ಕೊಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ನಂತರ ಇಡೀ ಪಶ್ಚಿಮ ಬಂಗಾಳದಲ್ಲಿ ಕೋಲಾಹಲ ಉಂಟಾಗಿದೆ. ಈ ಕುರಿತು ಬಿಜೆಪಿ 12 ಗಂಟೆಗಳ ‘ಬಂಗಾಳ ಬಂದ್’ಗೆ ಕರೆ ನೀಡಿದೆ. ಈ ಸಂದರ್ಭದಲ್ಲಿ ಹಲವೆಡೆ ಹಿಂಸಾಚಾರ ಮತ್ತು ಘರ್ಷಣೆಗಳು ಕಂಡುಬಂದವು. ಕೆಲವು ಸ್ಥಳಗಳಲ್ಲಿ ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ಬಾಂಬ್ ಎಸೆದು, 6-7 ಗುಂಡುಗಳನ್ನು ಸಹ ಹಾರಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಇದರ ನಡುವೆ ಉತ್ತರ ದಿನಾಜ್‌ಪುರದಲ್ಲಿ ಅತ್ಯಂತ ವಿಶಿಷ್ಟವಾದ ವಿಡಿಯೋಗಳು ವೈರಲ್ ಆಗಿವೆ. ಅಲ್ಲಿ ಸರ್ಕಾರಿ ಬಸ್ ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಓಡಿಸುತ್ತಿರುವುದು ಕಂಡುಬಂದಿದೆ. ಬಿಜೆಪಿಯ 12 ಗಂಟೆಗಳ ‘ಬಂಗಾಳ ಬಂದ್’ ಸಮಯದಲ್ಲಿ ಉತ್ತರ ದಿನಾಜ್‌ಪುರದಲ್ಲಿ ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ (NBSTC) ಬಸ್‌ಗಳ ಚಾಲಕರು ಹೆಲ್ಮೆಟ್ ಧರಿಸಿರುವುದು ಕಂಡುಬಂದಿದೆ. ಬಂದ್ನಿಂದಾಗಿ ಇಂದು ಹೆಲ್ಮೆಟ್ ಧರಿಸಿದ್ದೇವೆ, ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್ ಧರಿಸುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಬಸ್ ಚಾಲಕರೊಬ್ಬರು ತಿಳಿಸಿದರು.
#WATCH | BJP’s 12-hour ‘Bengal Bandh’: Drivers of North Bengal State Transport Corporation (NBSTC) buses seen wearing helmets, in Uttar Dinajpur
A bus diver says, “We are wearing the helmet as bandh has been called today…The government has ordered us to wear the helmets for… pic.twitter.com/TgEPJyD5zb
— ANI (@ANI) August 28, 2024
ಇದನ್ನೂ ಓದಿ: ತಮ್ಮನ್ನು ರಾಜಸ್ಥಾನಿ ಎಂದು ಕರೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಲಹರ್ ಸಿಂಗ್ ವಾಗ್ದಾಳಿ
ಬಿಜೆಪಿ ಕಾರ್ಯಕರ್ತರು ಇಂದು ಬೆಳಗ್ಗೆಯೇ ಬೀದಿಗಿಳಿದು 12 ಗಂಟೆಗಳ ರಾಜ್ಯ ಬಂದ್ ಜಾರಿಗೊಳಿಸಲು ಪಶ್ಚಿಮ ಬಂಗಾಳದಾದ್ಯಂತ ರಸ್ತೆ ತಡೆ ನಡೆಸಿದರು. ಹೂಗ್ಲಿ, ಕತ್ವಾ, ಸೀಲ್ದಾ ಸೌತ್ ಬ್ರಾಂಚ್, ಮುರ್ಷಿದಾಬಾದ್ ಮತ್ತು ಕೃಷ್ಣನಗರದಲ್ಲಿ ರೈಲು ಸೇವೆಗಳು ಅಸ್ತವ್ಯಸ್ತಗೊಂಡಿತ್ತು. ಸ್ಥಳೀಯ ರೈಲುಗಳನ್ನು ವಿವಿಧ ಮಾರ್ಗಗಳಲ್ಲಿ ನಿಲ್ಲಿಸಲಾಗಿತ್ತು.
Bus drivers in West Bengal are wearing helmets for safety amid the BJP’s Bandh call across the state. #BengalBandh #BanglaBandh pic.twitter.com/fm6LQcP7YB
— Vani Mehrotra (@vani_mehrotra) August 28, 2024
ಇದನ್ನೂ ಓದಿ: Crime News: ಆಟೋ ಹತ್ತಿದ ನರ್ಸಿಂಗ್ ವಿದ್ಯಾರ್ಥಿನಿಗೆ ಅಮಲು ಬರುವ ನೀರು ಕುಡಿಸಿ ಅತ್ಯಾಚಾರವೆಸಗಿದ ಚಾಲಕ
ಬಂದ್ಗೆ ಸಂಬಂಧಿಸಿದಂತೆ ರಾಜ್ಯದ ಹಲವೆಡೆ ಬಿಜೆಪಿ ಕಾರ್ಯಕರ್ತರು ಧ್ವಜ ಹಿಡಿದು ರಸ್ತೆಯಲ್ಲೇ ಮಲಗಿ, ಕೆಲವೆಡೆ ಹಳಿಗಳ ಮೇಲೆ ಕುಳಿತು ಲೋಕಲ್ ರೈಲು ನಿಲ್ಲಿಸಿದ ಚಿತ್ರಗಳು ಬಂದಿವೆ. ಬಿಜೆಪಿ ಕಾರ್ಯಕರ್ತರು ಹೂಗ್ಲಿ ನಿಲ್ದಾಣದಲ್ಲಿ ಸ್ಥಳೀಯ ರೈಲುಗಳ ಮಾರ್ಗವನ್ನು ತಡೆದರು. ಪಕ್ಷದ ಪ್ರತಿಭಟನೆ ಮತ್ತು 12 ಗಂಟೆಗಳ ಕಾಲ ಎಂಜಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಪೊಲೀಸ್ ತಡೆಗೋಡೆಯನ್ನು ಧ್ವಂಸಗೊಳಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ