Pegasus Scandal ಪೆಗಾಸಸ್ ತನಿಖೆಗಾಗಿ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದ ಸಮಿತಿ ರಚಿಸಿದ ಪಶ್ಚಿಮ ಬಂಗಾಳ ಸರ್ಕಾರ

West Bengal: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 ರ ಸಮಯದಲ್ಲಿ ಮುಖ್ಯಮಂತ್ರಿಯ ಸೋದರಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯನ್ನು ಪೆಗಾಸಸ್ ಸ್ಪೈವೇರ್ ಕಣ್ಗಾವಲಿರಿಸಿದೆ ಎಂದು ಬಹಿರಂಗವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.

Pegasus Scandal ಪೆಗಾಸಸ್ ತನಿಖೆಗಾಗಿ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದ ಸಮಿತಿ ರಚಿಸಿದ ಪಶ್ಚಿಮ ಬಂಗಾಳ ಸರ್ಕಾರ
ಮಮತಾ ಬ್ಯಾನರ್ಜಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Jul 26, 2021 | 2:56 PM

ಕೊಲ್ಕತ್ತಾ: ಪೆಗಾಸಸ್ ಸ್ಪೈವೇರ್ ಹಗರಣಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ಮತ್ತು ಕೊಲ್ಕತ್ತಾ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಜ್ಯೋತಿರ್ಮಯಿ ಭಟ್ಟಾಚಾರ್ಯ ನೇತೃತ್ವದ ಸಮಿತಿ ರಚಿಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021 ರ ಸಮಯದಲ್ಲಿ ಮುಖ್ಯಮಂತ್ರಿಯ ಸೋದರಳಿಯ ಮತ್ತು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯನ್ನು ಪೆಗಾಸಸ್ ಸ್ಪೈವೇರ್ ಕಣ್ಗಾವಲಿರಿಸಿದೆ ಎಂದು ಬಹಿರಂಗವಾದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.

ನ್ಯೂಸ್  ಪೋರ್ಟಲ್ ದಿ ವೈರ್ ಮತ್ತು ಇತರ 16 ಮಾಧ್ಯಮ ಸಂಸ್ಥೆಗಳು ಇತ್ತೀಚೆಗೆ ‘ಸ್ಕೂಪ್ ಲಿಸ್ಟ್’ ಅನ್ನು ಬಹಿರಂಗಪಡಿಸಿದ್ದು, ಇಸ್ರೇಲಿ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್ ಮೂಲಕ ಕಾರ್ಯಕರ್ತರು, ರಾಜಕಾರಣಿಗಳು, ಪತ್ರಕರ್ತರು, ನ್ಯಾಯಾಧೀಶರು ಮತ್ತು ಹಲವಾರು ಇತರರು ಸೈಬರ್-ಕಣ್ಗಾವಲಿನ ಗುರಿಯಾಗಿದ್ದಾರೆ ಎಂದು ತೋರಿಸಿದೆ. ಕಳೆದ ಕೆಲವು ದಿನಗಳಿಂದ, ದಿ ವೈರ್ ಹಲವಾರು ವರದಿಗಳನ್ನು ಪ್ರಕಟಿಸಿದ್ದು, ಭಿನ್ನಮತೀಯರು ಮತ್ತು ಪತ್ರಕರ್ತರ ಮೇಲೆ ಕಣ್ಗಾವಲಿರಿಸಲು ಇರಿಸಲು ಪೆಗಾಸಸ್ ಸ್ಪೈವೇರ್ ಅನ್ನು ಕಾನೂನುಬಾಹಿರವಾಗಿ ಬಳಸಲಾಗಿದೆ ಎಂದು ಸೂಚಿಸುತ್ತದೆ ಎಂದಿದೆ.

ಪೆಗಾಸಸ್ ಮೂಲಕ ನ್ಯಾಯಾಂಗ ಮತ್ತು ನಾಗರಿಕ ಸಮಾಜ ಸೇರಿದಂತೆ ಎಲ್ಲರೂ ಕಣ್ಗಾವಲಿನಲ್ಲಿದ್ದಾರೆ. ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ಕೇಂದ್ರವು ಆರೋಪಗಳ ಬಗ್ಗೆ ತನಿಖೆಯನ್ನು ಪ್ರಾರಂಭಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ ಅವರು ಹಾಗೆ ಮಾಡಲಿಲ್ಲ. ತನಿಖಾ ಆಯೋಗವನ್ನು ಪ್ರಾರಂಭಿಸಿದ ಮೊದಲ ರಾಜ್ಯ ಪಶ್ಚಿಮ ಬಂಗಾಳ “ಎಂದು ಮುಖ್ಯಮಂತ್ರಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

ಕಾನೂನುಬಾಹಿರ ಹ್ಯಾಕಿಂಗ್, ಕಣ್ಗಾವಲು, ಸ್ಪೈವೇರ್ ಮೂಲಕ ನಡೆಸಲಾದ ಮೊಬೈಲ್ ಫೋನ್‌ಗಳ ರೆಕಾರ್ಡಿಂಗ್‌ಗೆ ಸಂಬಂಧಿಸಿದ ಆರೋಪಗಳನ್ನು ವಿಚಾರಣಾ ಆಯೋಗವು ಮೇಲ್ವಿಚಾರಣೆ ಮಾಡುತ್ತದೆ.

ಇದನ್ನೂ ಓದಿ: Explainer: ಏನಿದು ಪೆಗಾಸಸ್ ಗೂಢಚರ್ಯೆ ತಂತ್ರಾಂಶ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಇದನ್ನೂ ಓದಿ: BS Yediyurappa Resign: ಬಿ.ಎಸ್.ಯಡಿಯೂರಪ್ಪಗೆ ಆಷಾಢ ಕಂಟಕ ಮತ್ತೆ ಸಾಬೀತು

(West Bengal Chief Minister Mamata Banerjee constituted an Inquiry Commission To Probe Pegasus Scandal)