ರಸ್ತೆಯಲ್ಲಿದ್ದ ನವಜಾತ ಶಿಶುವನ್ನು ರಾತ್ರಿ ಇಡೀ ತನ್ನ ಮಗುವಿನಂತೆ ಜೋಪಾನ ಮಾಡಿದ ಬೀದಿ ನಾಯಿಗಳು

ಸಾಮಾನ್ಯವಾಗಿ ಬೀದಿನಾಯಿ(Stray Dog)ಗಳೆಂದರೆ ಕಚ್ಚುವುದು, ಬೇರೆಯವರಿಗೆ ತೊಂದರೆ ಕೊಡುವುದು ಎಂದಷ್ಟೇ ನಮ್ಮ ಮನಸ್ಸಿನಲ್ಲಿ ಆಳವಾಗಿ ಹೊಕ್ಕಿದೆ. ಆದರೆ ಆಗಷ್ಟೇ ಹುಟ್ಟಿದ್ದ ನವಜಾತ ಶಿಶುವನ್ನು ಒಂದು ಚೂರು ಮುಟ್ಟದೆ ತಾಯಿ ರೀತಿಯಲ್ಲಿ ಗುಂಪುಗೂಡಿ ಅದನ್ನು ರಕ್ಷಣೆ ಮಾಡಿರುವುದನ್ನು ಎಲ್ಲಾದರೂ ಕಂಡಿದ್ದೀರಾ. ಅಂಥಾ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಕಾರ್ಮಿಕರರುವ ವಸಾಹತು ಪ್ರದೇಶದ ಶೌಚಾಲಯದ ಹೊರಗೆ ಕೆಲವು ಗಂಟೆಗಳ ಹಿಂದೆ ಜನಿಸಿದ್ದ ಶಿಶು ಪತ್ತೆಯಾಗಿದೆ.

ರಸ್ತೆಯಲ್ಲಿದ್ದ ನವಜಾತ ಶಿಶುವನ್ನು ರಾತ್ರಿ ಇಡೀ ತನ್ನ ಮಗುವಿನಂತೆ ಜೋಪಾನ ಮಾಡಿದ ಬೀದಿ ನಾಯಿಗಳು
ಸಾಂದರ್ಭಿಕ ಚಿತ್ರ

Updated on: Dec 03, 2025 | 7:24 AM

ನಾಡಿಯಾ, ಡಿಸೆಂಬರ್ 03: ಸಾಮಾನ್ಯವಾಗಿ ಬೀದಿನಾಯಿ(Stray Dog)ಗಳೆಂದರೆ ಕಚ್ಚುವುದು, ಬೇರೆಯವರಿಗೆ ತೊಂದರೆ ಕೊಡುವುದು ಎಂದಷ್ಟೇ ನಮ್ಮ ಮನಸ್ಸಿನಲ್ಲಿ ಆಳವಾಗಿ ಹೊಕ್ಕಿದೆ. ಆದರೆ ಆಗಷ್ಟೇ ಹುಟ್ಟಿದ್ದ ನವಜಾತ ಶಿಶುವನ್ನು ಒಂದು ಚೂರು ಮುಟ್ಟದೆ ತಾಯಿ ರೀತಿಯಲ್ಲಿ ಗುಂಪುಗೂಡಿ ಅದನ್ನು ರಕ್ಷಣೆ ಮಾಡಿರುವುದನ್ನು ಎಲ್ಲಾದರೂ ಕಂಡಿದ್ದೀರಾ. ಅಂಥಾ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಕಾರ್ಮಿಕರಿರುವ ವಸಾಹತು ಪ್ರದೇಶದ ಶೌಚಾಲಯದ ಹೊರಗೆ ಕೆಲವು ಗಂಟೆಗಳ ಹಿಂದೆ ಜನಿಸಿದ್ದ ಶಿಶು ಪತ್ತೆಯಾಗಿದೆ.

ಮಗು ಹುಟ್ಟಿದ ಬಳಿಕ ಅದರ ಮೈಮೇಲಿದ್ದ ರಕ್ತವನ್ನು ಕೂಡ ಯಾರೂ ಒರೆಸಿರಲಿಲ್ಲ, ಮಗುವಿಗೆ ಬಟ್ಟೆ ಇರಲಿಲ್ಲ, ಮೈಮೇಲೆ ಯಾವುದೇ ಬೆಚ್ಚನೆಯ ವಸ್ತುಗಳು ಕೂಡ ಇರಲಿಲ್ಲ.ಆದರೆ ಮಗು ಒಂಟಿಯಾಗಿರಲಿಲ್ಲ, ಅದರ ರಕ್ಷಣೆಗೆ ನಾಲ್ಕೈದು ನಾಯಿಗಳು ಕೂಡಾ ಇದ್ದವು.

ಇದೊಂದು ಪವಾಡದಂತಿತ್ತು. ಜನರು ಪ್ರತಿದಿನ ಓಡಿಸುವ ನಾಯಿಗಳ ಗುಂಪೇ ಈ ನವಜಾತ ಶಿಶುವಿನ ರಕ್ಷಣೆಗೆ ನಿಂತಿತ್ತು, ನಾಯಿಯ ಗುಂಪು ಮಗುವಿನ ಸುತ್ತಲೂ ಕುಳಿತು ಅದಕ್ಕೆ ರಕ್ಷಣೆ ನೀಡಿದ್ದವು. ಬೊಗಳಲೂ ಇಲ್ಲ, ಅಲ್ಲಿಂದ ಕದಲಲೂ ಇಲ್ಲ ರಾತ್ರಿ ಇಡೀ ಕುಳಿತು ಕಾವಲು ಕಾದಿವೆ. ಬೆಳಗಿನ ಬೆಳಕನ್ನು ಹೊರತುಪಡಿಸಿ ರಾತ್ರಿ ಇಡೀ ನಾಯಿಗಳು ಯಾರನ್ನೂ ಅಥವಾ ಯಾವ ಪ್ರಾಣಿಯನ್ನೂ ಹತ್ತಿರ ಬಿಡಲಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು

ನಮಗೆ ಎಚ್ಚರವಾದಾಗ ಈ ಘಟನೆ ನೋಡಿ ರೋಮಾಂಚನವಾಯಿತು ಎಂದು ಸುಕ್ಲಾ ಮಂಡಲ್ ಎಂಬುವವರು ತಿಳಿಸಿದ್ದಾರೆ. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ. ಅವು ಎಚ್ಚರವಾಗಿಯೇ ಇದ್ದವು, ತಾಯಿಯಂತೆ ಶಿಶುವನ್ನು ಕಾಳಜಿ ಮಾಡಿದ್ದವು. ಮತ್ತೊಬ್ಬ ನಿವಾಸಿ ಸುಭಾಷ್ ಮಾತನಾಡಿ, ಬೆಳಗ್ಗೆ ಮಗು ಅಳು ಕೇಳಿ ಎಚ್ಚರವಾಗಿತ್ತು.ಯಾರದ್ದೋ ಮನೆಯಲ್ಲಿ ಮಗುವಿಗೆ ಅನಾರೋಗ್ಯ ಉಂಟಾಗಿರಬೇಕು ಅದಕ್ಕಾಗಿ ಅಳುತ್ತಿದೆ ಎಂದೇ ಭಾವಿಸಿದ್ದೆ ಆದರೆ ಮಗುವಿನ ಸುತ್ತಲೂ ಹೀಗೆ ನಾಯಿಗಳು ಕಾವಲು ಕಾಯುತ್ತವೆ ಎಂದು ಒಮ್ಮೆಯೋ ಆಲೋಚಿಸರಲಿಲ್ಲ.

ಶುಕ್ಲಾ ಅವರು ಹತ್ತಿರ ಬಂದಾಗ ನಾಯಿಗಳು ಸ್ವಲ್ಪ ದೂರ ಸರಿದವು. ಅವರು ಮಗುವನ್ನು ದುಪಟ್ಟಾದಲ್ಲಿ ಸುತ್ತಿ ಬಳಿಕ ಅಕ್ಕಪಕ್ಕದ ಮನೆಯವರನ್ನು ಸಹಾಯಕ್ಕಾಗಿ ಕರೆದರು. ಶಿಶುವನ್ನು ಮೊದಲು ಮಹೇಶ್​ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದರು. ತಲೆಯ ಮೇಲಿನ ರಕ್ತ ಮಗು ಹುಟ್ಟಬೇಕಿದ್ದಾಗ ಆಗಿದ್ದಾಗಿರಬಹುದು ಎಂದು ಹೇಳಿದ್ದಾರೆ.ರಾತ್ರಿ ಹೊತ್ತು ಯಾರೋ ಮಗುವನ್ನು ಅಲ್ಲಿ ಬಿಟ್ಟು ಹೋಗಿರಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:23 am, Wed, 3 December 25