Ganja: ಮಾಜಿ ರಣಜಿ ಕ್ರಿಕೆಟ್ ಆಟಗಾರನನ್ನು ಗಾಂಜಾ ಸಮೇತ ಕ್ಯಾಚ್​ ಹಿಡಿದ ತೆಲುಗು ಪೊಲೀಸರು.. ಎರಡೂ ತೆಲುಗು ರಾಜ್ಯಗಳಲ್ಲಿ 25 ವಂಚನೆ ಪ್ರಕರಣಗಳು

Former Ranji cricket Player: ನಾಗರಾಜು ಹೆಸರಾಂತ ವ್ಯಕ್ತಿಗಳ ಹೆಸರು ಹೇಳಿ ಸರಣಿ ವಂಚನೆ ಮಾಡುತ್ತಿದ್ದ. ಹಾಲಿ ರಣಜಿ ಕ್ರಿಕೆಟಿಗರು ಮಾಜಿ ಕ್ರಿಕೆಟಿಗ ಎಂಎಸ್‌ಕೆ ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಿ ಹಲವು ಕಾರ್ಪೊರೇಟ್ ಕಂಪನಿಗಳಿಗೆ ಕರೆ ಮಾಡಿದ್ದಾರೆ.

Ganja: ಮಾಜಿ ರಣಜಿ ಕ್ರಿಕೆಟ್ ಆಟಗಾರನನ್ನು ಗಾಂಜಾ ಸಮೇತ ಕ್ಯಾಚ್​ ಹಿಡಿದ ತೆಲುಗು ಪೊಲೀಸರು.. ಎರಡೂ ತೆಲುಗು ರಾಜ್ಯಗಳಲ್ಲಿ 25 ವಂಚನೆ ಪ್ರಕರಣಗಳು
ಮಾಜಿ ರಣಜಿ ಕ್ರಿಕೆಟ್ ಆಟಗಾರನನ್ನು ಗಾಂಜಾ ಸಮೇತ ಕ್ಯಾಚ್​ ಹಿಡಿದ ತೆಲುಗು ಪೊಲೀಸರು
Follow us
|

Updated on: Jul 31, 2023 | 3:10 PM

ಶ್ರೀಕಾಕುಳಂ, ಜುಲೈ 31: ಈ ಮಾಜಿ ರಣಜಿ ಕ್ರಿಕೆಟಿಗ ಒಂದಿಲ್ಲೊಂದು ಅಪರಾಧ ಮಾಡಿ ಜೈಲಿಗೆ ಹೋಗುತ್ತಿದ್ದ. ಸುಲಭವಾಗಿ, ವಂಚನೆ ಮಾಡಿ ಹಣ ಮಾಡುವ ಜಾಯಮಾನಕ್ಕೆ ಒಗ್ಗಿಕೊಂಡು, ಬಂಗಾರದಂತಹ ತನ್ನ ಭವಿಷ್ಯವನ್ನು ಸ್ವತಃ ತನ್ನ ಕೈಯಿಂದಲೇ ನಾಶಪಡಿಸಿಕೊಂಡಿದ್ದಾನೆ. ಶ್ರೀಕಾಕುಳಂ ಜಿಲ್ಲೆಯ ಪೊಲಕಿ ಮಂಡಲದ ಯವ್ವರಪು ಪೇಟೆಯಲ್ಲಿ ಜನಿಸಿದ ನಾಗರಾಜು ಕಡು ಬಡತನದಲ್ಲಿ ಹುಟ್ಟಿದ್ದರೂ ಕಠಿಣ ಸಾಧನೆಯ ಮೂಲಕ ರಣಜಿ ಕ್ರಿಕೆಟಿಗನ ಮಟ್ಟಕ್ಕೆ ಏರಿದ್ದ. ಆದರೆ ಅವನಿಗೆ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಜೀವನದಲ್ಲಿ ದುರಾಸೆ ಹೆಚ್ಚಾಗಿ, ನಿರಂತರವಾಗಿ ವಂಚನೆಗಳನ್ನು ಮಾಡಿ ಪಾತಾಳಲೋಕಕ್ಕೆ ಇಳಿದಿದ್ದಾನೆ. ಶ್ರೀಕಾಕುಳಂ (Srikakulam) ಟೂ ಟೌನ್ ಪೊಲೀಸರು ಭಾನುವಾರ ಬೆಳಗ್ಗೆ ಶ್ರೀಕಾಕುಳಂನ ಸೀಪನ್ನಾಯ್ಡು ಪೇಟೆಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಾಂಜಾ ಸಮೇತ ಬುಡುಮೂರು ನಾಗರಾಜು (Former Ranji cricket Player Budumuru Nagaraju ) ಅವರನ್ನು ಹಿಡಿದಿದ್ದಾರೆ. ಆತನಿಂದ 23 ಕೆ.ಜಿ ತೂಕದ ಎರಡು ಚೀಲ ಗಾಂಜಾ (Ganja) ವಶಕ್ಕೆ ಪಡೆದಿದ್ದಾರೆ. ಒರಿಸ್ಸಾದ ಪರ್ಲಕಿಮಿಡಿ ರೈಲ್ವೇ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸಿದ್ದಾಗಿ ಪೊಲೀಸ್ ತನಿಖೆಯಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ನಾಗರಾಜು ಮತ್ತೊಮ್ಮೆ ಜೈಲು ಪಾಲಾದರು.

ಈ ಹಿಂದೆ ಹಲವು ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದ್ದ ಎಂಬಿಎ ಪದವೀಧರ ನಾಗರಾಜು, ಕ್ರಿಕೆಟ್ ನಲ್ಲಿ ಮಿಂಚಿದ್ದು, ತಾನೊಬ್ಬನೇ ರಣಜಿ ಕ್ರಿಕೆಟಿಗನ ಮಟ್ಟಕ್ಕೆ ಏರಿದ್ದ. ತನಗೊಂದು ವಿಶೇಷ ಮನ್ನಣೆ ಸಿಕ್ಕಿತು. ಒಳ್ಳೆಯ ಕೆರಿಯರ್ ಗ್ರೋತ್​ ಇರುವಾಗ ಕುಕೃತಿಯನ್ನು ಎಸಗಿದ್ದಾನೆ. ನಾಗರಾಜು ವಿರುದ್ಧ ಎರಡೂ ತೆಲುಗು ರಾಜ್ಯಗಳಲ್ಲಿ ಸುಮಾರು 30 ಪ್ರಕರಣಗಳು ದಾಖಲಾಗಿವೆ ಇದುವರೆಗೂ. ಇದರಲ್ಲಿ 25 ವಂಚನೆ ಪ್ರಕರಣಗಳಿವೆ. ಎಪಿ ಮುಖ್ಯಮಂತ್ರಿ ಒಎಸ್​ಡಿ ಎಂದೂ, ತೆಲಂಗಾಣ ಸಚಿವ ಕೆಟಿಆರ್ ಅವರ ಪಿಎ ಎಂದು… ದೇಶದ ಹಲವು ಕಾರ್ಪೊರೇಟ್ ಕಂಪನಿಗಳಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿ ಅಕ್ರಮ ವಸೂಲಿ ಮಾಡಿದ್ದಾನೆ ನಾಗರಾಜು.

ಇದನ್ನೂ ಓದಿ: ಕೋಲಾರದಿಂದ ಹೊರಟು ನಾಪತ್ತೆಯಾಗಿದ್ದ ಟೊಮೆಟೊ ಲಾರಿ ಗುಜರಾತ್​ನಲ್ಲಿ ಪತ್ತೆ

ನಾಗರಾಜು ಹೆಸರಾಂತ ವ್ಯಕ್ತಿಗಳ ಹೆಸರು ಹೇಳಿ ಸರಣಿ ವಂಚನೆ ಮಾಡುತ್ತಿದ್ದ. ಹಾಲಿ ರಣಜಿ ಕ್ರಿಕೆಟಿಗರು ಮಾಜಿ ಕ್ರಿಕೆಟಿಗ ಎಂಎಸ್‌ಕೆ ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಿ ಹಲವು ಕಾರ್ಪೊರೇಟ್ ಕಂಪನಿಗಳಿಗೆ ಕರೆ ಮಾಡಿದ್ದಾರೆ. ನಾಗರಾಜ್ ಪ್ರಾಯೋಜಕತ್ವಕ್ಕೆ ದೊಡ್ಡ ದೊಡ್ಡ ಮೊತ್ತ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ. ಅನೇಕ ಸಂತ್ರಸ್ತರು ಅನೇಕ ದೂರುಗಳನ್ನು ನೀಡಿದ್ದಾರೆ. ಆದರೂ ಈತ ತಾನೂ ಏನೂ ಕಮ್ಮಿ ಇಲ್ಲ ಎಂದು ಅಪರಾಧಗಳನ್ನು ಮಾಡುತ್ತಲೇ ಇದ್ದ. ಜಾಮೀನಿನ ಮೇಲೆ ಹೊರಬಂದು ಮತ್ತೆ ವಂಚನೆ ಮಾಡುವುದು ಈತನಿಗೆ ದಿನಚರಿಯಾಗಿದೆ. ಈ ವರ್ಷದ ಜನವರಿಯಲ್ಲಿ ಗಾಂಜಾ ಅಕ್ರಮ ವೆಸಗಿದ್ದಾನೆ. ಸಾಗಿಸುತ್ತಿದ್ದಾಗ ತೆಕ್ಕಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆ ಜಂಟಿ ಶ್ರೀಕಾಕುಳಂ ಜಿಲ್ಲೆಯ ರಾಜಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ: Toddler: ಆರು ತಿಂಗಳಲ್ಲಿ ನೊಬೆಲ್ ವಿಶ್ವ ದಾಖಲೆ ತನ್ನದಾಗಿಸಿಕೊಂಡ ಮುದ್ದು ಮಗು.. ಏನು ಸಾಧನೆ ಮಾಡಿದ್ದಾನೆ ಗೊತ್ತಾ?

ಆರಂಭದಲ್ಲಿ ಅವರ ಆಟದ ಶೈಲಿಯನ್ನು ಕಂಡು ಅನೇಕ ಪ್ರಾಯೋಜಕರು ಆರ್ಥಿಕ ನೆರವು ನೀಡಿದರು. ಇವರೊಂದಿಗೆ ವೃತ್ತಿಯನ್ನು ಸುಧಾರಿಸಿಕೊಳ್ಳಬೇಕಾದ ನಾಗರಾಜು ಐಷಾರಾಮಿಗೆ ಒಗ್ಗಿಕೊಂಡು ವಂಚಕನಾಗಿದ್ದಾನೆ.

ಹೆಚ್ಚಿನ ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ