮಮತಾ ಬ್ಯಾನರ್ಜಿ ಮಿಥುನ್ ಚಕ್ರವರ್ತಿ ಅವರನ್ನು ಟಿಎಂಸಿಯಿಂದ ರಾಜ್ಯಸಭಾ ಸಂಸದರನ್ನಾಗಿ ನೇಮಿಸಿತ್ತು. ಆದರೆ ಶಾರದಾ ಚಿಟ್ ಫಂಡ್ ಹಗರಣ ಹೊರಬಿದ್ದಂತೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಇಂದು (ಮಾರ್ಚ್ 7) ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಬ್ರಿಗೇಡ್ ಗ್ರೌಂಡ್​ನ ಪಕ್ಷದ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳ ಪ್ರಚಾರ ಭರ್ರಜರಿಯಾಗಿ ಸಾಗುತ್ತಿದೆ. ಬಿಜೆಪಿ ಹಾಗೂ ಟಿಎಂಸಿ ನಡುವೆ ನೇರ ಹಣಾಹಣಿ ನಡೆಯಲಿರುವುದು ಖಚಿತವಾಗಿದೆ. ಶತಾಯಗತಾಯ ಬಂಗಾಳ ವಶಪಡಿಸಿಕೊಳ್ಳುವ ತವಕದಲ್ಲಿ ಬಿಜೆಪಿ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು ಸೋನಾರ್ ಬಾಂಗ್ಲಾ (ಚಿನ್ನದ ಬಾಂಗ್ಲಾ) ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ.

ಪಶ್ಚಿಮ ಬಂಗಾಳದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಸಭೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಮೋದಿ ಕೀ ದುಖಾನ್’ ಜನೌಷಧಿ ಕೇಂದ್ರಗಳಲ್ಲೇ ಔಷಧಿ ಖರೀದಿಸಿ: ಪ್ರಧಾನಿ ನರೇಂದ್ರ ಮೋದಿ

West Bengal Assembly Elections 2021: ಟಿಎಂಸಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳ ಮತ್ತೊಂದು ಕಾಶ್ಮೀರವಾಗುತ್ತದೆ: ಸುವೇಂದು ಅಧಿಕಾರಿ

Published On - 1:23 pm, Sun, 7 March 21