ಹಿಂಸಾಚಾರದ ನಡುವೆ ಜುಲೈ 8 ರಂದು ನಡೆದಿದ್ದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಎರಡು ಮತ ಪೆಟ್ಟಿಗೆಗಳು ಉತ್ತರ ದಿನಜ್ಪುರದ ಕೊಳದಲ್ಲಿ ಪತ್ತೆಯಾಗಿವೆ. ಜುಲೈ 11 ರಂದು ಪಂಚಾಯತ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಗಳಿಸಿತ್ತು.
ಪಂಚಾಯತ್ ಚುನಾವಣೆ ದಿನದಂದು ಮತಪೆಟ್ಟಿಗೆಗಳನ್ನು ಬೂತ್ನಿಂದ ಲೂಟಿ ಮಾಡಲಾಗಿದೆ ಎಂದು ಆಡಳಿತಾಧಿಕಾರಿಗಳು ಹೇಳಿದ್ದಾರೆ.
ಜುಲೈ 11ರಂದು ಮತ ಎಣಿಕೆಯ ದಿನದಂದು ತೃಣಮೂಲ ಪರವಾಗಿ ಪಲಿತಾಂಶವನ್ನು ಬದಲಾಯಿಸಲು ಮತ ಪೆಟ್ಟಿಗೆಗಳನ್ನು ಕೊಳಕ್ಕೆ ಎಸೆದಿರಬಹುದು ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಶುಕ್ರವಾರ ಜಿಲ್ಲೆಯ ಕರಂಡಿಘಿ ಬ್ಲಾಕ್ ವ್ಯಾಪ್ತಿಯ ಬೆಳುವಾ ನಿವಾಸಿಗಳು ಮೀನು ಹಿಡಿಯಲು ಹೊಂಡದಲ್ಲಿ ಬಲೆ ಬೀಸಿದಾಗ ಮತಪೆಟ್ಟಿಗೆಗಳು ಮೀನುಗಾರಿಕಾ ಬಲೆಗೆ ಸಿಕ್ಕಿ ಬಿದ್ದಿವೆ ಎಂದು ಮೂಲಗಳು ತಿಳಿಸಿವೆ. ಸುದ್ದಿ ಹರಡುತ್ತಿದ್ದಂತೆ, ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿ ಬಾಕ್ಸ್‌ಗಳನ್ನು ವಶಪಡಿಸಿಕೊಂಡರು.
ಮತ್ತಷ್ಟು ಓದಿ: West Bengal Panchayat Election: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ; 18 ಸಾವು
ಚುನಾವಣೆಯ ದಿನದಂದು ಬ್ಲಾಕ್‌ನ ಬೂತ್ ಸಂಖ್ಯೆ 25 ರಿಂದ ಲೂಟಿಯಾದ ಮೂರು ಮತಪೆಟ್ಟಿಗೆಗಳಲ್ಲಿ ಇವು ಸೇರಿವೆ ಎಂದು ಅನುಮಾನ ವ್ಯಕ್ತವಾಗಿದೆ.
ಬೂತ್ನಲ್ಲಿ ಮರು ಮತದಾನ ನಡೆಯಲಿದೆ ಕರಂಡಿಘಿ ಬ್ಲಾಕ್‌ನ ಬಿಡಿಒ ನಿಸಿತ್ ತಮಾಂಗ್ ಹೇಳಿದ್ದಾರೆ. ಜುಲೈ 11ರಂದು ಮತ ಎಣಿಕೆ ವೇಳೆ ಈ ಮತಪೆಟ್ಟಿಗೆಗಳನ್ನು ಕೆರೆಗೆ ಎಸೆಯಲಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಎಣಿಕೆ ಸಮಯದಲ್ಲಿ, ತೃಣಮೂಲ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ವಿವಿಧ ರೀತಿಯಲ್ಲಿ ದುರ್ಬಳಕೆ ಮಾಡಲಾಗಿದೆ. ಅಂತಿಮ ಫಲಿತಾಂಶವನ್ನು ಕುಶಲತೆಯಿಂದ ನಿರ್ವಹಿಸಲು ಈ ಪೆಟ್ಟಿಗೆಗಳನ್ನು ಕೊಳದಲ್ಲಿ ಎಸೆಯಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಆರೋಪಗಳು ಆಧಾರರಹಿತ ಎಂದು ಜಿಲ್ಲಾ ತೃಣಮೂಲ ಮುಖ್ಯಸ್ಥ ಕನ್ಹಯಾಲಾಲ್ ಅಗರ್ವಾಲ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ