ದೆಹಲಿ: ವಾರದೊಳಗೆ ಎರಡನೇ ಘಟನೆ, ಮೆಟ್ರೋ ರೈಲಿನೆದುರು ಹಾರಿ ಪ್ರಾಣಬಿಟ್ಟ ವ್ಯಕ್ತಿ
ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ರೈಲಿನೆದುರು ಹಾರಿ ಪ್ರಾಣ ಬಿಟ್ಟಿರುವ ಘಟನೆ ವರದಿಯಾಗಿದೆ. 37 ವರ್ಷದ ಹೇಮಂತ್ ಎಂಬುವವರು ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ.ಅವರು ರೋಹಿಣಿ ಸೆಕ್ಟರ್ -2ರ ನಿವಾಸಿ.ಆದರೆ, ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. ಪೊಲೀಸರ ಪ್ರಕಾರ ಸಂಜೆ 5.30ರ ಸುಮಾರಿಗೆ ರೆಡ್ ಲೈನ್‌ನಲ್ಲಿರುವ ನಿಲ್ದಾಣದ ಗೇಟ್ ಸಂಖ್ಯೆ 3 ರ ಬಳಿ ಪ್ರಯಾಣಿಕರೊಬ್ಬರು ರೈಲಿನ ಮುಂದೆ ಹಾರಿದ್ದಾರೆ ಎಂದು ಪಿಸಿಆರ್ ಕರೆ ಬಂದಿತ್ತು.

ನವದೆಹಲಿ, ನವೆಂಬರ್ 25: ದೆಹಲಿಯ ರೋಹಿಣಿ ವೆಸ್ಟ್ ಮೆಟ್ರೋ ನಿಲ್ದಾಣದಲ್ಲಿ ರೈಲಿನೆದುರು ಹಾರಿ ವ್ಯಕ್ತಿಯೊಬ್ಬ ಪ್ರಾಣ ಬಿಟ್ಟಿರುವ ಘಟನೆ ವರದಿಯಾಗಿದೆ. 37 ವರ್ಷದ ಹೇಮಂತ್ ಎಂಬುವವರು ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ.ಅವರು ರೋಹಿಣಿ ಸೆಕ್ಟರ್ -2ರ ನಿವಾಸಿ.ಆದರೆ, ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.
ಪೊಲೀಸರ ಪ್ರಕಾರ ಸಂಜೆ 5.30ರ ಸುಮಾರಿಗೆ ರೆಡ್ ಲೈನ್‌ನಲ್ಲಿರುವ ನಿಲ್ದಾಣದ ಗೇಟ್ ಸಂಖ್ಯೆ 3 ರ ಬಳಿ ಪ್ರಯಾಣಿಕರೊಬ್ಬರು ರೈಲಿನ ಮುಂದೆ ಹಾರಿದ್ದಾರೆ ಎಂದು ಪಿಸಿಆರ್ ಕರೆ ಬಂದಿತ್ತು. ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ ಗಾಯಾಳುವನ್ನು ಈಗಾಗಲೇ ಆಂಬ್ಯುಲೆನ್ಸ್ನಲ್ಲಿ ಬಿಎಸ್‌ಎ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎನ್ನುವ ವಿಚಾರ ತಿಳಿದಿತ್ತು.
ಹೇಮಂತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ನೇಗಿ ರಿಥಾಲಾದಿಂದ ಬರುತ್ತಿದ್ದ ರೈಲಿನ ಮುಂದೆ ಹಾರಿದ್ದರು. ಗಾಜಿಯಾಬಾದ್‌ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳವನ್ನು ಪರಿಶೀಲಿಸಿದರು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು.
ಮತ್ತೊಂದು ಘಟನೆ ವಿದ್ಯಾರ್ಥಿ ಆತ್ಮಹತ್ಯೆ ಅಮ್ಮಾ ನಿನ್ನನ್ನು ನೋಯಿಸಿದ್ದೇನೆ ಕ್ಷಮಿಸಿಬಿಡು ಎಂದು ಪತ್ರ ಬರೆದಿಟ್ಟು ಬಾಲಕನೊಬ್ಬ ದೆಹಲಿ ಮೆಟ್ರೋ ಎದುರು ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಕಳೆದ ಮಂಗಳವಾರ ಈ ಘಟನೆ ನಡೆದಿತ್ತು. ಬೆಳಗ್ಗೆ ಮನೆಯಿಂದ ಹೊರಟಿದ್ದ 16 ವರ್ಷದ ಬಾಲಕ ಡ್ರಾಮಾ ಕ್ಲಬ್ನಲ್ಲಿ ಮತ್ತೊಂದು ದಿನ ಕಳೆಯಲು ಇಷ್ಟಪಟ್ಟಿದ್ದ, ಆದರೆ ಅಂದೇ ಮಧ್ಯಾಹ್ನ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಅಂಗಾಂಗಗಳನ್ನು ದಾನ ಮಾಡುವಂತೆ ಮತ್ತು ಯಾವುದೇ ಮಗು ತಾನು ಅನುಭವಿಸಿದ ನೋವನ್ನು ಅನುಭವಿಸಬಾರದು ಎಂದು ಆತ್ಮಹತ್ಯೆ ಪತ್ರವನ್ನು ಬರೆದಿಟ್ಟಿದ್ದಾನೆ.
ಮತ್ತಷ್ಟು ಒದಿ: ಅಮ್ಮಾ ನಿನ್ನನ್ನು ನೋಯಿಸಿದ್ದೇನೆ ಕ್ಷಮಿಸಿಬಿಡು, ದೆಹಲಿ ಮೆಟ್ರೋ ಎದುರು ಹಾರಿ ಪ್ರಾಣಬಿಟ್ಟ ಬಾಲಕ
ಖಾಸಗಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಮಧ್ಯಾಹ್ನ 2.34 ಕ್ಕೆ ಮಧ್ಯ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್‌ನಿಂದ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಹತ್ತಿರದಲ್ಲಿದ್ದ ಬಿಎಲ್ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಂತಿಮವಾಗಿ ಆತ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು. ಆತ್ಮಹತ್ಯೆ ಪತ್ರದಲ್ಲಿ ಶಿಕ್ಷಕರ ಬಗ್ಗೆ ಮಾತನಾಡಿದ್ದು, ಸಾಕಷ್ಟು ದಿನಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬರೆದಿದ್ದಾನೆ.
ಶಾಲೆಯಲ್ಲಿ ಆತನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು, ಸಾಕಷ್ಟು ದಿನಗಳಿಂದ ಆತ ಮಾನಸಿಕವಾಗಿ ಕುಗ್ಗಿ ಹೋಗಿದ್ದ,ಶಿಕ್ಷಕರು ಪ್ರತಿಯೊಂದು ಸಣ್ಣ ವಿಷಯಕ್ಕೂ ಅವನನ್ನು ಗದರಿಸುತ್ತಿದ್ದರು ಮತ್ತು ಭಾವನಾತ್ಮಕವಾಗಿ ನೋವುಂಟು ಮಾಡುತ್ತಿದ್ದರು.ನಾವು ಹಲವು ಬಾರಿ ದೂರು ನೀಡಿದ್ದೇವೆ, ಆದರೆ ಅದು ನಿಲ್ಲಲೇ ಇಲ್ಲ ಎಂದು ತಂದೆ ಪಿಟಿಐಗೆ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




