Mamata Banerjee: ಮಮತಾ ಬ್ಯಾನರ್ಜಿ ಬರೆದ ಪುಸ್ತಕಗಳು ಬಂಗಾಳದ ಶಾಲಾ ಗ್ರಂಥಾಲಯದಲ್ಲಿರುವುದು ಕಡ್ಡಾಯ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬರೆದಿರುವ ಪುಸ್ತಕಗಳು ಇನ್ನುಮುಂದೆ ರಾಜ್ಯದ ಎಲ್ಲಾ ಶಾಲೆಗಳ ಗ್ರಂಥಾಲಯದಲ್ಲಿ ಇರುವುದು ಕಡ್ಡಾಯವಾಗಿದೆ. ‘ಮಾ’ ಪುಸ್ತಕದಿಂದ ‘ಕಥಾಂಜಲಿ’ವರೆಗೆ ಎಲ್ಲಾ ಪುಸ್ತಕಗಳು ಸರ್ಕಾರಿ ಶಾಲೆಯ ಗ್ರಂಥಾಲಯದಲ್ಲಿ ಇಡಲಾಗುವುದು ಎಂದು ತಿಳಿದುಬಂದಿದೆ. ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಗ್ರಂಥಾಲಯಕ್ಕಾಗಿ ಶಾಲೆಯು 515 ಪುಸ್ತಕಗಳನ್ನು ಖರೀದಿಸಬೇಕಾಗುತ್ತದೆ. ಈ 515 ಪುಸ್ತಕಗಳ ಪೈಕಿ 19 ಪುಸ್ತಕಗಳು ಮುಖ್ಯಮಂತ್ರಿ ಮಮತಾರದ್ದಾಗಿವೆ.

Mamata Banerjee: ಮಮತಾ ಬ್ಯಾನರ್ಜಿ ಬರೆದ ಪುಸ್ತಕಗಳು ಬಂಗಾಳದ ಶಾಲಾ ಗ್ರಂಥಾಲಯದಲ್ಲಿರುವುದು ಕಡ್ಡಾಯ
ಮಮತಾ ಬ್ಯಾನರ್ಜಿ

Updated on: Jun 24, 2025 | 2:08 PM

ಕೋಲ್ಕತ್ತಾ, ಜೂನ್ 24: ಪಶ್ಚಿಮ ಬಂಗಾಳ(West Bengal)ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಬರೆದಿರುವ ಪುಸ್ತಕಗಳು ಇನ್ನುಮುಂದೆ ರಾಜ್ಯದ ಎಲ್ಲಾ ಶಾಲೆಗಳ ಗ್ರಂಥಾಲಯದಲ್ಲಿ ಇರುವುದು ಕಡ್ಡಾಯವಾಗಿದೆ. ‘ನಂದಿ  ಮಾ’ ಪುಸ್ತಕದಿಂದ ‘ಕಥಾಂಜಲಿ’ವರೆಗೆ ಎಲ್ಲಾ ಪುಸ್ತಕಗಳು ಸರ್ಕಾರಿ ಶಾಲೆಯ ಗ್ರಂಥಾಲಯದಲ್ಲಿ ಇಡಲಾಗುವುದು ಎಂದು ತಿಳಿದುಬಂದಿದೆ.

ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಗ್ರಂಥಾಲಯಕ್ಕಾಗಿ ಶಾಲೆಯು 515 ಪುಸ್ತಕಗಳನ್ನು ಖರೀದಿಸಬೇಕಾಗುತ್ತದೆ. ಈ 515 ಪುಸ್ತಕಗಳ ಪೈಕಿ 19 ಪುಸ್ತಕಗಳು ಮುಖ್ಯಮಂತ್ರಿ ಮಮತಾರದ್ದಾಗಿವೆ.
ಗ್ರಂಥಾಲಯಕ್ಕಾಗಿ ಶಾಲೆಗಳಿಗೆ ಈಗಾಗಲೇ 1 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ನಂತರ ಪುಸ್ತಕಗಳ ಪಟ್ಟಿಯೂ ಬಂದಿದೆ. ಬಿಕಾಶ್ ಭವನ ಮೂಲಗಳ ಪ್ರಕಾರ, ಮಮತಾ ಬರೆದ ಪುಸ್ತಕಗಳು ಮೊದಲು ಉತ್ತರ ಬಂಗಾಳದ ಜಿಲ್ಲೆಗಳನ್ನು ತಲುಪುತ್ತವೆ.

ಮೊದಲ ಸೆಟ್ ಪುಸ್ತಕಗಳು ಅಲಿಪುರ್ದೂರ್, ಡಾರ್ಜಿಲಿಂಗ್, ಕೂಚ್ ಬೆಹಾರ್, ಜಲ್ಪೈಗುರಿ, ಕಾಲಿಂಪಾಂಗ್, ಮಾಲ್ಡಾ, ಸಿಲಿಗುರಿ ಮತ್ತು ಉತ್ತರ ದಿನಾಜ್‌ಪುರವನ್ನು ತಲುಪುತ್ತವೆ. ನಂತರ ಎರಡನೇ ಸೆಟ್ ಬಂಕುರಾ, ಬಿರ್ಭುಮ್, ಜಾರ್ಗ್ರಾಮ್ ಮತ್ತು ಪುರುಲಿಯಾ ಶಾಲೆಗಳನ್ನು ತಲುಪುತ್ತದೆ.

ಮೂರನೇ ಸೆಟ್ ಹೂಗ್ಲಿ, ದಕ್ಷಿಣ ದಿನಾಜ್‌ಪುರ, ನಾಡಿಯಾ ಮತ್ತು ಪಶ್ಚಿಮ ಮಿಡ್ನಾಪುರವನ್ನು ತಲುಪುತ್ತದೆ. ನಂತರ ನಾಲ್ಕನೇ ಸೆಟ್ ಬರಾಕ್‌ಪೋರ್, ಹೌರಾ, ಕೋಲ್ಕತ್ತಾ, ಮುರ್ಷಿದಾಬಾದ್, ಪಶ್ಚಿಮ ಬುರ್ದ್ವಾನ್ ಮತ್ತು ದಕ್ಷಿಣ 24 ಪರಗಣಗಳನ್ನು ತಲುಪುತ್ತದೆ. ಅಂತಿಮವಾಗಿ, ಪುಸ್ತಕಗಳು ಉತ್ತರ 24 ಪರಗಣಗಳು, ಪೂರ್ವ ಬುರ್ದ್ವಾನ್ ಮತ್ತು ಪೂರ್ವ ಮಿಡ್ನಾಪುರವನ್ನು ತಲುಪುತ್ತವೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಧೈರ್ಯವಿದ್ದರೆ ನಾಳೆಯೇ ಚುನಾವಣೆ ಘೋಷಿಸಿ; ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು

ನಮ್ಮ ರಾಜ್ಯದ ಮುಖ್ಯಮಂತ್ರಿ ಬರೆದ ಪುಸ್ತಕಗಳನ್ನು ಸರ್ಕಾರಿ ಹಣದಿಂದ ವಿವಿಧ ಶಾಲೆಗಳ ಗ್ರಂಥಾಲಯಗಳಿಗೆ ಕಳುಹಿಸಲಾಗುತ್ತಿದೆ ಎಂದು ಕೇಳಿ ನನಗೆ ಆಶ್ಚರ್ಯವಾಯಿತು, ಬೇರೆ ಯಾವ ರಾಜ್ಯದಲ್ಲಾದರೂ ಈ ರೀತಿ ಘಟನೆ ನಡೆದಿದೆಯೇ, ಇದನ್ನು ಅಧಿಕಾರ ದುರುಪಯೋಗ ಎಂದು ಕರೆಯಬಹುದೆಂದು ಎಂದು ಬಂಗಾಳ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸ್ವಪ್ನ ಮಂಡಲ್ ತಿಳಿಸಿದ್ದಾರೆ.

ಮತಾ ಬ್ಯಾನರ್ಜಿ ಅವರ ಅನುಮೋದನೆಯಿಲ್ಲದೆ ಶಿಕ್ಷಣ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡರೆ, ಅವರು ಬರೆದ ಪುಸ್ತಕಗಳು ಗ್ರಂಥಾಲಯಗಳಿಗೆ ಹೋಗದಂತೆ ಮುಖ್ಯಮಂತ್ರಿ ಶಿಕ್ಷಣ ಇಲಾಖೆಗೆ ಸೂಚನೆ ನೀಡಬೇಕು ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಹಾಡುಗಳನ್ನು ಬರೆಯುವುದು, ಪುಸ್ತಕಗಳನ್ನು ಬರೆಯುವುದರಿಂದ ಹಿಡಿದು ಚಿತ್ರಕಲೆಯವರೆಗೆ ಎಲ್ಲವನ್ನೂ ಮಾಡಲು ಇಷ್ಟಪಡುತ್ತಾರೆ. ಮಕ್ಕಳಿಗಾಗಿ ಕವಿತೆಗಳನ್ನು ಬರೆಯುವುದರಿಂದ ಹಿಡಿದು ವಯಸ್ಕರಿಗೆ ಕಥೆಗಳವರೆಗೆ, ಅವರು ಎಲ್ಲವನ್ನೂ ಬರೆದಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಈ ಕೆಲಸಗಳನ್ನು ಮಾಡಲು ಇಷ್ಟಪಡುವುದಾಗಿ ಮುಖ್ಯಮಂತ್ರಿಗಳೇ ಹೇಳಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ