ಪ್ರಧಾನಿ ಮೋದಿ, ಸಿಎಂ ಖಟ್ಟರ್‌ಗೆ ಬೆದರಿಕೆ; ಹರ್ಯಾಣದಲ್ಲಿ ಪ್ರಚೋದನಕಾರಿ ಖಲಿಸ್ತಾನ್ ಗ್ರಾಫಿಟಿ
ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ಪರೇಡ್‌ನಲ್ಲಿ ಭಾಗವಹಿಸದಂತೆ ಎಸ್‌ಎಫ್‌ಜೆ ಗುರುಪತ್‌ವಂತ್ ಸಿಂಗ್ ಪನ್ನು ಪ್ರಧಾನಿ ಮೋದಿ ಮತ್ತು ಜನರಿಗೆ ಬೆದರಿಕೆ ಹಾಕಿದ್ದು, ಹರಿಯಾಣ ಕೂಡ ಖಲಿಸ್ತಾನ್ ಆಗಲಿದೆ, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೈಶಂಕರ್‌ಗೆ ಎಚ್ಚರಿಕೆ ಎಂದು ಗೋಡೆ ಬರಹಗಳಲ್ಲಿ ಬರೆದಿದೆ.
ಚಂಡೀಗಢ ಜುಲೈ 31: ಸಿಖ್ ಫಾರ್ ಜಸ್ಟಿಸ್ (SFJ) ಸೋಮವಾರ ಹರ್ಯಾಣದ ದಬ್ವಾಲಿ ಮಂಡಿಯ ಎಸ್ಡಿಎಂ ಕಚೇರಿಯ ಹೊರಗೆ ಖಲಿಸ್ತಾನಿ ಪರ ಘೋಷಣೆಗಳನ್ನು ಹೊಂದಿರುವ ಗ್ರಾಫಿಟಿ ಮತ್ತು ಧ್ವಜ ಕಾಣಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರಿಗೆ ಬೆದರಿಕೆ ಹಾಕಿದ್ದು, ಖಲಿಸ್ತಾನ್ ಪರ ಸಂಘಟನೆಯಾದ ಸಿಖ್ ಫಾರ್ ಜಸ್ಟಿಸ್ ಇದರ ಹೊಣೆ ಹೊತ್ತುಕೊಂಡಿದೆ ಖಲಿಸ್ತಾನಿ ಬೆಂಬಲಿಗರಿಂದ ಪ್ರಧಾನಿ ಮೋದಿ ಮತ್ತು ಹರ್ಯಾಣ ಸಿಎಂಗೆ ಆತ್ಮೀಯ ಸ್ವಾಗತ ಎಂದು ಖಲಿಸ್ತಾನದ ಧ್ವಜವನ್ನು ಬೀಸುತ್ತಾ ಗುರುಪತ್‌ವಂತ್ ಸಿಂಗ್ ಪನ್ನು ವಿಡಿಯೊದಲ್ಲಿ ಹೇಳಿದ್ದಾರೆ.
ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ಪರೇಡ್‌ನಲ್ಲಿ ಭಾಗವಹಿಸದಂತೆ ಎಸ್‌ಎಫ್‌ಜೆ ಗುರುಪತ್‌ವಂತ್ ಸಿಂಗ್ ಪನ್ನು ಪ್ರಧಾನಿ ಮೋದಿ ಮತ್ತು ಜನರಿಗೆ ಬೆದರಿಕೆ ಹಾಕಿದರು. ಈ ಮಧ್ಯೆ, ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಖಲಿಸ್ತಾನ್ ಧ್ವಜ ಮತ್ತು ಗ್ರಾಫಿಟಿ ತೆಗೆದುಹಾಕಿದ್ದಾರೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಪ್ರಧಾನಿ ಮೋದಿ ವಿದೇಶದಲ್ಲಿ ನೆಲೆಸಲಿದ್ದಾರೆ: ಲಾಲು ಪ್ರಸಾದ್ ಯಾದವ್
ಗೋಡೆಗಳ ಮೇಲಿನ ಬರಹಗಳಲ್ಲಿ ಹರ್ಯಾಣ ಕೂಡಾ ಖಲಿಸ್ತಾನ್ ಆಗಲಿದೆ. ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಜೈಶಂಕರ್‌ಗೆ ಎಚ್ಚರಿಕೆ ಎಂದು ಬರೆಯಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ