ಮಾರ್ಗ ಮಧ್ಯದಲ್ಲಿ ಕೆಟ್ಟು ನಿಂತ ಚೆನ್ನೈ ಮೆಟ್ರೋ; ಸುರಂಗದ ಮೂಲಕ ನಡೆದುಹೋದ ಪ್ರಯಾಣಿಕರು
ಇಂದು (ಡಿಸೆಂಬರ್ 2) ಚೆನ್ನೈನ ಮೆಟ್ರೋ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಮೆಟ್ರೋ ಸ್ಥಗಿತಗೊಂಡಿತು. ರೈಲು ಹಠಾತ್ತನೆ ಸ್ಥಗಿತಗೊಂಡ ನಂತರ ಚೆನ್ನೈ ಮೆಟ್ರೋ ರೈಲಿನಲ್ಲಿ ಚಲಿಸುತ್ತಿದ್ದ ಬೆಳಗಿನ ಪ್ರಯಾಣಿಕರು ಸೆಂಟ್ರಲ್ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವಿನ ಸುರಂಗದ ಮೂಲಕ ಸುಮಾರು 300 ಮೀಟರ್ ನಡೆಯಬೇಕಾಯಿತು. ಯಾವುದೇ ಬ್ಯಾಟರಿ ಬ್ಯಾಕಪ್ ಇರಲಿಲ್ಲ. ರೈಲಿನಲ್ಲಿದ್ದ ಎರಡೂ ನಿಯಂತ್ರಣ ಬ್ಯಾಟರಿ ಹಾಳಾಗಿತ್ತು. ಹೀಗಾಗಿ, ಈ ಘಟನೆ ಸಂಭವಿಸಿದೆ.

ಚೆನ್ನೈ, ಡಿಸೆಂಬರ್ 2: ಇಂದು ಚೆನ್ನೈ ಮೆಟ್ರೋ ರೈಲು (Metro Train) ದೋಷದಿಂದಾಗಿ ಮಾರ್ಗ ಮಧ್ಯದಲ್ಲಿ ಕೆಟ್ಟು ನಿಂತಿತು. ಆ ಮೆಟ್ರೋ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ 20 ಪ್ರಯಾಣಿಕರು ಎರಡು ನಿಲ್ದಾಣಗಳ ನಡುವೆ ಸಿಲುಕಿಕೊಂಡರು. ಆದರೆ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೈಕೋರ್ಟ್ ಮತ್ತು ಸೆಂಟ್ರಲ್ ಸ್ಟೇಷನ್‌ಗಳ ನಡುವೆ ನಡೆದ ಘಟನೆಯು ಪ್ರಯಾಣಿಕರಲ್ಲಿ ಆತಂಕ ಮೂಡಿಸಿತು. ನಂತರ ಅವರನ್ನು ರಕ್ಷಿಸಲಾಯಿತು. ಇಂದು ಬೆಳಿಗ್ಗೆ 6.30ರಿಂದ ರೈಲು ಸೇವೆಗಳು ಪುನರಾರಂಭಗೊಂಡವು.
ಮೆಟ್ರೋ ರೈಲಿನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ, ಹೈಕೋರ್ಟ್ ನಿಲ್ದಾಣ ಮತ್ತು ಪುರಚ್ಚಿ ತಲೈವರ್ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ಮೆಟ್ರೋ ಸ್ಟೇಷನ್ ನಡುವೆ ಮೆಟ್ರೋ ರೈಲು ಸ್ಥಗಿತಗೊಂಡಿತು. ತಕ್ಷಣ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು. ಪ್ರಯಾಣಿಕರು ಸುರಂಗ ಮಾರ್ಗದ ಮೂಲಕ ನಡೆದುಕೊಂಡು ಹೊರಗೆ ಬಂದರು ಎಂದು ಚೆನ್ನೈ ಮೆಟ್ರೋ ರೈಲು ಪ್ರಕಟಣೆಯಲ್ಲಿ ತಿಳಿಸಿದೆ.
muskuraiye aap chennai metro mein chal rahe hain pic.twitter.com/lZ5JEumuWW
— vedika (@vedikabaisa) December 2, 2025
ಇದನ್ನೂ ಓದಿ: ದೆಹಲಿ: ವಾರದೊಳಗೆ ಎರಡನೇ ಘಟನೆ, ಮೆಟ್ರೋ ರೈಲಿನೆದುರು ಹಾರಿ ಪ್ರಾಣಬಿಟ್ಟ ವ್ಯಕ್ತಿ
ಬ್ಲೂ ಲೈನ್‌ನಲ್ಲಿರುವ ವಿಮಾನ ನಿಲ್ದಾಣ ಮತ್ತು ವಿಮ್ಕೊ ನಗರ ಡಿಪೋ ನಡುವಿನ ಮೆಟ್ರೋ ರೈಲು ಸೇವೆಗಳ ಸಾಮಾನ್ಯ ಕಾರ್ಯಾಚರಣೆ ಪುನರಾರಂಭವಾಯಿತು. ಗ್ರೀನ್ ಲೈನ್‌ನಲ್ಲಿರುವ ಸೆಂಟ್ರಲ್ ಮೆಟ್ರೋದಿಂದ ಸೇಂಟ್ ಥಾಮಸ್ ಮೌಂಟ್‌ವರೆಗೆ ಸಹ ಸಾಮಾನ್ಯ ವೇಳಾಪಟ್ಟಿಯ ಪ್ರಕಾರ ಚಾಲನೆಯಲ್ಲಿದೆ ಎಂದು ಚೆನ್ನೈ ಮೆಟ್ರೋ ರೈಲು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನ ಪೋಸ್ಟ್‌ನಲ್ಲಿ ತಿಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




