AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆ: ಆಷಾಢಿ ವಾರಿ ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮಾಂಸ ಎಸೆದ ಮುಸ್ಲಿಂ ಮಹಿಳೆ

ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಆಯೋಜಿಸಲಾಗುವ ಆಷಾಢಿ ವಾರಿ (Ashadi Wari) ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮುಸ್ಲಿಂ ಮಹಿಳೆ ಮಾಂಸ ಹಾಗೂ ಪ್ರಾಣಿಗಳ ಮೂಳೆಗಳನ್ನು ಎಸೆದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷವೂ ಆಷಾಢಿ ವಾರಿ ಅಥವಾ ಪಂಢರಾಪುರ್ ವಾರಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲೆಡೆ ಮೆರವಣಿಗೆಗಳು ನಡೆಯುತ್ತವೆ. ಭಕ್ತರನ್ನು ವರ್ಕಾರೀಸ್ ಎಂದು ಕರೆಯಲಾಗುತ್ತದೆ. ಭಗವಾನ್ ವಿಠ್ಠಲನನ್ನು ನೆನಪಿಸಿ ಆರಾಧಿಸುವ ದಿನ ಇದಾಗಿದೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಈ ವಾರಿ ಕೂಡ ಒಂದು.

ಪುಣೆ: ಆಷಾಢಿ ವಾರಿ ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮಾಂಸ ಎಸೆದ ಮುಸ್ಲಿಂ ಮಹಿಳೆ
ಭಕ್ತರು
ನಯನಾ ರಾಜೀವ್
|

Updated on: Jun 24, 2025 | 11:47 AM

Share

ಪುಣೆ, ಜೂನ್ 24: ಆಷಾಢಿ ವಾರಿ (Ashadi Wari) ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮುಸ್ಲಿಂ ಮಹಿಳೆ ಮಾಂಸ ಹಾಗೂ ಪ್ರಾಣಿಗಳ ಮೂಳೆಗಳನ್ನು ಎಸೆದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷವೂ ಆಷಾಢಿ ವಾರಿ ಅಥವಾ ಪಂಢರಾಪುರ್ ವಾರಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲೆಡೆ ಮೆರವಣಿಗೆಗಳು ನಡೆಯುತ್ತವೆ. ಭಕ್ತರನ್ನು ವರ್ಕಾರೀಸ್ ಎಂದು ಕರೆಯಲಾಗುತ್ತದೆ. ಭಗವಾನ್ ವಿಠ್ಠಲನನ್ನು ನೆನಪಿಸಿ ಆರಾಧಿಸುವ ದಿನ ಇದಾಗಿದೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಈ ವಾರಿ ಕೂಡ ಒಂದು.

ಈ ಕುರಿತು ಛತ್ರಪತಿ ಸಂಭಾಜಿನಗರ ನಿವಾಸಿ ಅಕ್ಕಲ್ವಂತ್ ರಾಥೋಡ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯನ್ನು ಪುಣೆಯ ಕ್ಯಾಂಪ್ ಪ್ರದೇಶದ ಮಾಮದೇವಿ ಚೌಕ್ ಬಳಿಯ ಗೈಬಿಪಿರ್ ದರ್ಗಾ ಬಳಿಯ ಸೋಲಾಪುರ ರಸ್ತೆಯ ನಿವಾಸಿ 57 ವರ್ಷದ ಮಹಿಳೆ ನಾಸಿಮ್ ಶೇಖ್ ಎಂದು ಗುರುತಿಸಲಾಗಿದೆ.

ಮಮ್ಮದೇವಿ ಚೌಕ್ ಬಳಿಯ ಶೇಖ್ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಹಾದುಹೋಗುತ್ತಿದ್ದಾಗ, ಆಕೆ ಜನರ ಮೇಲೆ ಮಾಂಸ ಎಸೆದು, ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ರಾಥೋಡ್ ಎಂಬುವವರಿಗೆ ಎಚ್ಚರಿಕೆ ನೀಡಿದ್ದಳು. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಭಕ್ತರಿಗೆ ಮುಂದೆ ಸಾಗುವಂತೆ ಸೂಚನೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮತ್ತಷ್ಟು ಓದಿ: ಮೃತ ದೇವರ ಹಸುವನ್ನು ಭವ್ಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂದೆಯೇ ಅಂತ್ಯಕ್ರಿಯೆ ಮಾಡಿದ ಗ್ರಾಮಸ್ಥರು

ಆಷಾಢಿ ವಾರಿ ಮಹಾರಾಷ್ಟ್ರದಲ್ಲಿ ಬಹಳ ಪ್ರಸಿದ್ಧವಾದ ಸಂಪ್ರದಾಯವಾಗಿದೆ. ಇದು ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯವನ್ನು ಪ್ರದರ್ಶಿಸುತ್ತದೆ, ಎಲ್ಲಾ ವರ್ಗಗಳು, ಪಂಗಡಗಳು ಮತ್ತು ಜಾತಿಗಳ ಜನರು ವಾರಕರಿಗಳಲ್ಲಿ ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ.

ಆದರೆ ಈ ಘಟನೆ ಕಳವಳವನ್ನು ಹುಟ್ಟುಹಾಕಿದೆ. ಹಾದುಹೋಗುವ ಸ್ಥಳಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟವನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಸಂತ ತುಕಾರಾಂ ಮತ್ತು ಸಂತ ಜ್ಞಾನೇಶ್ವರರ ಪಲ್ಲಕ್ಕಿಗಳು ಸೊಲ್ಲಾಪುರದ ಪಂಢರಪುರಲ್ಲಿರುವ ವಿಠ್ಠಲನ ದೇವಾಲಯವನ್ನು ಮೆರವಣಿಗೆ ಮೂಲಕ ತಲುಪುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು