Toddler: ಆರು ತಿಂಗಳಲ್ಲಿ ನೊಬೆಲ್ ವಿಶ್ವ ದಾಖಲೆ ತನ್ನದಾಗಿಸಿಕೊಂಡ ಮುದ್ದು ಮಗು.. ಏನು ಸಾಧನೆ ಮಾಡಿದ್ದಾನೆ ಗೊತ್ತಾ?

Nobel world record: ಇದೇ ತಿಂಗಳ 19ರಂದು ನೊಬೆಲ್ ವರ್ಲ್ಡ್​​​ ರೆಕಾರ್ಡ್ ಸಂಸ್ಥೆಗೆ ವಿಡಿಯೋ ಕಳುಹಿಸಿದ್ದು, ಮೇಧಾವಿ ಮಗು ಪ್ರಜ್ವಲ್ ವಿಡಿಯೋಗಳನ್ನು ನೋಡಿದ ಸಂಸ್ಥೆಯ ಪ್ರತಿನಿಧಿಗಳು ಮಗುವಿಗೆ ಆನ್ ಲೈನ್ ನಲ್ಲಿ 29ರಂದು ನೊಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಕಳುಹಿಸಿದ್ದಾರೆ.

Toddler: ಆರು ತಿಂಗಳಲ್ಲಿ ನೊಬೆಲ್ ವಿಶ್ವ ದಾಖಲೆ ತನ್ನದಾಗಿಸಿಕೊಂಡ ಮುದ್ದು ಮಗು.. ಏನು ಸಾಧನೆ ಮಾಡಿದ್ದಾನೆ ಗೊತ್ತಾ?
ನೊಬೆಲ್ ವಿಶ್ವ ದಾಖಲೆ ತನ್ನದಾಗಿಸಿಕೊಂಡ ಮುದ್ದು ಮಗು
Follow us
|

Updated on: Jul 31, 2023 | 2:33 PM

ಆರು ತಿಂಗಳ ಮಗು (Toddler) ಏನು ಮಾಡುತ್ತದೆ? ಆರಾಮವಾಗಿ, ಯಾವುದೇ ಆತಂಕವಿಲ್ಲದೆ ಆಡಿಕೊಂಡಿರುತ್ತಾನೆ ಬಿಡಿ ಅನ್ನಬೇಡಿ. ಆರು ತಿಂಗಳ ವಯಸ್ಸಿನಲ್ಲಿ ಆ ಬಾಲಕ ನೊಬೆಲ್ ವಿಶ್ವ ದಾಖಲೆಯನ್ನು ಹೊಂದಿದ್ದಾನೆ. ಏನು ಆರು ತಿಂಗಳ ಮಗುವಿನಿಂದ ಇದು ಸಾಧ್ಯವಾದೀತಾ ಎಂದು ಮೂಗಿನ ಮೆಲೆ ಬೆರಳಿಟ್ಟುಕೊಳ್ಳಬೇಡಿ. ಏಕೆಂದರೆ ನೊಬೆಲ್ ವಿಶ್ವ ದಾಖಲೆಯನ್ನು ಹೊಂದುವುದು ಅಷ್ಟು ಸುಲಭದ ಮಾತಲ್ಲ. ಹೌದು, ಅಷ್ಟಕ್ಕೂ ಆರು ತಿಂಗಳ ಮೇಧಾವಿ ಮಗು ಮಾಡಿದ್ದೇನು, ನೊಬೆಲ್ ವಿಶ್ವ ದಾಖಲೆ ( Nobel World Record) ಯಾವ ಸಾಧನೆ ಮಾಡಿದ? ತಿಳಿಯಬೇಕಾದರೆ ಈ ಲೇಖನ ಓದಲೇಬೇಕು.

ಆರು ತಿಂಗಳ ವಯಸ್ಸಿನಲ್ಲಿ ತಂದೆ-ತಾಯಿಯನ್ನು ನೆನಪಿಸಿಕೊಳ್ಳುವುದೇ ಸ್ವಲ್ಪ ತ್ರಾಸದಾಯಕ ಎನಿಸುವಾಗ ಈ ಮೇಧಾವಿ ಮಗು ತಾನು ನೋಡಿದ್ದನ್ನು ಟಕ್​​ ಅಂತಾ ನೆನಪಿಸಿಕೊಳ್ಳುತ್ತಾನೆ. ವಿವರಗಳನ್ನು ನೋಡುವುದಾದರೆ… ಕಡಪ ಜಿಲ್ಲೆಯ (Kadapa) ಪೊದ್ದೂರು ಕ್ಷೇತ್ರದ ಶಾಸ್ತ್ರಿನಗರದ ಪವನ್ ಕುಮಾರ್ ಸೌಮ್ಯ ಎಂಬ ದಂಪತಿಗೆ ಪ್ರಜ್ವಲ್ ಎಂಬ 6 ತಿಂಗಳ ಮಗುವಿದೆ.

Also Read: Baby Elephant: ತಾಯಿಯಿಂದ ದೂರವಾದ ಮರಿ ಆನೆ ರೋಧನೆ, ಅಯ್ಯಯ್ಯೋ…!

ಈ ಮಗು ತನ್ನ ತಾಯಿ ತೋರಿಸಿದ ಪ್ರಾಣಿಗಳು, ಹಣ್ಣುಗಳು, ವಾಹನಗಳು, ಪಕ್ಷಿಗಳು, ತರಕಾರಿಗಳು ಮತ್ತು ಸಂಖ್ಯೆಗಳ ಫೋಟೋಗಳನ್ನು ಗುರುತಿಸಲು ಆರಂಭಿಸಿದ. ತಡಮಾಡದೆ ತಾಯಿ ತನ್ನ ಮಗುವಿನ ಚಾಣಾಕ್ಷತೆಯನ್ನು ವಿಡಿಯೋ ಮಾಡಿ ನೊಬೆಲ್ ವಿಶ್ವ ದಾಖಲೆಗೆ ಕಳುಹಿಸಿದ್ದಾರೆ.

ಇದೇ ತಿಂಗಳ 19ರಂದು ನೊಬೆಲ್ ವರ್ಲ್ಡ್​​​ ರೆಕಾರ್ಡ್ ಸಂಸ್ಥೆಗೆ ವಿಡಿಯೋ ಕಳುಹಿಸಿದ್ದು, ಮೇಧಾವಿ ಮಗು ಪ್ರಜ್ವಲ್ ವಿಡಿಯೋಗಳನ್ನು ನೋಡಿದ ಸಂಸ್ಥೆಯ ಪ್ರತಿನಿಧಿಗಳು ಮಗುವಿಗೆ ಆನ್ ಲೈನ್ ನಲ್ಲಿ 29ರಂದು ನೊಬೆಲ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಕಳುಹಿಸಿದ್ದಾರೆ. ಆರು ತಿಂಗಳೊಳಗೆ ಈ ಪ್ರಶಸ್ತಿಯನ್ನು ಗೆದ್ದ ಮೇಧಾವಿ ಮಗುವಿನ ಅಸಾಧಾರಣ ಬುದ್ಧಿವಂತಿಕೆ ಕಂಡು ಮಂದಿ ಬೆಚ್ಚಿಬಿದ್ದಿದ್ದಾರೆ.

Also Read: ಒಂದಕ್ಕಿಂತ ಹೆಚ್ಚು ಇಪಿಎಫ್ ಖಾತೆಗಳಿದ್ದರೆ ಎಲ್ಲಕ್ಕೂ ಸರ್ಕಾರದ ಕೊಡುಗೆ ಸಿಗುತ್ತಾ? ನೀವು ತಿಳಿಯಬೇಕಾದ ಸಂಗತಿಗಳು

ಇನ್ನು, ಆರು ತಿಂಗಳಲ್ಲೇ ವಿಶ್ವ ದಾಖಲೆ ಸಾಧಿಸಿರುವಾಗ ಮುಂದೆ ಇನ್ನೆಷ್ಟು ದಾಖಲೆಗಳನ್ನು ಮುರಿಯುತ್ತಾನೋ ಎಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ. ತಮ್ಮ ಮಗುವಿಗೆ ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ಪಾಲಕರು ಅಪಾರ ಸಂಭ್ರಮದಲ್ಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ