AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಉತ್ತರ ದಿನಜ್​ಪುರದ ಕೊಳದಲ್ಲಿ ಬಲೆಗೆ ಬಿದ್ದಿದ್ದು ಮೀನುಗಳಲ್ಲ, ಎರಡು ಮತಪೆಟ್ಟಿಗೆಗಳು

ಹಿಂಸಾಚಾರದ ನಡುವೆ ಜುಲೈ 8 ರಂದು ನಡೆದಿದ್ದ ಪಶ್ಚಿಮ ಬಂಗಾಳ ಪಂಚಾಯತ್​ ಚುನಾವಣೆಗೆ ಸಂಬಂಧಿಸಿದ ಎರಡು ಮತ ಪೆಟ್ಟಿಗೆಗಳು ದಿನಜ್​ಪುರದ ಕೊಳದಲ್ಲಿ ಪತ್ತೆಯಾಗಿವೆ

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಉತ್ತರ ದಿನಜ್​ಪುರದ ಕೊಳದಲ್ಲಿ ಬಲೆಗೆ ಬಿದ್ದಿದ್ದು ಮೀನುಗಳಲ್ಲ, ಎರಡು ಮತಪೆಟ್ಟಿಗೆಗಳು
ಮತ ಪೆಟ್ಟಿಗೆ
ನಯನಾ ರಾಜೀವ್
|

Updated on: Jul 31, 2023 | 3:04 PM

Share

ಹಿಂಸಾಚಾರದ ನಡುವೆ ಜುಲೈ 8 ರಂದು ನಡೆದಿದ್ದ ಪಶ್ಚಿಮ ಬಂಗಾಳ ಪಂಚಾಯತ್​ ಚುನಾವಣೆಗೆ ಸಂಬಂಧಿಸಿದ ಎರಡು ಮತ ಪೆಟ್ಟಿಗೆಗಳು ಉತ್ತರ  ದಿನಜ್​ಪುರದ ಕೊಳದಲ್ಲಿ ಪತ್ತೆಯಾಗಿವೆ. ಜುಲೈ 11 ರಂದು ಪಂಚಾಯತ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ಗಳಿಸಿತ್ತು.

ಪಂಚಾಯತ್ ಚುನಾವಣೆ ದಿನದಂದು ಮತಪೆಟ್ಟಿಗೆಗಳನ್ನು ಬೂತ್​ನಿಂದ ಲೂಟಿ ಮಾಡಲಾಗಿದೆ ಎಂದು ಆಡಳಿತಾಧಿಕಾರಿಗಳು ಹೇಳಿದ್ದಾರೆ. ಜುಲೈ 11ರಂದು ಮತ ಎಣಿಕೆಯ ದಿನದಂದು ತೃಣಮೂಲ ಪರವಾಗಿ ಪಲಿತಾಂಶವನ್ನು ಬದಲಾಯಿಸಲು ಮತ ಪೆಟ್ಟಿಗೆಗಳನ್ನು ಕೊಳಕ್ಕೆ ಎಸೆದಿರಬಹುದು ಎಂದು ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಶುಕ್ರವಾರ ಜಿಲ್ಲೆಯ ಕರಂಡಿಘಿ ಬ್ಲಾಕ್ ವ್ಯಾಪ್ತಿಯ ಬೆಳುವಾ ನಿವಾಸಿಗಳು ಮೀನು ಹಿಡಿಯಲು ಹೊಂಡದಲ್ಲಿ ಬಲೆ ಬೀಸಿದಾಗ ಮತಪೆಟ್ಟಿಗೆಗಳು ಮೀನುಗಾರಿಕಾ ಬಲೆಗೆ ಸಿಕ್ಕಿ ಬಿದ್ದಿವೆ ಎಂದು ಮೂಲಗಳು ತಿಳಿಸಿವೆ. ಸುದ್ದಿ ಹರಡುತ್ತಿದ್ದಂತೆ, ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿ ಬಾಕ್ಸ್‌ಗಳನ್ನು ವಶಪಡಿಸಿಕೊಂಡರು.

ಮತ್ತಷ್ಟು ಓದಿ: West Bengal Panchayat Election: ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಹಿಂಸಾಚಾರ; 18 ಸಾವು ಚುನಾವಣೆಯ ದಿನದಂದು ಬ್ಲಾಕ್‌ನ ಬೂತ್ ಸಂಖ್ಯೆ 25 ರಿಂದ ಲೂಟಿಯಾದ ಮೂರು ಮತಪೆಟ್ಟಿಗೆಗಳಲ್ಲಿ ಇವು ಸೇರಿವೆ ಎಂದು ಅನುಮಾನ ವ್ಯಕ್ತವಾಗಿದೆ.

ಬೂತ್​ನಲ್ಲಿ ಮರು ಮತದಾನ ನಡೆಯಲಿದೆ ಕರಂಡಿಘಿ ಬ್ಲಾಕ್‌ನ ಬಿಡಿಒ ನಿಸಿತ್ ತಮಾಂಗ್ ಹೇಳಿದ್ದಾರೆ. ಜುಲೈ 11ರಂದು ಮತ ಎಣಿಕೆ ವೇಳೆ ಈ ಮತಪೆಟ್ಟಿಗೆಗಳನ್ನು ಕೆರೆಗೆ ಎಸೆಯಲಾಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಎಣಿಕೆ ಸಮಯದಲ್ಲಿ, ತೃಣಮೂಲ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ವಿವಿಧ ರೀತಿಯಲ್ಲಿ ದುರ್ಬಳಕೆ ಮಾಡಲಾಗಿದೆ. ಅಂತಿಮ ಫಲಿತಾಂಶವನ್ನು ಕುಶಲತೆಯಿಂದ ನಿರ್ವಹಿಸಲು ಈ ಪೆಟ್ಟಿಗೆಗಳನ್ನು ಕೊಳದಲ್ಲಿ ಎಸೆಯಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಈ ಆರೋಪಗಳು ಆಧಾರರಹಿತ ಎಂದು ಜಿಲ್ಲಾ ತೃಣಮೂಲ ಮುಖ್ಯಸ್ಥ ಕನ್ಹಯಾಲಾಲ್ ಅಗರ್ವಾಲ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?