ತಮ್ಮನ್ನು ರಾಜಸ್ಥಾನಿ ಎಂದು ಕರೆದಿದ್ದಕ್ಕೆ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕ ಲಹರ್ ಸಿಂಗ್ ವಾಗ್ದಾಳಿ
KIADB ಭೂ ವ್ಯವಹಾರವನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಿಯಾಂಕ್ ಖರ್ಗೆ ಮತ್ತು ಅವರ ಸ್ನೇಹಿತರು ರಾಜಸ್ಥಾನಿ ಎಂದು ನನ್ನ ಮೇಲೆ ದಾಳಿ ನಡೆಸಿದ್ದಾರೆ. ಹಾಗಾದರೆ, ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಲು ಜುಂಜುನುದಲ್ಲಿ ಜನಿಸಿದರಾ? ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲಾ ಎಲ್ಲಿ ಜನಿಸಿದರು? ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (KIADB) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಸದಸ್ಯರಿಗೆ ಜಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಅವರನ್ನು ರಾಜಸ್ಥಾನಿ ಎಂದು ಟೀಕಿಸಿದ್ದಾರೆ. ಇದಕ್ಕೆ ಲಹರ್ ಸಿಂಗ್ ತಿರುಗೇಟು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬ ಸದಸ್ಯರನ್ನು ಒಳಗೊಂಡ ಟ್ರಸ್ಟ್‌ಗೆ ಕೆಐಎಡಿಬಿ ಭೂ ಮಂಜೂರಾತಿಯನ್ನು ಪ್ರಶ್ನಿಸಿದ್ದಕ್ಕಾಗಿ ಪ್ರಿಯಾಂಕ್ ಖರ್ಗೆ ಮತ್ತು ಅವರ ಸ್ನೇಹಿತರು ರಾಜಸ್ಥಾನಿ ಎಂದು ನನ್ನ ಮೇಲೆ ವೈಯಕ್ತಿಕವಾಗಿ ಹಲ್ಲೆ ನಡೆಸಿದರು. ರಾಜಸ್ಥಾನವು ಪಾಕಿಸ್ತಾನದಲ್ಲಿಲ್ಲ ಎಂದು ಈ ಸಹೋದ್ಯೋಗಿಗಳಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಲಹರ್ ಸಿಂಗ್ ಆರೋಪಿಸಿದ್ದಾರೆ.
Kharge Jr. and his friends attacked me as Rajasthani for questioning KIADB land deal. I want to ask if Smt. Sonia Gandhi was born in Jhunjhunu to be RS MP from Rajasthan? Was KC Venugopal born in Sikar and Randeep Surjewala born in Churu to be given RS tickets from Rajasthan? 1/5 pic.twitter.com/1pjqbwX0rn
— Lahar Singh Siroya (@LaharSingh_MP) August 27, 2024
ರಾಜಸ್ಥಾನಿಯಾಗಿರುವುದು ಅಪರಾಧವೇ? ರಾಜಸ್ಥಾನವು ಪಾಕಿಸ್ತಾನದಲ್ಲಿಲ್ಲ ಎಂದು ನನ್ನನ್ನು ಟೀಕಿಸುತ್ತಿರುವ ಜನರಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಅಂದಹಾಗೆ, ನೆಹರೂ ಕುಟುಂಬ ಉತ್ತರ ಪ್ರದೇಶದಿಂದ ಬಂದಿದೆಯೇ ಅಥವಾ ಕಾಶ್ಮೀರದಿಂದ ಬಂದಿದೆಯೇ? ಎಂದು ಲಹರ್ ಸಿಂಗ್ ಎಕ್ಸ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
Is it a crime to be a Rajasthani? I hope these fellows know Rajasthan is not in Pakistan. By the way, does the Nehru family hail from Uttar Pradesh or from Kashmir? 2/5@BJP4Karnataka @BYVijayendra @INCKarnataka
— Lahar Singh Siroya (@LaharSingh_MP) August 27, 2024
ಇದನ್ನೂ ಓದಿ: ಖರ್ಗೆ ಕುಟುಂಬ ಸದಸ್ಯರ ಟ್ರಸ್ಟ್‌ಗೆ 5 ಎಕರೆ ಜಮೀನು: ಇದು ಅಧಿಕಾರ ದುರುಪಯೋಗಲ್ಲವೇ ಲಹರ್ ಸಿಂಗ್ ಪ್ರಶ್ನೆ
ನಾನು 59 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿದ್ದೇನೆ ಮತ್ತು ಕೆಲಸ ಮಾಡಿದ್ದೇನೆ. ನಾನು ಕನ್ನಡ ಮಾತನಾಡುತ್ತೇನೆ, ಓದುತ್ತೇನೆ ಮತ್ತು ಬರೆಯುತ್ತೇನೆ. ನಾನು ಕರ್ನಾಟಕ ಬಿಜೆಪಿಯ ಖಜಾಂಚಿಯಾಗಿದ್ದೆ. ನಾನು ನನ್ನ ಪಕ್ಷದ ಎಂಎಲ್ಸಿ ಮತ್ತು ಸಂಸದನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ರಾಹುಲ್ ಗಾಂಧಿ, ಪ್ರಿಯಾಂಕ್ ಖರ್ಗೆ ಅವರ ರೀತಿ ರಾಜಕೀಯ ವಂಶದಿಂದ ಬಂದವನಲ್ಲ. ಆದರೂ ಈ ಮಟ್ಟಿಗೆ ರಾಜಕಾರಣದಲ್ಲಿ ಸಕ್ರಿಯನಾಗಿದ್ದೇನೆ ಎಂದು ಹೆಮ್ಮೆಪಡುತ್ತೇನೆ ಎಂದಿದ್ದಾರೆ.
I have lived and worked in Karnataka for 59 years. I speak, read and write Kannada. I have been the treasurer of the Karnataka BJP and I served my party to be MLC and MP. I did not come from a political dynasty like Shri. Rahul Gandhi or Kharge Jr. I am proud to be a nobody. 3/5
— Lahar Singh Siroya (@LaharSingh_MP) August 27, 2024
ಬೇರೆಯವರ ಮೇಲೆ ಕಲ್ಲೆಸೆಯುವ ಮುನ್ನ ಪ್ರಿಯಾಂಕ್ ಖರ್ಗೆ ತಾವು ಗಾಜಿನ ಮನೆಯಲ್ಲಿದ್ದೇನೆ ಎಂಬುದನ್ನು ತಿಳಿದುಕೊಳ್ಳಬೇಕು. ನಾನು ಅವರ ತಂದೆಗಿಂತ ಕೇವಲ 6 ವರ್ಷ ಚಿಕ್ಕವನು. ಆತನಿಗಿಂತ ಹೆಚ್ಚು ಕಾಲದಿಂದ ರಾಜಕೀಯದಲ್ಲಿ ಇದ್ದೇನೆ ಎಂದು ಅವರಿಗೆ ತಿಳಿದಿರಬೇಕು. ಅವರ ಪ್ರತಿಪಾದಿಸಿದ ಶಿಕ್ಷಣಕ್ಕಿಂತ ನನ್ನ ಅನುಭವ ನನಗೆ ಬಹಳ ಪಾಠ ಕಲಿಸಿದೆ ಎಂದಿದ್ದಾರೆ.
Before he casts a stone Kharge Jr. should know he is in a glass house. He should know I am only 06 years younger than his father and have been around longer than him. My experience has taught me more than his professed education. 4/5
— Lahar Singh Siroya (@LaharSingh_MP) August 27, 2024
ಇದನ್ನೂ ಓದಿ: ತಮ್ಮ ಕುಟುಂಬದ ವಿರುದ್ಧ ಸಿಎ ಸೈಟ್ ಹಂಚಿಕೆ ಆರೋಪಕ್ಕೆ ಸ್ಪಷ್ಟನೆ ನೀಡಿದ ಪ್ರಿಯಾಂಕ್ ಖರ್ಗೆ
ಕೆಐಎಡಿಬಿ ಭೂ ಹಂಚಿಕೆ ಪ್ರಕರಣವು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರನ್ನು ತಲುಪಿದೆ. ಅವರು ಅದನ್ನು ಪರಿಶೀಲಿಸುತ್ತಾರೆ. ಖರ್ಗೆ ಕುಟುಂಬದವರಾಗಲಿ ಅಥವಾ ಸಂಬಂಧಪಟ್ಟ ಸಚಿವರಾಗಲಿ ಭೂ ಮಂಜೂರಾತಿಯನ್ನು ನಿರಾಕರಿಸಿಲ್ಲ. ಅದರ ಬದಲಿಗೆ ಸಮರ್ಥಿಸಿಕೊಂಡಿರುವುದು ನನಗೆ ಖುಷಿ ತಂದಿದೆ. ಜನರು ಬುದ್ಧಿವಂತರು, ಇದನ್ನು ಹೇಗೆ ನಿರ್ಣಯಿಸುವುದು ಎಂದು ಅವರಿಗೆ ತಿಳಿದಿದೆ ಎಂದು ಲಹರ್ ಸಿಂಗ್ ಹೇಳಿದ್ದಾರೆ.
The KIADB land allocation case has reached the Hon’ble Governor of Karnataka, who will look into it. I am glad that neither the Kharge family nor the concerned minister have denied the land allocation, instead have defended it. People are wise, they know how to judge this. 5/5
— Lahar Singh Siroya (@LaharSingh_MP) August 27, 2024
ಬೆಂಗಳೂರು ಸಮೀಪದ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಭೂಮಿ ಮಂಜೂರು ಮಾಡಿದ್ದನ್ನು ಕರ್ನಾಟಕ ಬಿಜೆಪಿ ಪ್ರಶ್ನಿಸಿತ್ತು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಭೂಮಿಗೆ ಅರ್ಹರಾಗಲು ಖರ್ಗೆ ಕುಟುಂಬವು ಯಾವಾಗ ಏರೋಸ್ಪೇಸ್ ಉದ್ಯಮಿಗಳಾದರು? ಹೇಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರು ಮಾರ್ಚ್ 2024ರಲ್ಲಿ ಈ ಹಂಚಿಕೆಗೆ ಒಪ್ಪಿಗೆ ನೀಡಿದರು? ಎಂದು ಬಿಜೆಪಿ ನಾಯಕ ಲಹರ್ ಸಿಂಗ್ ಪ್ರಶ್ನಿಸಿದ್ದರು.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ